ನಟ ಯುವರಾಜ್‌ಕುಮಾರ್‌ ಚೊಚ್ಚಲ ಸಿನಿಮಾದ ಟೈಟಲ್‌ ರಿವೀಲ್‌ ಮಾಡಿದ ಹೊಂಬಾಳೆ ಫಿಲ್ಮ್ಸ್‌

ಸ್ಯಾಂಡಲ್‌ವುಡ್‌ನ ನಗುಮುಖದ ಸರದಾರ ಪುನೀತ್‌ ರಾಜ್‌ಕುಮಾರ್‌ ಅಗಲಿಕೆ ನೋವು ಇನ್ನು ಅಭಿಮಾನಿಗಳಲ್ಲಿ ಮಾಸಿಲ್ಲ. ಯಾಕೆಂದರೆ ಇನ್ನು ಮುಂದೆ ತಮ್ಮ ನೆಚ್ಚಿನ ನಟನ ಸಿನಿಮಾವನ್ನು ನೋಡಲು ಸಾಧ್ಯವಿಲ್ಲ ಎನ್ನುವ ನೋವು ಸದಾ ಅವರನ್ನು ಕಾಡುತ್ತಿದೆ. ಹಾಗಾಗಿ ನಟ ಪುನೀತ್‌ ಅವರ ಸ್ಥಾನದಲ್ಲಿ ಜೂ. ಪವರ್‌ಸ್ಟಾರ್‌ ಆಗಿ ನಟ ಯುವರಾಜ್‌ಕುಮಾರ್‌ನ್ನು ನೋಡಲು ಬಯಸುತ್ತಿದ್ದು, ಅವರಿಗಾಗಿ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಬಳಿ ಅವರಿಗಾಗಿ ಸಿನಿಮಾ ಮಾಡಿ ಎಂದು ಸತತವಾಗಿ ಹೇಳುತ್ತಾ ಬಂದಿದ್ದಾರೆ. ಅದರಂತೆ ಸಂತೋಷ್‌ ಆನಂದ್‌ರಾಮ್‌ ಯುವರಾಜ್‌ಕುಮಾರ್‌ಗಾಗಿ ಸಿನಿಮಾವನ್ನು ನಿರ್ದೇಶಿಸಿದ್ದು, ಇಂದು ( ಮಾರ್ಚ್ 3 ) ಸಂಜೆ 6.55ಕ್ಕೆ ಸಿನಿಮಾ ಟೈಟಲ್‌ ರಿವೀಲ್‌ ಮಾಡಿದ್ದಾರೆ. ಇನ್ನು ಯುವರಾಜ್‌ಕುಮಾರ್‌ ಅಭಿನಯದ ಚೊಚ್ಚಲ ಸಿನಿಮಾಕ್ಕೆ “ಯುವ” ಟೈಟಲ್‌ ಎಂದು (Yuva Title Teaser) ಹೊಂಬಾಳೆ ಫಿಲ್ಮ್ಸ್‌ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಇನ್ನು ಭಾರತ ಸಿನಿರಂಗದಲ್ಲೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಯುವರಾಜ್‌ಕುಮಾರ್‌ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯವರು ನಟ ಯುವರಾಜ್‌ಕುಮಾರ್‌ ಅಭಿನಯದ ಚೊಚ್ಚಲ ಸಿನಿಮಾದ ಟೈಟಲ್ ಅನ್ನು ವಿಶೇಷವಾಗಿ ಟೀಸರ್ ಮೂಲಕ ಘೋಷಿಸಿದ್ದಾರೆ. ಹೊಂಬಾಳೆ ಸಂಸ್ಥೆ ಅವರು ತಮ್ಮ ಟ್ವೀಟ್‌ನಲ್ಲಿ,”ಯುವ ಪರ್ವ ಆರಂಭ, 𝐓𝐇𝐄 𝐑𝐀𝐆𝐄 𝐁𝐄𝐆𝐈𝐍𝐒” ಎಂದು ಟೈಟಲ್‌ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಟೈಟಲ್‌ ಟೀಸರ್‌ನಲ್ಲಿ ಸಿನಿಮಾ ರಿಲೀಸ್‌ ಡೇಟ್‌ನ್ನು ಕೂಡ ಅನೌನ್ಸ್‌ ಮಾಡಿದ್ದಾರೆ. ಬೆಂಗಳೂರು ಕುರುಬರಹಳ್ಳಿಯಲ್ಲಿ, ಜೆಪಿ ನಗರದ ಸಿದ್ಧಲಿಂಗೇಶ್ವರ ಥಿಯೇಟರ್ ಹಾಗೂ ಹೊಸಪೇಟೆ ಸೇರಿದಂತೆ ಹಲವೆಡೆ ಟೀಸರ್ ಅನ್ನು ಪ್ರಸಾರ ಮಾಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ : ನಟ ಯುವರಾಜ್‌ಕುಮಾರ್‌ ಚೊಚ್ಚಲ ಸಿನಿಮಾದ ಟೈಟಲ್‌ ಯಾವುದು ಗೊತ್ತಾ ?

ಇದನ್ನೂ ಓದಿ : Oscars Awards 2023 : ಆಸ್ಕರ್‌ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ನಿರೂಪಕರು ಯಾರಾರು ಇದ್ದಾರೆ ಗೊತ್ತಾ ?

ಇದನ್ನೂ ಓದಿ : ನಟ ಶಾರೂಖ್ ಖಾನ್ ಮನೆಗೆ ಅಕ್ರಮ ಪ್ರವೇಶ : ಗುಜರಾತ್ ಮೂಲದ ಇಬ್ಬರ ಬಂಧನ

‌ಇನ್ನುಳಿದಂತೆ ದೊಡ್ಮನೆ ಕುಡಿ ಯುವರಾಜ್‌ಕುಮಾರ್‌ ನಟನೆಯ ಚೊಚ್ಚಲ ಸಿನಿಮಾಕ್ಕೆ ನಾಯಕಿ ಯಾರು ಎನ್ನುವ ಕುತೂಹಲ ಮೊದಲಿನಿಂದಲೂ ಇತ್ತು. ಮೊದಲಿಗೆ ಈ ಸಿನಿಮಾಕ್ಕೆ ಮಲಯಾಳಂನ ಚೆಲುವೆ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಲಿದ್ದಾರೆ ಎಂಬ ಗುಸು ಗುಸು ಹರಡಿತ್ತು, ಇತ್ತೀಚೆಗಷ್ಟೆ ರುಕ್ಮಿಣಿ ವಸಂತ್ ಸಿನಿಮಾಕ್ಕೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ಆದರೆ ಈ ಎರಡೂ ಸಹ ಗಾಳಿಸುದ್ದಿಯಾಗಿದ್ದು, ಸಿನಿತಂಡ ಯಾವ ನಟಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಿದೆ ಎಂಬ ಕುತೂಹಲವನ್ನು ಸಿನಿಪ್ರೇಕ್ಷಕರಲ್ಲಿ ಕಾಪಾಡಿಕೊಂಡಿದೆ.

Yuva Title Teaser : Hombale Films Revealed The Title Of Actor Yuvarajkumar’s Debut Movie

Comments are closed.