ಕನ್ನಡ ಕಿರುತೆರೆಯಲ್ಲಿ ನೇತಾಜಿ ಜೀವನ ಚರಿತ್ರೆ : ಜೂ.7ರಿಂದ ಮೊಳಗಲಿಗೆ ಸ್ವಾತಂತ್ರ್ಯದ ಕಿಚ್ಚು

ನೇತಾಜಿ ಸುಭಾಷ್ ಚಂದ್ರ ಬೋಸ್. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡಲು ತನ್ನ ಪ್ರಾಣವನ್ನೇ ಮುಡಿಪಾಗಿಟ್ಟ ಸ್ವಾತಂತ್ರ್ಯ ಹೋರಾಟ ಗಾರರು. ಇಂತಹ ನೇತಾಜಿ ಅವರ ಜೀವನ ಚರಿತ್ರೆ ಕನ್ನಡ ಕಿರಿತೆರೆಯಲ್ಲಿ ಪ್ರಸಾರವಾಗಲಿದೆ.

ಒರಿಸ್ಸಾದ ಕಟಕ್​ನಲ್ಲಿ ಜನಿಸಿದ ನೇತಾಜಿ‌ ಸುಭಾಷ್ ಚಂದ್ರ ಬೋಸ್ ಅವರು ತನ್ನ ತಂದೆಯ ಆಸೆಯಂತೆ ಇಂಡಿಯನ್ ಸಿವಿಲ್ ಸರ್ವೀಸ್ ಸೇರಲು ಬ್ರಿಟನ್ನಿಗೆ ತೆರಳಿದ್ದರು. ಆದರೆ ಅಲ್ಲಿಂದ ವಾಪಾಸಾದ ನೇತಾಜಿ ಅವರು ಸ್ವದೇಶಕ್ಕೆ ಹಿಂದಿರುಗಿ ಸ್ವಾತಂತ್ರ್ಯ ಹೋರಾಟದಲ್ಲಿ  ಧುಮುಕಿ ದರು. ‌ಮಹಾತ್ಮ ಗಾಂಧಿಜೀಯವರ ಅಹಿಂಸಾ ಹೋರಾಟ ವಿರೋಧಿಸಿ ಸ್ವಂತ ಸೇನೆ ಕಟ್ಟಿದರು.

ಭಾರತಾಂಬೆಗೆ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಮುಕ್ತಿ ದೊರಕಿಸುವ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವತಃ ಸೈನ್ಯ ಕಟ್ಟಿದ ಧೀರ ನಾಯಕನ ಐತಿಹಾಸಿಕ ಕಥೆಯನ್ನು ಧಾರಾವಾಹಿಯಲ್ಲಿ ಹೇಳಲಾಗು ತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಹಾದಿ ತುಳಿದ ಅವರು ಜರ್ಮನಿಯ ನೆರವಿನೊಂದಿಗೆ “ಇಂಡಿಯನ್ ನ್ಯಾಷನಲ್ ಆರ್ಮಿ” ಸ್ಥಾಪಿಸಿದ್ದರು. ಆದರೆ ನೇತಾಜಿ ಅವರ ಸಾವಿನ ಬಗೆಗಿನ ಗೊಂದಲ,‌ ವಿವಾದಕ್ಕೆ ಮಾತ್ರ ಇಂದಿಗೂ ಮುಕ್ತಿ ದೊರಕಿಲ್ಲ.

https://www.facebook.com/watch/?v=793798544612045

ಜೂನ್ 7 ರಿಂದ ಜೀ ಕನ್ನಡ ವಾಹಿಯಲ್ಲಿ “ನೇತಾಜಿ ಸುಭಾಷ್ ಚಂದ್ರ ಬೋಸ್” ಅನ್ನೋ ಹೊಸ ಧಾರಾವಾಹಿ ಪ್ರಸಾರ ಗೊಳ್ಳಲಿದೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಇದೊಂದು ಹೊಸ ಪ್ರಯತ್ನ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಆಂಬೇಡ್ಕರ್ ಅವರ‌ ಜೀವನ ಚರಿತ್ರೆ ಯನ್ನು ಸಾರುವ ಧಾರವಾಹಿ ಕನ್ನಡಿಗರ‌ ಮನಗೆದ್ದಿದೆ. ಇದರ ಬೆನ್ನಲ್ಲೇ ವಾಹಿನಿ ಮತ್ತೊಬ್ಬ ಮಹಾನ್ ನಾಯಕನ ಸಾಹಸವನ್ನು ಜನರ ಮುಂದಿಡಲು ಮುಂದಾಗಿದೆ.

ಇದೀಗ ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಝೀ ಕನ್ನಡ ವಾಹಿನಿ ಸ್ವಾತಂತ್ರ್ಯ ಹೋರಾಟಗಾರರ ಸ್ಪೂರ್ತಿದಾಯಕ  ಕಥೆಯನ್ನು ಜನರ ಮುಂದೆ ಇಡಲು ಮುಂದಾಗಿದೆ.

Comments are closed.