Apr 18 power cut: ಉಡುಪಿ : ಏ 18 ರಂದು ವಿದ್ಯುತ್‌ ವ್ಯತ್ಯಯ : ಎಲ್ಲೆಲ್ಲಿ ವ್ಯತ್ಯಯ, ಇಲ್ಲಿದೆ ಡೀಟೆಲ್ಸ್‌

ಉಡುಪಿ : (Apr 18 power cut) ರಸ್ತೆ ಅಗಲೀಕರಣ ಕಾಮಗಾರಿ ಪ್ರಯುಕ್ತ ವಿದ್ಯುತ್‌ ಕಂಬಗಳನ್ನು ಬದಿಗೆ ಸ್ಥಳಾಂತರಿಸುವ ಕಾರಣದಿಂದ ಏಪ್ರಿಲ್‌ 18 ರಂದು ಮಾರ್ಗ ಮುಕ್ತತೆ ಬೇಕಾಗಿರುವ ಕಾರಣ ಉಡುಪಿ ಜಿಲ್ಲೆಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಎಷ್ಟು ಗಂಟೆಗಳ ಕಾಲ ವಿದ್ಯುತ್‌ ವ್ಯತ್ಯಯವಾಗಲಿದೆ ಎಂಬ ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ.

ಉಡುಪಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಪ್ರಯುಕ್ತ ರಸ್ತೆಯ ಪಕ್ಕದಲ್ಲಿರುವ ವಿದ್ಯುತ್‌ ಕಂಬಗಳನ್ನು ಸ್ಥಳಾಂತರ ಮಾಡಬೇಕಿದೆ. ಈ ಹಿನ್ನಲೆಯಲ್ಲಿ ಮಾರ್ಗ ಮುಕ್ತತೆ ಅಗತ್ಯವಿರುವ ಕಾರಣ ಏಪ್ರಿಲ್‌ 18 ರಂದು ಉಡುಪಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಕುಂಜಿಬೆಟ್ಟು ಎಂಯುಎಸ್‌ಎಸ್‌ ಫೀಡರಿನ, ಉಡುಪಿ-2 ಉಪಕೇಂದ್ರದಿಂದ ಹೊರಡುವ ಮಿಷನ್‌ ಕಂಪೌಂಡ್‌, ಕೋರ್ಟ್‌ ಬ್ಯಾಂಕ್‌ ರೋಡ್‌, ಕೋರ್ಟ್‌ ರೋಡ್‌, ಕಿನ್ನಿಮುಲ್ಕಿ, ಕೊಳಂಬೆ, ಉಡುಪ ಕೌಂಪೌಂಡ್‌, ಬೈಲೂರು ಮಹಿಷ ಮರ್ಧಿನಿ,ದುರ್ಗಾ ನಗರ, ಬೀಡಿನಗುಡ್ಡೆ, ಚಿಟ್ಟಾಡಿ, ಶೋಭಾ ಬೇಕರಿ ಹಾಗೂ ಒಳಕಾಡು ಪ್ರದೇಶಗಳಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಕುಂಜಿಬೆಟ್ಟು ಎಂಯುಎಸ್‌ಎಸ್‌ ಫೀಡರಿನ, ಉಡುಪಿ-1 ಉಪಕೇಂದ್ರದಿಂದ ಹೊರಡುವ ಉಡುಪಿ ನಗರ ಪ್ರದೇಶಗಳಾದ ಬಡಗುಪೇಟೆ, ಸಿಟಿ ಬಸ್‌ ಸ್ಟ್ಯಾಂಡ್‌ ಏರಿಯಾ, ಮಸೀದಿ ಸುತ್ತಮುತ್ತ ಕಡಿಯಾಳಿ, ಎಂ.ಜಿಎಂ ಎದುರು, ಸಿಟಿ ಸೆಂಟರ್‌ ಮಾಲ್‌ ಹಾಗೂ ನಿಟ್ಟೂರು ಎಂಯುಎಸ್‌ಎಸ್‌ ಫೀಡರಿನ, ಅಂಬಲಪಾಡಿ ಉಪಕೇಂದ್ರದಿಂದ ಹೊರಡುವ ಕನ್ನರ್ಪಾಡಿ, ಕಿನ್ನಿಮುಲ್ಕಿ, ಅಜ್ಜರಕಾಡು, ಎನ್‌.ಜಿ.ಒ ಕಾಲೋನಿ, ಫೈರ್‌ ಸ್ಟೇಷನ್‌ ರಸ್ತೆ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : Violation of Code of Conduct : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ : ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್ ಕಾಂಚನ್ ವಿರುದ್ಧ ದೂರು ದಾಖಲು

ಇದನ್ನೂ ಓದಿ : Bommai temple run : ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ದೇಗುಲಗಳಿಗೆ ಸಿಎಂ ಬೊಮ್ಮಾಯಿ ಭೇಟಿ

Apr 18 power cut: Udupi: Power cut on April 18: Variation everywhere, here are the details

Comments are closed.