MS Dhoni: ಕೊನೆಯ ಓವರ್‌ನಲ್ಲಿ 57 ಸಿಕ್ಸರ್ಸ್, “ತಲಾ” ಧೋನಿಗಿಲ್ಲ ಯಾರೂ ಸರಿಸಾಟಿ

ಚೆನ್ನೈ : ಟೀಮ್ ಇಂಡಿಯಾದ ಮಾಜಿ ನಾಯಕ, ದೇಶಕ್ಕೆ 2 ವಿಶ್ವಕಪ್’ಗಳನ್ನು (Most Sixes in the IPL History) ಗೆಲ್ಲಿಸಿಕೊಟ್ಟಿರುವ ಗ್ರೇಟ್ ಕ್ಯಾಪ್ಟನ್, ಚೆನ್ನೈ ಸೂಪರ್ ಕಿಂಗ್ಸ್ ಸಾರಥಿ ಮಹೇಂದ್ರ ಸಿಂಗ್ ಧೋನಿ (MS Dhoni) ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಮ್ಯಾಚ್ ಫಿನಿಷರ್.

ಕೊನೆಯ ಓವರ್’ನಲ್ಲಿ ಮ್ಯಾಚ್ ಫಿನಿಷ್ ಮಾಡುವುದು ಹೇಗೆ ಎಂಬುದನ್ನು ಜಗತ್ತಿಗೆ ಹೇಳಿಕೊಟ್ಟ ಅಪ್ರತಿಮ ಮ್ಯಾಚ್ ವಿನ್ನರ್ ಎಂ.ಎಸ್ ಧೋನಿ. “20ನೇ ಓವರ್’ನಲ್ಲಿ ತಂಡಕ್ಕೆ 20 ರನ್’ಗಳು ಬೇಕಿದ್ದಾಗ ಧೋನಿ ಕ್ರೀಸ್’ನಲ್ಲಿದ್ದರೆ ಒತ್ತಡ ಬೌಲರ್ ಮೇಲಿರುತ್ತದೆ” ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹಿಂದೊಮ್ಮೆ ಹೇಳಿದ್ದರು. ಇದು ಧೋನಿ ತಾಕತ್ತಿಗೆ ಸಾಕ್ಷಿ. ಐಪಿಎಲ್’ನಲ್ಲಿ ಧೋನಿ ಸ್ಲಾಗ್ ಓವರ್’ಗಳಲ್ಲಿ ಕಿಂಗ್. ಅದರಲ್ಲೂ 20ನೇ ಓವರ್’ನಲ್ಲಿ ಧೋನಿಗೆ ಧೋನಿಯೇ ಸಾಟಿ. 20ನೇ ಓವರ್’ನಲ್ಲಿ ಧೋನಿ ಬಾರಿಸಿದಷ್ಟು ಸಿಕ್ಸರ್’ಗಳನ್ನು ಯಾರೂ ಬಾರಿಸಿಲ್ಲ (Most Sixes in the 20th Over in IPL History).

ಐಪಿಎಲ್’ನಲ್ಲಿ 20ನೇ ಓವರ್’ನಲ್ಲಿ ಧೋನಿ ಇಲ್ಲಿಯವರೆಗೆ 57 ಸಿಕ್ಸರ್’ಗಳನ್ನು ಬಾರಿಸಿ ನಂ.1 ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ, ಹಾಲಿ ಬ್ಯಾಟಿಂಗ್ ಕೋಚ್ ಕೀರನ್ ಪೊಲ್ಲಾರ್ಡ್ ಐಪಿಎಲ್’ನಲ್ಲಿ 20ನೇ ಓವರ್’ನಲ್ಲಿ 33 ಸಿಕ್ಸರ್’ಗಳನ್ನು ಬಾರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ರವೀಂದ್ರ ಜಡೇಜ 26 ಸಿಕ್ಸರ್’ಗಳನ್ನು ಬಾರಿಸಿದ್ದರೆ, ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ 25 ಸಿಕ್ಸರ್ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 23 ಸಿಕ್ಸರ್’ಗಳನ್ನು ಸಿಡಿಸಿದ್ದಾರೆ.

ಐಪಿಎಲ್’ನಲ್ಲಿ 20ನೇ ಓವರ್’ನಲ್ಲಿ ಅತೀ ಹೆಚ್ಚು ಸಿಕ್ಸರ್ಸ್ :
ಎಂ.ಎಸ್ ಧೋನಿ: 57
ಕೀರನ್ ಪೊಲ್ಲಾರ್ಡ್: 33
ರವೀಂದ್ರ ಜಡೇಜ: 26
ಹಾರ್ದಿಕ್ ಪಾಂಡ್ಯ: 25
ರೋಹಿತ್ ಶರ್ಮಾ: 23

ಬುಧವಾರ ಚೆನ್ನೈನ ಚೆಪಾಕ್ ಮೈದಾನದಲ್ಲಿ ಬುಧವಾರ ನಡೆದ ರಾಜಸ್ಥಾನ್ ರಾಯಲ್ಸ್ (Rajastan Royals) ವಿರುದ್ಧದ ಪಂದ್ಯದಲ್ಲಿ ಎಂ.ಎಸ್ ಧೋನಿ 17 ಎಸೆತಗಳಲ್ಲಿ 3 ಸಿಕ್ಸರ್’ಗಳ ನೆರವಿನಿಂದ ಅಜೇಯ 32 ರನ್ ಸಿಡಿಸಿದ್ದರು. ಕೊನೆಯ ಓವರ್’ನಲ್ಲಿ ಗೆಲ್ಲಲು 21 ರನ್’ಗಳು ಬೇಕಿದ್ದಾಗ ಅಬ್ಬರಿಸಿದ್ದ ಧೋನಿ, 20ನೇ ಓವರ್’ನ 2 ಹಾಗೂ 3ನೇ ಎಸೆತಗಳಲ್ಲಿ ಸತತ ಸಿಕ್ಸರ್ ಬಾರಿಸಿದ್ದರು. ಆದರೆ ಕೊನೆಯಲ್ಲಿ ಚೆನ್ನೈ ತಂಡ 3 ರನ್’ಗಳಿಂದ ಪಂದ್ಯ ಸೋತಿತ್ತು.

ಇದನ್ನೂ ಓದಿ : Suryakumar Yadav: 26 ದಿನಗಳಲ್ಲಿ 4 ಗೋಲ್ಡನ್ ಡಕ್, ವೈಟ್ ಬಾಲ್ ಕ್ರಿಕೆಟ್’ನಲ್ಲಿ ಶಾಕ್ ಮೇಲೆ ಶಾಕ್; ಏನಾಗಿದೆ ಸೂರ್ಯನಿಗೆ..?

ಇದನ್ನೂ ಓದಿ : ಧೋನಿ ಬ್ಯಾಟಿಂಗ್ ವೇಳೆ 2.2 ಕೋಟಿ ವೀವ್ಸ್ : ದಾಖಲೆ ಬರೆದ ಕ್ಯಾಪ್ಟನ್ ಕೂಲ್

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ನಾಯಕ ಧೋನಿ ಅವರ ಅಬ್ಬರದ ಹೊರತಾಗಿಯೂ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಗಿ 3 ರನ್’ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ 2008ರ ನಂತರ ರಾಜಸ್ಥಾನ್ ರಾಯಲ್ಸ್ ತಂಡ ಚೆನ್ನೈನ ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಗೆಲುವು ದಾಖಲಿಸಿದ ಸಾಧನೆ ಮಾಡಿದೆ. ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಧೋನಿ 20ನೇ ಓವರ್’ನಲ್ಲಿ ಐದು ಸಿಕ್ಸರ್’ಗಳನ್ನು ಬಾರಿಸಿದ್ದಾರೆ. 41ನೇ ವಯಸ್ಸಿನಲ್ಲೂ ಅಬ್ಬರಿಸುತ್ತಿರುವ ಮಾಹಿ ಐಪಿಎಲ್-2023ರ 20ನೇ ಓವರ್’ನಲ್ಲಿ 13 ಎಸೆತಗಳಲ್ಲಿ 38 ರನ್ ಚಚ್ಚಿದ್ದಾರೆ.

ಐಪಿಎಲ್-2023 : 20ನೇ ಓವರ್’ನಲ್ಲಿ ಧೋನಿ :
1, 6, 4, 0, 1, 6, 6, W, 0, 6, 6, 1, 1

Most Sixes in the IPL History : MS Dhoni: 57 Sixes in the last over, “Tala” Dhoni has no equal

Comments are closed.