Fazil’s final darshan : ಫಾಜಿಲ್​ ಹತ್ಯೆ ಪ್ರಕರಣ : ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

ದಕ್ಷಿಣ ಕನ್ನಡ : Fazil’s final darshan : ಕರಾವಳಿ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಒಟ್ಟು ಮೂರು ಕೊಲೆಗಳು ನಡೆದಿರುವುದು ಇಡೀ ಮಂಗಳೂರನ್ನು ಬೆಚ್ಚಿ ಬೀಳಿಸಿದೆ. ಮಸೂದ್​, ಪ್ರವೀಣ್​ ನೆಟ್ಟಾರು ಬಳಿಕ ಇದೀಗ ಫಾಜಿಲ್​ ಕೂಡ ಹತ್ಯೆಯಾಗಿರುವುದು ಬುದ್ಧಿವಂತರ ಜಿಲ್ಲೆ ಕೊಲೆಗಡುಕರ ಜಿಲ್ಲೆಯಾಗಿ ಬದಲಾಗುತ್ತಿದೆಯಾ ಎಂಬ ಆತಂಕವನ್ನು ಹುಟ್ಟು ಹಾಕಿದೆ. ನಿನ್ನೆ ಸುರತ್ಕಲ್​ನಲ್ಲಿ ಬರ್ಬರವಾಗಿ ಕೊಲೆಯಾದ ಫಾಜಿಲ್​ರನ್ನು ದಫನ್​ ಮಾಡುವುದಕ್ಕೂ ಮುನ್ನ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸುರತ್ಕಲ್​ ಹೊರ ವಲಯದ ಮಂಗಲ್​ಪೇಟೆಯಲ್ಲಿರುವ ಮೊಯಿದ್ದೀನ್ ಜುಮ್ಮಾ ಮಸೀದಿಯಲ್ಲಿ ಫಾಜಿಲ್​ ಮೃತದೇಹವನ್ನು ಇರಿಸಲಾಗಿದೆ. 23 ವರ್ಷದ ಫಾಜಿಲ್​ ಮೃತದೇಹದ ಅಂತಿಮ ದರ್ಶನವನ್ನು ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನರು ಜುಮ್ಮಾ ಮಸೀದಿಯತ್ತ ಆಗಮಿಸುತ್ತಿದ್ದು ಜನ ಸಾಗರವೇ ನೆರೆದಿದೆ. ಕೇವಲ ಸುರತ್ಕಲ್​ ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದ ಮುಸ್ಲಿಮರು ಫಾಜಿಲ್​ ಅಂತಿಮ ದರ್ಶನ ಪಡೆಯಲು ಧಾವಿಸುತ್ತಿದ್ದು ಪರಿಸ್ಥಿತಿ ನಿಯಂತ್ರಣ ಕೈ ತಪ್ಪುತದೆಯೋ ಎಂಬ ಆತಂಕ ಕೂಡ ಆರಂಭಗೊಂಡಿದೆ. ಸಾರ್ವಜನಿಕರು ಅಂತಿಮ ದರ್ಶನವನ್ನು ಪಡೆದ ಬಳಿಕ ಫಾಜಿಲ್​ ಮೃತದೇಹವನ್ನು ಮಸೀದಿಯ ಹಿಂಭಾಗದಲ್ಲಿಯೇ ಇರುವ ದಫನ್​ ಭೂಮಿಯಲ್ಲಿ ಮಣ್ಣು ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್​ ಬಿಗಿ ಬಂದೋಬಸ್ತ್​ ಕೈಗೊಂಡಿದೆ. ಸುರತ್ಕಲ್​ ಹೈವೇನಿಂದ ಎಂಆರ್​ಪಿಎಲ್​ ರಸ್ತೆಗೆ ಬದಲಿ ಮಾರ್ಗದಲ್ಲಿ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಫಾಜಿಲ್​ ಕುಟುಂಬಸ್ಥರು ಯಾವುದೇ ಅಹಿತಕರ ಘಟನೆ ನಡೆಯುವುದನ್ನು ತಪ್ಪಿಸಲಿಕ್ಕೋಸ್ಕರ ರಾಜಕೀಯ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬೇಡಿ ಎಂದು ಮನವಿ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಸುರತ್ಕಲ್​ನ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇದನ್ನು ಓದಿ : Fazil Murder Cases : ಫಾಜಿಲ್ ಹತ್ಯೆ, ಇಂದು ಶಾಲಾ-ಕಾಲೇಜುಗಳಿಗೆ ರಜೆ

ಇದನ್ನೂ ಓದಿ : Praveen Nettaru’s murder : ವಿದೇಶದಲ್ಲಿ ನಡೆದಿತ್ತಾ ಪ್ರವೀಣ್​ ಹತ್ಯೆಗೆ ಪ್ಲಾನ್​ : ಪ್ರವೀಣ್​ ಅಂಗಡಿಯಲ್ಲಿ ಕೆಲಸಕ್ಕಿದವನ ಪುತ್ರನಿಂದಲೇ ಸ್ಕೆಚ್​​

ಇದನ್ನೂ ಓದಿ : Bommai high level meeting : ಸಿಎಂ ನೇತೃತ್ವದಲ್ಲಿ ಪೊಲೀಸ್​ ಹಿರಿಯ ಅಧಿಕಾರಿಗಳ ಸಭೆ : ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಕಟ್ಟು ನಿಟ್ಟಿನ ಕ್ರಮ ಸಾಧ್ಯತೆ

ಇದನ್ನೂ ಓದಿ : Pramod Muthalik barred : ಶಾಂತಿ ಕದಡುವ ಆತಂಕ : ಪ್ರಮೋದ್​ ಮುತಾಲಿಕ್​ಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ

Arrangements for Fazil’s final darshan in Mangalpet

Comments are closed.