Manish Pandey Europe trip : ಪತ್ನಿಯೊಂದಿಗೆ ಯುರೋಪ್ ಪ್ರವಾಸದಲ್ಲಿ ಮನೀಶ್ ಪಾಂಡೆ.. ಸುಂದರ ಚಿತ್ರ ಹಂಚಿಕೊಂಡ ಕ್ರಿಕೆಟಿಗ

ಬೆಂಗಳೂರು: (Manish Pandey Europe trip) ಕರ್ನಾಟಕದ ಸ್ಟಾರ್ ಕ್ರಿಕೆಟಿಗ, ರಾಜ್ಯ ತಂಡದ ನಾಯಕ, ಟೀಮ್ ಇಂಡಿಯಾ ಪರ ಮಿಂಚಿದ್ದ ಮನೀಶ್ ಪಾಂಡೆ (Manish Pandey) ಅದ್ಭುತ ಪ್ರತಿಭಾವಂತ ಆಟಗಾರ. ಕ್ರಿಕೆಟ್’ನಿಂದ ಸದ್ಯ ವಿರಾಮ ಪಡೆದಿರುವ ಮನೀಶ್ ಪಾಂಡೆ, ಪತ್ನಿ ಆಶ್ರಿತಾ ಶೆಟ್ಟಿ (Ashritha Shetty) ಜೊತೆ ಯುರೋಪ್ ಪ್ರವಾಸದಲ್ಲಿದ್ದಾರೆ. ಪತ್ನಿ ಜೊತೆಗಿನ ಯುರೋಪ್ ಪ್ರವಾಸ ದ ಸುಂದರ ಚಿತ್ರವನ್ನು ಮನೀಶ್ ಪಾಂಡೆ, ಸಾಮಾಜಿಕ ಜಾಲತಾಣ ಇನ್’ಸ್ಟಾಗ್ರಾಂನಲ್ಲಿ ಹಂಚಿ ಕೊಂಡಿದ್ದಾರೆ.

ಕರ್ನಾಟಕ ತಂಡದ ನಾಯಕರಾಗಿರುವ ಮನೀಶ್ ಪಾಂಡೆ 2019ರ ಡಿಸೆಂಬರ್ 2ರಂದು ಮಂಗಳೂರು ಮೂಲದ ನಟಿ ಆಶ್ರಿತಾ ಶೆಟ್ಟಿಯವರನ್ನು ಮದುವೆಯಾಗಿದ್ದರು. ಮನೀಶ್ ಪಾಂಡೆ ತುಂಬಾನೇ ಅನ್ ಲಕ್ಕಿ ಕ್ರಿಕೆಟಿಗ. ಪ್ರತಿಭೆಯಿದ್ದರೂ ಸೂಕ್ತ ಅವಕಾಶ ಸಿಗಲಿಲ್ಲ. ಅವಕಾಶ ಸಿಕ್ಕಾಗ ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಹೀಗಾಗಿ ಟೀಮ್ ಇಂಡಿಯಾದಿಂದ ಹೊರ ಬಿದ್ದಿರುವ 32 ವರ್ಷದ ಪಾಂಡೆಗೀಗ ಕರ್ನಾಟಕ ತಂಡವಷ್ಟೇ ಗಟ್ಟಿ.

https://www.instagram.com/p/Cggef4yPBif/?igshid=YmMyMTA2M2Y=

ಸ್ಟೈಲಿಷ್ ಬಲಗೈ ಬ್ಯಾಟ್ಸ್’ಮನ್ ಆಗಿರುವ ಮನೀಶ್ ಪಾಂಡೆ 2008ರಲ್ಲಿ ವಿರಾಟ್ ಕೊಹ್ಲಿ ಜೊತೆ ಅಂಡರ್-19 ವಿಶ್ವಕಪ್ ಆಡಿದವರು. ಕೊಹ್ಲಿ ನಾಯಕತ್ವದಲ್ಲಿ ಭಾರತ ಕಿರಿಯರ ತಂಡ 15 ವರ್ಷಗಳ ಹಿಂದೆ ಅಂಡರ್-19 ವಿಶ್ವಕಪ್ ಗೆದ್ದಾಗ ಆ ತಂಡದ ಯಶಸ್ಸಿನ ಭಾಗವಾಗಿದ್ದರು. ಆದರೆ ಅದೇ ವಿರಾಟ್ ಕೊಹ್ಲಿ ಇಂದು ಕ್ರಿಕೆಟ್ ಜಗತ್ತಿನ ಆಧುನಿಕ ದಿಗ್ಗಜನಾಗಿ ಹೆಸರು ಮಾಡಿದ್ದರೆ, ಮನೀಶ್ ಪಾಂಡೆ ಆರಕ್ಕೇರಿಲ್ಲ, ಮೂರಕ್ಕಿಳಿದಿಲ್ಲ.

ಭಾರತ ಪರ 29 ಏಕದಿನ ಪಂದ್ಯಗಳನ್ನಾಡಿರುವ ಮನೀಶ್ ಪಾಂಡೆ 1 ಶತಕ ಮತ್ತು 2 ಅರ್ಧಶತಕಗಳ ಸಹಿತ 566 ರನ್ ಗಳಿಸಿದ್ದಾರೆ. 33 ಟಿ20 ಅಂತಾರಾಷ್ಟ್ರೀಯ ಇನ್ನಿಂಗ್ಸ್’ಗಳಿಂದ 3 ಅರ್ಧಶತಕಗಳೊಂದಿಗೆ 709 ರನ್ ಕಲೆ ಹಾಕಿದ್ದಾರೆ. ಪ್ರಥಮದರ್ಜೆ, ಲಿಸ್ಟ್ ‘ಎ’ ಹಾಗೂ ಟಿ20 ಕ್ರಿಕೆಟ್’ನಲ್ಲಿ ಮನೀಶ್ ಪಾಂಡೆ ಒಟ್ಟು 34 ಶತಕಗಳನ್ನು ಬಾರಿಸಿದ್ದಾರೆ.

ಇನ್ನೆರಡು ದಿನಗಳಲ್ಲಿ ಯುರೋಪ್ ಪ್ರವಾಸದಿಂದ ವಾಪಸ್ಸಾಗಲಿರುವ ಮನೀಶ್ ಪಾಂಡೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಲಿದ್ದಾರೆ. KSCA ಮಹಾರಾಜ ಟ್ರೋಫಿ ಟಿ20 ಟೂರ್ನಿ (KSCA Maharaja T20) ಆಗಸ್ಟ್ 7ರಿಂದ 26ರವರೆಗೆ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದ್ದು, ಮಂಗಳೂರು, ಹುಬ್ಬಳ್ಳಿ, ಮೈಸೂರು, ರಾಯಚೂರು, ಶಿವಮೊಗ್ಗ ಮತ್ತು ಬೆಂಗಳೂರು ತಂಡಗಳು ಆಡಲಿವೆ.

ಇದನ್ನೂ ಓದಿ : Shubman Gill : ಓಪನಿಂಗ್ ರೇಸ್‌ನಲ್ಲಿ ಮತ್ತೊಂದು ಕುದುರೆ; ಗಿಲ್ ಕಮಾಲ್, ಯಾರಿಗೆಲ್ಲಾ ಢವ ಢವ ?

ಇದನ್ನೂ ಓದಿ : India Vs West Indies T20 : ಇಂದು ಭಾರತ vs ವೆಸ್ಟ್‌ ಇಂಡಿಸ್ ಮೊದಲ ಟಿ20, ಇಲ್ಲಿದೆ Team India Playing 11

Manish Pandey Europe trip with his wife, The cricketer shared a beautiful picture

Comments are closed.