Mangalore airport : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬರ್​ ಆತಂಕ : ಯುವತಿ ಸೇರಿದಂತೆ ಇಬ್ಬರು ಖಾಕಿ ವಶಕ್ಕೆ

ಮಂಗಳೂರು : Mangalore airport: ಭದ್ರತೆ ಎಂಬ ವಿಚಾರ ಬಂದಾಗ ವಿಮಾನ ನಿಲ್ದಾಣಗಳಲ್ಲಿ ತುಸು ಹೆಚ್ಚಾಗಿಯೆ ಜಾಗ್ರತೆ ಮಾಡುತ್ತಾರೆ. ಅದೇ ರೀತಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸಿದ ಯುವಕ ಹಾಗೂ ಯುವತಿಯನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ತೀವ್ರಗೊಳಿಸಿದ್ದಾರೆ.

ಇಂಡಿಗೋ ವಿಮಾನ ಸಿಬ್ಬಂದಿ ನೀಡಿರುವ ದೂರನ್ನು ಆಧರಿಸಿದ ಬಜ್ಪೆ ಠಾಣಾ ಪೊಲೀಸರು ಯುವಕ ಹಾಗೂ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆಗೆ ವಿಮಾನವು ಮಂಗಳೂರಿನಿಂದ ಮುಂಬೈಗೆ ಹೊರಟಿತ್ತು. ವಿಮಾನದಲ್ಲಿ ಕುಳಿತಿದ್ದ ಯುವಕನಿಗೆ ಯುವತಿಯು ಯು ಆರ್​ ಎ ಬಾಂಬರ್​(ನೀನೊಬ್ಬ ಬಾಂಬರ್​) ಎಂದು ಮೆಸೇಜ್​ ಮಾಡಿದ್ದಳು ಎನ್ನಲಾಗಿದೆ.

ಈ ಮೆಸೇಜ್​​ ಯುವಕನ ಪಕ್ಕದಲ್ಲಿಯೇ ಕುಳಿತು ಮುಂಬೈಗೆ ಪ್ರಯಾಣಿಸುತ್ತಿದ್ದ ಮಹಿಳೆಯ ಕಣ್ಣಿಗೆ ಬಿದ್ದಿದೆ. ಕೂಡಲೇ ಮಹಿಳೆಯು ಈ ಸಂಬಂಧ ಇಂಡಿಗೋ ವಿಮಾನದ ಸಿಬ್ಬಂದಿಗೆ ಮಾಹಿತಿಯನ್ನು ರವಾನಿಸಿದ್ದಾರೆ. ಬಾಂಬರ್​ ಸುದ್ದಿ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಟೇಕಾಫ್​ಗೆ ರೆಡಿಯಾಗಿದ್ದ ವಿಮಾನವನ್ನು ನಿಲ್ಲಿಸಿ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ಭದ್ರತಾ ಸಿಬ್ಬಂದಿ ತಪಾಸಣೆ ಕೈಗೊಂಡಿದ್ದಾರೆ.

ಯುವಕ ಹಾಗೂ ಯುವತಿ ನಡುವಿನ ಈ ಚಾಟಿಂಗ್​ ವಿಮಾನ ನಿಲ್ದಾಣದಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿದೆ. ಭದ್ರತಾ ತಪಾಸಣೆಯ ಬಳಿಕ ಸಂಜೆ ಐದು ಗಂಟೆ ಸುಮಾರಿಗೆ ವಿಮಾನವು ಮಂಗಳೂರಿನಿಂದ ಮುಂಬೈಗೆ ಪ್ರಯಾಣ ಬೆಳೆಸಿದೆ. ಉತ್ತರ ಪ್ರದೇಶ ಮೂಲದ ಯುವಕ ದೀಪಯಾನ್​ ಮಾಂಜಿ ಹಾಗೂ ಯುವತಿ ಸಿಮ್ರನ್​ ಟಾಮ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿಗೆ ಹೊರಟಿದ್ದ ಯುವತಿಯು ವಿಮಾನ ನಿಲ್ದಾಣದಲ್ಲಿದ್ದಾಗಲೇ ಯುವಕನಿಗೆ ಈ ರೀತಿ ಬಾಂಬರ್​ ಎಂದು ಮೆಸೇಜ್​ ಮಾಡಿದ್ದಳು ಎನ್ನಲಾಗಿದೆ. ಆದರೆ ಈ ರೀತಿಯ ಸಂದೇಶಗಳು ಭದ್ರತಾ ಆತಂಕಕ್ಕೆ ಕಾರಣವಾಗಿರು ಹಿನ್ನೆಲೆಯಲ್ಲಿ ಪೊಲೀಸರು ಈ ಬಗ್ಗೆ ಯುವಕ ಹಾಗೂ ಯುವತಿಗೆ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಯುವತಿಯು ಪ್ರವಾಸಕ್ಕೆಂದು ಮಂಗಳೂರಿಗೆ ಆಗಮಿಸಿದ್ದರು ಎನ್ನಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ಇವರಿಬ್ಬರೂ ಸ್ನೇಹಿತರು ಎಂದು ತಿಳಿದು ಬಂದಿದೆ. ಪೊಲೀಸ್​ ತನಿಖೆಯ ಸಂದರ್ಭದಲ್ಲಿ ಈ ಇಬ್ಬರು ತಾವು ತಮಾಷೆಗೆ ಈ ರೀತಿ ಮೆಸೇಜ್​ ಮಾಡಿಕೊಂಡಿದ್ದೆವು ಎಂದು ಹೇಳಿದ್ದಾರೆ. ಯುವಕ ಹಾಗೂ ಯುವತಿಯ ವಿರುದ್ಧ ಭಾರತೀಯ ದಂಡ ಸಂಹಿತೆ 505 1 ಬಿ ಮತ್ತು ಸಿ ಕಲಂ ಅಡಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : independence day flag hoisting : ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ, ₹25 ಲಕ್ಷ ಪರಿಹಾರ : ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ

ಇದನ್ನೂ ಓದಿ :Egyptian church : ಚರ್ಚ್​ನಲ್ಲಿ ಅಗ್ನಿ ಅವಘಡ : 41 ಮಂದಿ ದಾರುಣ ಸಾವು, ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು ಎಂದ ಸಚಿವಾಲಯ

Comments are closed.