Brahmavar Rud Set Institute: ರುಡ್‌ ಸೆಟ್‌ ಸಂಸ್ಥೆಯಲ್ಲಿ ಉಚಿತ ತರಬೇತಿ ಕಾರ್ಯಾಗಾರ

ಉಡುಪಿ: (Brahmavar Rud Set Institute) ಬ್ರಹ್ಮಾವರದ ಪ್ರತಿಷ್ಠಿತ ಸಂಸ್ಥೆಯಾದ ರುಡ್‌ ಸೆಟ್‌ ಸಂಸ್ಥೆ ಹತ್ತು ದಿನಗಳ ಕಾಲ ಸ್ವಂತ ಉದ್ಯೋಗ ಮಾಡಲು ಬಯಸುವವರಿಗೆ ಊಟ ವಸತಿಯೊಂದಿಗೆ ಉಚಿತ ತರಬೇತಿಯನ್ನು ನೀಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ತರಬೇತಿ ಕಾರ್ಯಾಗಾರಕ್ಕೆ ನೊಂದಾಯಿಸಿಕೊಳ್ಳಲು ಸಂಸ್ಥೆ ತಿಳಿಸಿದೆ. ಅಣಬೆ ಬೇಸಾಯ, ಮೊಬೈಲ್‌ ರಿಪೇರಿ, ಪೇಪರ್‌ ಬ್ಯಾಗ್‌, ಪೇಪರ್‌ ಕವರ್‌ ಹಾಗೂ ಫೈಲ್‌ ತಯಾರಿಕಾ ತರಬೇತಿಯನ್ನು ಸಂಸ್ಥೆ ನೀಡುತ್ತಿದ್ದು ಆಸಕ್ತರು ಹಾಗೂ ಸ್ವಂತ ಉದ್ಯೋಗ ಮಾಡಲಿಚ್ಚಿಸುವವರು ಇದರ ಸದುಪಯೋಗಪಡಿಸಿಕೊಳ್ಳಲು ಸೂಚಿಸಲಾಗಿದೆ.

ಸಂಸ್ಥೆಯ ಹೆಸರು: ರುಡ್‌ ಸೆಟ್‌ ಸಂಸ್ಥೆ
ಸ್ಥಳ: ಬ್ರಹ್ಮಾವರ
ತರಬೇತಿ ವಿಷಯ: ಅಣಬೆ ಬೇಸಾಯ, ಮೊಬೈಲ್‌ ರಿಪೇರಿ, ಪೇಪರ್‌ ಬ್ಯಾಗ್‌, ಪೇಪರ್‌ ಕವರ್‌ ಹಾಗೂ ಫೈಲ್‌ ತಯಾರಿಕಾ ತರಬೇತಿ

ವಯೋಮಿತಿ:
ಈ ತರಬೇತಿಗೆ ನೊಂದಾಯಿಸಿಕೊಳ್ಳುವ ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ ಗರಿಷ್ಠ 45 ವರ್ಷ ವಯಸ್ಸಾಗಿರಬೇಕು. ಅದರ ನಂತರದ ವಯಸ್ಸಿನವರಿಗೆ ಅವಕಾಶವಿರುವುದಿಲ್ಲ.

ತರಬೇತಿಗೆ ಬೇಕಾದ ಅಗತ್ಯ ದಾಖಲೆಗಳು:
ಅಣಬೆ ಬೇಸಾಯ, ಮೊಬೈಲ್‌ ರಿಪೇರಿ, ಪೇಪರ್‌ ಬ್ಯಾಗ್‌, ಪೇಪರ್‌ ಕವರ್‌ ಹಾಗೂ ಫೈಲ್‌ ತಯಾರಿಕಾ ತರಬೇತಿಗೆ ನೊಂದಣಿ ಮಾಡಲಿಚ್ಚಿಸುವ ಅಭ್ಯರ್ಥಿಗಳು ಆಧಾರ್‌ ಕಾರ್ಡ್‌ ಹಾಗೂ ರೇಷನ್‌ ಕಾರ್ಡ್‌ ಅನ್ನು ಕಡ್ಡಾಯವಾಗಿ ಹೊಂದರಬೇಕು

ನೊಂದಾವಣೆ ಪ್ರಕ್ರಿಯೆ;
ರುಡ್‌ ಸೆಟ್‌ ಸಂಸ್ಥೆ ನಡೆಸುತ್ತಿರುವ ಈ ತರಬೇತಿ ಕಾರ್ಯಕ್ರಮಕ್ಕೆ ನೊಂದಾವಣೆ ಮಾಡಿಕೊಳ್ಳಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಮೊಬೈಲ್‌ ಸಂಖ್ಯೆಗಳಿಗೆ ಕರೆ ಮಾಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು.
9632561145/, 9591233748/, 9611544930/, 9448348569/, 9844086383/, 8861325564

ತರಬೇತಿ ದಿನಾಂಕ:
ಅಣಬೆ ಬೇಸಾಯ ತರಬೇತಿ ಮಾರ್ಚ್‌ 15, 2023 ರಿಂದ ಪ್ರಾರಂಭವಾಗಿ ಮಾರ್ಚ್‌ 24, 2023 ರಂದು ಕೊನೆಗೊಳ್ಳುತ್ತದೆ.
ಮೊಬೈಲ್‌ ರಿಪೇರಿ ತರಬೇತಿಯು ಮಾರ್ಚ್‌ 15, 2023 ರಿಂದ ಪ್ರಾರಂಭವಾಗಿ ಏಪ್ರಿಲ್‌ 13, 2023 ರಂದು ಕೊನೆಗೊಳ್ಳುತ್ತದೆ.
ಪೇಪರ್‌ ಬ್ಯಾಗ್‌, ಪೇಪರ್‌ ಕವರ್‌ ಹಾಗೂ ಫೈಲ್‌ ತಯಾರಿಕಾ ತರಬೇತಿ ಮಾರ್ಚ್‌ 15, 2023 ರಿಂದ ಪ್ರಾರಂಭವಾಗಿ ಮಾರ್ಚ್‌ 24, 2023 ರಂದು ಕೊನೆಗೊಳ್ಳುತ್ತದೆ.

ಇನ್ನೂ ಅಣಬೆ ಬೇಸಾಯ ಹಾಗೂ ಪೇಪರ್‌ ಬ್ಯಾಗ್‌, ಪೇಪರ್‌ ಕವರ್‌ ಹಾಗೂ ಫೈಲ್‌ ತಯಾರಿಕಾ ತರಬೇತಿಗಳನ್ನು ಹತ್ತು ದಿನಗಳ ಕಾಲ ನಡೆಸಲಾಗುವುದು. ಮೊಬೈಲ್‌ ರಿಪೇರಿ ತರಬೇತಿಯನ್ನು ಮೂವತ್ತು ದಿನಗಳ ಕಾಲ ನಡೆಸಲಾಗುವುದು. ಸ್ವಂತ ಉದ್ಯೋಗ ನಡೆಸಲು ಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಎಲ್ಲರೂ ಈ ಅವಕಾಶವನ್ನು ಬಳಸಿಕೊಳ್ಳಬೇಕಾಗಿ ತಿಳಿಸಲಾಗಿದೆ.

ಇದನ್ನೂ ಓದಿ : KVAFSU ನೇಮಕಾತಿ 2023 : ವಿವಿಧ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಅಹ್ವಾನ

ಇದನ್ನೂ ಓದಿ : KWRD Recruitment 2023: ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Brahmavar Rud Set Institute: Free training workshop at Rud Set Institute

Comments are closed.