Byndoor Bunts Sangha: ಬೈಂದೂರು ಬಂಟರ ಸಂಘದ ನೂತನ ವೆಬ್‌ಸೈಟ್-ಗ್ರಂಥಾಲಯ ಲೋಕಾರ್ಪಣೆ

Byndoor Bunts Sangha: ಬೈಂದೂರು : ಬಂಟರ ಯಾನೆ ನಾಡವರ ಸಂಘ (ರಿ.) ಬೈಂದೂರು ಇದರ ಅಧಿಕೃತ ವೆಬ್‌ಸೈಟ್ Bansbyndoor.com ಮತ್ತು ನೂತನ ಗ್ರಂಥಾಲಯವು ಲೋಕಾರ್ಪಣೆಗೊಂಡಿದೆ.

ಬೈಂದೂರಿನ ಬಂಟರ ಭವನದಲ್ಲಿ ನಡೆದ ಸಮಾರಂಭದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಲ್ಲದೇ ಲ್ಯಾಪ್‌ಟಾಪ್‌ನಲ್ಲಿ ಬಟನ್ ಒತ್ತುವ ಮೂಲಕ ವೆಬ್‌ಸೈಟ್‌ನ್ನು ಲೋಕಾರ್ಪಣೆಗೊಳಿಸಿದರು.

ಜ್ಯೋತಿ ಬೆಳಗಿಸುವ ಮೂಲಕ ಗ್ರಂಥಾಲಯಕ್ಕೆ ಸಾಂಕೇತಿಕ ಚಾಲನೆ ನೀಡಿದ್ದು, ಗ್ರಂಥಾಲಯದ ಆರಂಭಿಕ ಪುಸ್ತಕ ಸಂಗ್ರಹವನ್ನೂ ಅವರು ಬಿಡುಗಡೆ ಗೊಳಿಸಿದರು.

Also Read : ಗ್ರಾಹಕರಿಗೆ ಗುಡ್‌ನ್ಯೂಸ್‌ : LPG ಸಿಲಿಂಡರ್ ಬೆಲೆ ಇಳಿಕೆ

ಬಂಟರ ಸಂಘದ ಅಧಿಕೃತ ವೆಬ್‌ಸೈಟ್‌ Bansbyndoor.com ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಾಧಕರ ಸನ್ಮಾನ, ಅಷ್ಟೇ ಅಲ್ಲದೇ ಬಂಟರ ಸಂಘದ ವಿವಿಧ ಸಮಾಜಮುಖಿ ಯೋಜನೆಗಳ ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ತಲುಪಿಸಲಾಗುತ್ತದೆ.

Byndoor Bunts Sangha new website-library launched Kannada News

ಸಮಾಜದ ಬಾಂಧವರಿಗೆ ಸುಲಭವಾಗಿ ಸಂಘದ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ ಅಲ್ಲದೇ ವೆಬ್‌ಸೈಟ್‌ ಮೂಲಕ ಸಂಘದ ಕಾರ್ಯಕ್ರಮಗಳು ಜನರನ್ನು ತಲುಪಲಿದೆ ಎಂದು ಶಾಸಕರು ಅಭಿಪ್ರಾಯ ಪಟ್ಟಿದ್ದಾರೆ.

ಬಂಟರ ಸಂಘದ (Byndoor Bunts Sangha) ಅಧ್ಯಕ್ಷರಾದ ಸಾಲ್ಗದ್ದೆ ಶಶಿಧರ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ ಕುದ್ರುಕೊಡು, ಗೋಕುಲ್ ಶೆಟ್ಟಿ ಉಪ್ಪುಂದ, ಕರುಣಾಕರ್ ಶೆಟ್ಟಿ ತೆಗ್ಗರ್ಸೆ, ಮಾಜಿ ಅಧ್ಯಕ್ಷರಾದ ನಾಕಟ್ಟೆ ಜಗನ್ನಾಥ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಪದಾಧಿಕಾರಿಗಳಾದ ಚುಚ್ಚಿ ನಾರಾಯಣ ಶೆಟ್ಟಿ, ನಿತಿನ್ ಶೆಟ್ಟಿ ಬೈಂದೂರು, ಜೈರಾಮ್ ಶೆಟ್ಟಿ ಗಂಟಿಹೊಳೆ, ಜೈರಾಮ್ ಶೆಟ್ಟಿ, ಸಂತೋಷ್ ಶೆಟ್ಟಿ ಬೈಂದೂರು, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ದಿವಾಕರ್ ಶೆಟ್ಟಿ ನೆಲ್ಯಾಡಿ, ದಿವಾಕರ್ ಶೆಟ್ಟಿ ಉಪ್ಪುಂದ, ಹಾಗೂ ಮಹಿಳಾ ಪದಾಧಿಕಾರಿಗಳಾದ ಮಮತಾ ಶೆಟ್ಟಿ ಮತ್ತು ಉಷಾ ಶೆಟ್ಟಿ ಉಪಸ್ಥಿತರಿದ್ದರು.

Also Read : ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ ಉದ್ಯೋಗಾವಕಾಶ : ಮಾಸಿಕ ವೇತನ 1.60 ಲಕ್ಷ ರೂ.

Byndoor Bunts Sangha new website-library launched Kannada News

ಕುಂದಾಪುರದ ಪ್ರಸಿದ್ದ ಫೋರ್ಥ್ ಫೋಕಸ್ ಸಂಸ್ಥೆ (https://forthfocus.com/) ವೆಬ್‌ಸೈಟ್‌ ಅನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಿನ್ಯಾಸಗೊಳಿಸಿದೆ. ForthFocus ಸಂಸ್ಥೆಯ ನಿರ್ದೇಶಕರಾದ (Director) ವಿ.ಗೌತಮ್‌ ನಾವಡ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ತಾವು ರೂಪಿಸಿದ್ದ ತಂತ್ರಜ್ಞಾನ ಸಹಕಾರದ ಬಗ್ಗೆ ಮೆಚ್ಚುಗೆ ಪಡೆದರು.

ಕಾರ್ಯದರ್ಶಿಗಳಾದ ನಿತಿನ್ ಶೆಟ್ಟಿ, ಬೈಂದೂರ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಕ್ಷರಾದ ಸಾಲ್ಗದ್ದೆ ಶಶಿಧರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಹಾಗೆ ಜಯರಾಮ್ ಶೆಟ್ಟಿ ಬಿ ವಂದಿಸಿದರು.

Byndoor Bunts Sangha new website-library launched Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories