ಗ್ರಾಹಕರಿಗೆ ಗುಡ್ನ್ಯೂಸ್ : LPG ಸಿಲಿಂಡರ್ ಬೆಲೆ ಇಳಿಕೆ

LPG Gas cylinder price : ಬೆಳ್ಳಂಬೆಳಗ್ಗೆಯೇ ತೈಲ ಮಾರಾಟ ಕಂಪೆನಿಗಳು ಗ್ರಾಹಕರಿಗೆ ಗುಡ್ನ್ಯೂಸ್ ಕೊಟ್ಟಿವೆ. ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಕಂಡಿದೆ. ಗ್ಯಾಸ್ ಸಿಲಿಂಡರ್ ಪರಿಷ್ಕೃತ ಹೊಸ ದರ ಇಂದು ( ಜೂನ್ 1, 2025) ಜಾರಿಗೆ ಬಂದಿದೆ. ಹೊಸ ದರದ ಪ್ರಕಾರ, ಭಾರತದ ಯಾವ ನಗರದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರ ಎಷ್ಟಿದೆ ಗೊತ್ತಾ ?
ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಸಿಲಿಂಡರ್ಗೆ ಹೊಸ ದರ ಅನ್ವಯ ಆಗಲಿದೆ. ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ನ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಈ ಹಿಂದೆ 2025ರ ಏಪ್ರಿಲ್ 8 ದೇಶೀಯ ಸಿಲಿಂಡರ್ ಬೆಲೆಯಲ್ಲಿ 50 ರೂ. ಏರಿಕೆ ಕಂಡಿತ್ತು. ಕಳೆದ 2 ತಿಂಗಳುಗಳಿಂದಲೂ ಗೃಹ ಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ಗೆ 853 ರೂಪಾಯಿ ಬೆಲೆ ಇದೆ.
Also Read : ಗೃಹಲಕ್ಷ್ಮೀ ಯೋಜನೆ : ಜೂನ್ ತಿಂಗಳ ಹಣ ಜಮೆ ಆಗಿದ್ಯಾ ? ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ
ಜುಲೈ 1ರಿಂದಲೇ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 40 ರೂಪಾಯಿ ಇಳಿಕೆ ಆಗಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಕುರಿತು ಅಧಿಕೃತವಾದ ಯಾವುದೇ ಆದೇಶ ಇನ್ನೂ ಹೊರಬಿದ್ದಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ, ಕರೆನ್ಸಿ ವಿನಿಯಮದಿಂದ ಗ್ಯಾಸ್ ದರ ಬದಲಾವಣೆ ಆಗುತ್ತದೆ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ58.50 ರೂಪಾಯಿ ಇಳಿಕೆ ಕಂಡಿದೆ.
ದೆಹಲಿಯಲ್ಲಿ ಈಗ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹1,665 ಆಗಿದೆ. (ಮೊದಲಿನ ₹1,723.50 ನಿಂದ ಇಳಿಕೆ).
ಮುಂಬೈನಲ್ಲಿ ಈಗ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹1,616.50 ಆಗಿದೆ.
ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹1,769ಕ್ಕೆ ಇಳಿಕೆ ಆಗಿದೆ..
ಚೆನ್ನೈನಲ್ಲಿ ಈಗ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹1,823.50 ಆಗಿದೆ.
Also Read : ಜುಲೈ 1 ರಿಂದ ಹೊಸ ರೂಲ್ಸ್ : ಆಧಾರ್, ಪ್ಯಾನ್, ಯುಪಿಐ, ತತ್ಕಾಲ್ ಟಿಕೆಟ್ ನಿಯಮ ತಿಳಿದುಕೊಳ್ಳಿ
ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಬೆಲೆ ಕಳೆದ ಏಪ್ರಿಲ್ 2025 ರಿಂದ ಸ್ಥಿರವಾಗಿದೆ.
LPG Gas cylinder price : ವಿವಿಧ ನಗರಗಳಲ್ಲಿ ಎಷ್ಟಿದೆ ಬೆಲೆ ?
ದೆಹಲಿಯಲ್ಲಿ ₹853.00
ಮುಂಬೈನಲ್ಲಿ ₹852.50
ಕೋಲ್ಕತ್ತಾದಲ್ಲಿ ₹879.00
ಚೆನ್ನೈನಲ್ಲಿ ₹868.50
ಕರ್ನಾಟಕ : ₹855.50
Good news for consumers LPG Gas cylinder price reduced Kannada News



