female leopard : ತೆಕ್ಕಟ್ಟೆಯಲ್ಲಿ ಹೆಣ್ಣು ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಮಾಲಾಡಿ ಜನರು

ಕೋಟ : ಕಳೆದ ಹಲವು ದಿನಗಳಿಂದಲೂ ಜನರ ನಿದ್ದೆಗೆಡಿಸಿದ್ದ ಚಿರತೆಯೊಂದು (female leopard) ಸೆರೆ ಸಿಕ್ಕಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಮಾಲಾಡಿ ಎಂಬಲ್ಲಿ ನಡೆದಿದೆ. ಘಟನೆ ಬೆನ್ನಲ್ಲೇ ಸುತ್ತಮುತ್ತಿಲಿನ ಗ್ರಾಮಸ್ಥರು ನಿಟ್ಟುಸಿರುವ ಬಿಟ್ಟಿದ್ದಾರೆ.

ತೆಕ್ಕಟ್ಟೆಯ ಮಾಲಾಡಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆಯ ಚಲನವಲನ ಪತ್ತೆಯಾಗಿತ್ತು. ಈ ಪ್ರದೇಶದಲ್ಲಿ ಜನವಸತಿಯ ಜೊತೆಗೆ ಅಂಗನವಾಡಿ ಕೇಂದ್ರ, ಶಾಲೆಯಿದ್ದು ಜನರು ನಿತ್ಯವೂ ಆತಂಕದಲ್ಲಿಯೇ ದಿನದೂಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಇಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಸಮೀಪದ ತೋಟದಲ್ಲಿ ಅರಣ್ಯ ಇಲಾಖೆ ಬೋನ್‌ ಇರಿಸಿತ್ತು. ಚಿರತೆಯ ಓಡಾಟದಿಂದ ಜನರು ಬೆದರಿದ ಹಿನ್ನೆಲೆಯಲ್ಲಿ ಕಳೆದ ತಿಂಗಳಿನಿಂದಲೂ ಬೋನಿಗೆ ನಾಯಿಯನ್ನು ಕಟ್ಟಲಾಗುತ್ತಿತ್ತು.

ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಸಕ್ಸಸ್‌ ಆಗಿದೆ. ಅರಣ್ಯ ಇಲಾಖೆ ಇರಿಸಿದ್ದ ಬೋನ್‌ಗೆ ಚಿರತೆ ಬಿದ್ದಿದೆ. ಕಳೆದ ಹಲವು ವರ್ಷಗಳಿಂದಲೂ ಈ ಭಾಗದಲ್ಲಿ ಚಿರತೆಯ ಹಾವಳಿ ನಿರಂತರವಾಗಿದೆ. 2018 ರಿಂದ ಇಲ್ಲಿಯ ವರೆಗೆ ಒಟ್ಟು 5 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಚಿರತೆಯೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿದಿದ್ದರು.

ಮಾಲಾಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಒಟ್ಟು ಐವತ್ತಕ್ಕೂ ಅಧಿಕ ಮನೆಗಳಿದ್ದು, ದೇವಸ್ಥಾನ, ಶಾಲೆ, ಅಂಗನಾಡಿ ಕೇಂದ್ರಕ್ಕೆ ಬರಲು ಜನರು ಹಾಗೂ ಮಕ್ಕಳು ಭಯ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಜನರು ಆತಂಕದಿಂದಲೇ ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿಯನ್ನೂ ಮಾಡಿದ್ದರು.

ಇದನ್ನೂ ಓದಿ :  ನಕಲಿ ದಾಖಲೆ ಸೃಷ್ಟಿಸಿ ಜಿಎಸ್‌ಟಿ ವಂಚನೆ : ಉಡುಪಿಯಲ್ಲಿ 8 ಮಂದಿಯ ವಿರುದ್ದ ಪ್ರಕರಣ ದಾಖಲು

ಇದನ್ನೂ ಓದಿ : ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದ ಕಾಮುಕರು : ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

Capture a female leopard in Thekkatte Near Maladi

Comments are closed.