ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದ ಕಾಮುಕರು : ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಯಾದಗಿರಿ : ಕೆಲಸ ಮುಗಿಸಿಕೊಂಡು ಆಟೋದಲ್ಲಿ ತೆರಳುತ್ತಿದ್ದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ (Auto Drivers Raped women) ಎಸಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಅತ್ಯಾಚಾರಕ್ಕೂ ಮುನ್ನ ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದೆ ಅತ್ಯಾಚಾರವೆಸಗಿದ ಕಾಮುಕರಿಬ್ಬರು ಇದೀಗ ಅಂದರ್‌ ಆಗಿದ್ದಾರೆ.

ಯಾದಗಿರಿ ತಾಲೂಕಿನ ಯುವತಿಯೋರ್ವಳು ಕೆಲಸ ಮುಗಿಸಿಕೊಂಡು ಆಟೋ ಹತ್ತಿದ್ದಾಳೆ. ಈ ವೇಳೆಯಲ್ಲಿ ಆಟೋ ಚಾಲಕ ಹನುಮಂತ ಜಿನಕೇರಿ ತನ್ನ ಸ್ನೇಹಿತನಾಗಿರುವ ನರಸಪ್ಪ ಎಂಬಾತನನ್ನೂ ಆಟೋದಲ್ಲಿ ಕೂರಿಸಿಕೊಂಡು ಬಂದಿದ್ದಾನೆ. ಯುವತಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಹೊಸ ಬಸ್‌ ನಿಲ್ದಾಣದಲ್ಲಿ ಆತನನ್ನು ಬಿಡುತ್ತೇನೆ ಎಂದು ಯುವತಿಯನ್ನು ನಂಬಿಸಿದ್ದಾನೆ.

ನಂತರ ಆಟೋವನ್ನು ನಿರ್ಜನ ಪ್ರದೇಶದ ಕಡೆಗೆ ತಿರುಗಿಸಿ ಪಾಳುಬಿದ್ದ ಮನೆಯಲ್ಲಿ ಯುವತಿಯ ಮೇಲೆ ಇಬ್ಬರು ಅತ್ಯಾಚಾರವೆಸಗಿದ್ದಾರೆ. ಈ ವೇಳೆಯಲ್ಲಿ ಯುವತಿ ಕಾಲಿಗೆ ಬಿದ್ದು ತನ್ನನ್ನು ಬಿಟ್ಟು ಬಿಡುವಂತೆ ಅಂಗಲಾಚಿದ್ದಾಳೆ. ಆದರೆ ಸುಮ್ಮನಾಗದ ಕಾಮುಕರು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲಾ ಅತ್ಯಾಚಾರದ ವೇಳೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿರುವ ಆರೋಪಿಗಳು. ಯಾರ ಬಳಿಯಾದ್ರೂ ಘಟನೆಯ ಬಗ್ಗೆ ತಿಳಿಸಿದ್ರೆ ವಿಡಿಯೋ ವೈರಲ್‌ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.

ಘಟನೆಯ ಬೆನ್ನಲ್ಲೇ ಯುವತಿ ತನ್ನ ಚಿಕ್ಕಪ್ಪನಿಗೆ ವಿಷಯ ತಿಳಿಸಿದ್ದು, ಈ ಕುರಿತು ಯಾದಗಿರಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಯಾದಗಿರಿ ಪೊಲೀಸರು ಹನುಮಂತ್‌ ಹಾಗೂ ಆತನ ಸ್ನೇಹಿತ ನರಸಪ್ಪ ಎಂಬವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : Gang Rape : ಸಾಮೂಹಿಕ ಅತ್ಯಾಚಾರವೆಸಗಿ ಮಹಿಳೆಯ ಹತ್ಯೆ : ಮತ್ತೊಂದು ನೀಚ ಕೃತ್ಯ

ಇದನ್ನೂ ಓದಿ : Student Death : ಹೊಳೆಗೆ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು

two Auto Drivers Raped women Yadagiri

Comments are closed.