Couples hanged to death: ಮಂಗಳೂರಿನ ಲಾಡ್ಜ್‌ ನಲ್ಲಿ ಕೇರಳ ಮೂಲದ ದಂಪತಿ ಆತ್ಮಹತ್ಯೆ

ಮಂಗಳೂರು: (Couples hanged to death) ನಗರದ ಲಾಡ್ಜ್‌ ಒಂದರಲ್ಲಿ ದಂಪತಿಗಳಿಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಫಳ್ನೀರ್‌ ಲಾಡ್ಜ್‌ ಒಂದರಲ್ಲಿ ನಡೆದಿದೆ. ಕೇರಳ ಮೂಲದ ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿಗಳಾದ ರವೀಂದ್ರ (55 ವರ್ಷ) ಹಾಗೂ ಸುಧಾ (50 ವರ್ಷ) ಮೃತ ದಂಪತಿ.

ಫೆ. 6 ರಂದು ಮಧ್ಯಾಹ್ನ 11 ಗಂಟೆಗೆ ದಂಪತಿಗಳಿಬ್ಬರು ಲಾಡ್ಜ್‌ ಪಡೆದಿದ್ದು, ರಾತ್ರಿಯೂ ಹೋಟೆಲ್‌ ಸಿಬ್ಬಂದಿಯ ಬಳಿ ಊಟ ತರಿಸಿಕೊಂಡು ತಿಂದಿದ್ದರು. ಇದಾದ ಮೇಲೆ ಎರಡು ದಿನ ದಂಪತಿಗಳು ಹೊರಗೆ ಬಂದಿರಲಿಲ್ಲ. ಬಾಗಿಲೂ ತೆಗೆಯಲಿಲ್ಲ. ಎರಡು ದಿನ ಕಳೆದರೂ ಬಾಗಿಲು ತೆಗೆಯಲಿಲ್ಲ ಎಂಬ ಕಾರಣಕ್ಕೆ ಲಾಡ್ಜ್‌ ನ ಸಿಬ್ಬಂದಿಗಳು ಬಾಗಿಲು ತೆರೆದು ನೋಡಿದಾಗ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಒಂದೇ ಫ್ಯಾನಿಗೆ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನಲ್ಲೂ ಒಂದಾಗಿದ್ದಾರೆ. ಕೇರಳದ ಕಣ್ಣೂರಿನಲ್ಲಿ ಬಟ್ಟೆ ವ್ಯಾಪಾರಿಗಳಾಗಿದ್ದ ಇವರು ಯಾವ ಕಾರಣಕ್ಕೆ ಸಾವಿಗೆ ಶರಣಾಗಿದ್ದಾರೆ ಎಂಬುದು ತಿಳಿದುಬಂದಿಲ್ಲ. ಸದ್ಯ ಘಟನೆಯ ಕುರಿತು ಮಂಗಳೂರು ಪೊಲೀಸರಿಗೆ ಲಾಡ್ಜ್‌ ಸಿಬ್ಬಂದಿಗಳು ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಸಂಬಂಧ ಮಂಗಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಕಾರಣವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಮಂಗಳೂರು ಕಾಲೇಜಿನ ಉಪನ್ಯಾಸಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಇದನ್ನೂ ಓದಿ : School roof collapsed: ಶಾಲಾ ಮೇಲ್ಚಾವಣೆ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯ

ಇದನ್ನೂ ಓದಿ : Drug case- three arrested: ಕುಂದಾಪುರ: ಗಾಂಜಾ ಸೇವನೆ ಪ್ರತ್ಯೇಕ ಪ್ರಕರಣ: ಮೂವರು ಪೊಲೀಸರ ವಶಕ್ಕೆ

ಮಂಗಳೂರಿನ ವಾಮಪದವು ಕಾಲೇಜಿನಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಮದುವೆಯಾಗಿ ಹನ್ನೆರಡು ವರ್ಷಗಳು ಕಳೆದಿವೆ. ಓರ್ವ ಪುತ್ರಿಯೂ ಕೂಡ ಇವರಿಗಿದ್ದಾಳೆ. ಶಿಕ್ಷಕಿ ಮನೆಯಲ್ಲಿ ಯಾರೂ ಇಲ್ಲದೇ ಇದ್ದ ಸಂದರ್ಭದಲ್ಲಿ ತಮ್ಮ ಬೆಡ್‌ ರೂಮಿನ ಫ್ಯಾನ್‌ ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣಗಳು ಇದುವರೆಗೂ ತಿಳಿದುಬಂದಿಲ್ಲ.

Couples hanged to death: A couple from Kerala committed suicide in a lodge in Mangalore

Comments are closed.