Dead body found in toilet: ಮನೆಯ ಶೌಚಾಲಯದಲ್ಲಿ ಶವವಾಗಿ ಪತ್ತೆಯಾದ ಬಾಲಕಿ: ಹೃದಯಾಘಾತದ ಶಂಕೆ

ಮಂಗಳೂರು: (Dead body found in toilet) ಮನೆಯೊಂದರ ವಾಶ್ ರೂಂನಲ್ಲಿ 16 ವರ್ಷದ ಬಾಲಕಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳ್ತಂಗಡಿಯ ಕಾಣಿಯೂರು ಗ್ರಾಮದಲ್ಲಿ ನಡೆದಿದೆ. ಬಾಲಕಿಯನ್ನು ತಾಲೂಕಿನ ಕಾಣಿಯೂರು ಗ್ರಾಮದ ಕಜೆ ಮನೆ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರಿ ಅಫೀಫಾ ಎಂದು ಗುರುತಿಸಲಾಗಿದೆ.

ಬಾಲಕಿ ಅಫೀಫಾ ಹಾಗೂ ಆಕೆಯ ತಂದೆ ಶನಿವಾರ ಮನೆಯಿಂದ ಗೇರುಕಟ್ಟೆ ಶಾಲೆಗೆ ತೆರಳಿದ್ದರು. ನಂತರ ಆಕೆಯ ತಂದೆ ಆಕೆಯನ್ನು ಕುಪ್ಪೆಟ್ಟಿಯಲ್ಲಿ ಬಿಟ್ಟು ಮಂಗಳೂರಿಗೆ ತೆರಳಿದ್ದರು. ನಂತರ ಶಾಲೆಯ ಬಳಿ ಇರುವ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಐಮನ್ ಆರ್ಕೇಡ್‌ನಲ್ಲಿರುವ ಮನೆಯೊಂದರಲ್ಲಿ ವಾಶ್ ರೂಂ ಗೆ ತೆರಳಿದ್ದಾಳೆ. ಆದರೆ ವಾಶ್‌ ರೂಂ ಗೆ ಹೋದ ಆಕೆ ಬಹಳ ಹೊತ್ತಾದರೂ ಕೂಡ ಆಕೆ ಹೊರಗೆ ಬಂದಿರಲಿಲ್ಲ. ಬಹಳ ಹೊತ್ತಾದರೂ ಆಕೆ ಹೊರಗೆ ಬಾರದಿರುವುದನ್ನು ಕುಟುಂಬದವರು ಗಮನಿಸಿದ್ದಾರೆ.

ಕಿಟಕಿಯ ಮೂಲಕ ಕುಟುಂಬದವರು ನೋಡಿದ್ದು ವಾಶ್‌ ರೂಂ ನಲ್ಲಿ ಆಕೆ ಮಲಗಿರುವ ಸ್ಥಿತಿಯಲ್ಲಿರುವುದನ್ನು ನೋಡಿದ್ದಾರೆ. ತಕ್ಷಣ ಬಾಗಿಲು ಒಡೆದು ಬಾಲಕಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಬಾಲಕಿಯ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ಇದು ಹೃದಯ ಸ್ತಂಭನ ಎಂದು ಶಂಕಿಸಲಾಗಿದೆ.

ಸದ್ಯ ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಬ್ಬಿಣದ ಗೇಟ್‌ ಬಿದ್ದು 5 ವರ್ಷದ ಬಾಲಕಿ ಸಾವು

ಚೆನ್ನೈ: ಪ್ರಸಿದ್ದ ಬಟ್ಟೆಯಂಗಡಿಯೊಂದರಲ್ಲಿ ಕಬ್ಬಿಣದ ಗೇಟ್‌ ಬಿದ್ದು, 5 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಚೆನ್ನೈನ ಲ್ಲಿಪಾಕ್ಕಂನ ಹರ್ಲಿಕ್ಸ್ ರಸ್ತೆಯಲ್ಲಿ ನಡೆದಿದೆ. ಶಂಕರ್ ಹಾಗೂ ವಾಣಿ ದಂಪತಿಯ ಪುತ್ರಿ ಹರಿಣಿ ( 5 ವರ್ಷ) ಮೃತ ಬಾಲಕಿ.

ಇದನ್ನೂ ಓದಿ : ಔಷಧಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ; ಸಂಚಾರ ಅಸ್ತವ್ಯಸ್ತ

ಇದನ್ನೂ ಓದಿ : Truck accident-7 died: ರಸ್ತೆಬದಿಯಲ್ಲಿ ನಿಂತಿದ್ದ ಜನರ ಗುಂಪಿನ ಮೇಲೆ ಹರಿದ ಟ್ರಕ್:‌ 7 ಮಂದಿ ಸಾವು

ಚೆನ್ನೈನ ಕಿಲ್ಲಿಪಾಕ್ಕಂನ ಹರ್ಲಿಕ್ಸ್ ರಸ್ತೆಯಲ್ಲಿರುವ ಜನಪ್ರಿಯ ಬಟ್ಟೆ ಅಂಗಡಿಯಲ್ಲಿ ಶಂಕರ್ ವಾಹನ ಅರೇಂಜರ್ ಆಗಿ ಕೆಲಸ ಮಾಡುತ್ತಿದ್ದು, ನಿನ್ನೆ ರಾತ್ರಿಯೂ ಕೂಡ ಶಂಕರ್ ಎಂದಿನಂತೆ ಈ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆಗ ಶಂಕರನ ಹೆಂಡತಿ ವಾಣಿ ಮತ್ತು ಅವನ ಮಗಳು ಶ್ರೀ ಹರಿಣಿ ಅವನನ್ನು ನೋಡಲು ಬಟ್ಟೆ ಅಂಗಡಿಗೆ ಬಂದಿದ್ದು, ಆವರಣದಲ್ಲಿದ್ದ 20 ಅಡಿ ಅಗಲದ ಸ್ಲೈಡಿಂಗ್ ಕಬ್ಬಿಣದ ಗೇಟ್ ತೆರೆಯಲು ಯತ್ನಿಸುತ್ತಿದ್ದಾಗ ಗೇಟ್ ಬಾಲಕಿ ಶ್ರೀಹರಿಣಿ ಮೇಲೆ ಬಿದ್ದಿದೆ.

ಇದರಿಂದಾಗಿ ಬಾಲಕಿಯ ತಲೆಗೆ ತೀವ್ರ ಗಾಯಗಳಾಗಿದ್ದು, ದೇಹದ ಭಾಗಗಳಿಗೂ ತೀವ್ರ ಗಾಯಗಳಾಗಿವೆ. ಕೂಡಲೇ ಬಾಲಕಿಯನ್ನು ಚೆನ್ನೈನ ಕಿಲ್ಪಾಕ್ಕಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕಿ ಮಧ್ಯರಾತ್ರಿ ದಾರುಣವಾಗಿ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ : Balochistan Bus accident: ಕಂದಕಕ್ಕೆ ಉರುಳಿದ‌ ಪ್ರಯಾಣಿಕರ ಬಸ್‌ : 39 ಸಾವು

Girl’s dead body found in toilet: Suspected of heart attack

Comments are closed.