ತಲೆಬುರುಡೆ ರಹಸ್ಯ : ಎಸ್‌ಐಟಿಯಿಂದ ಹೊರ ನಡೆದ ಇಬ್ಬರು ಐಪಿಎಸ್‌ ಅಧಿಕಾರಿಗಳು

Dharmasthala Skull Case: ಬೆಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಪ್ರಕರಣ ತನಿಖೆಗೆ ರಚಿಸಿದ ವಿಶೇಷ ತನಿಖಾ ದಳ (SIT) ದಿಂದ ಇಬ್ಬರು ಐಪಿಎಸ್ ಅಧಿಕಾರಿಗಳು ಹೊರ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಎಸ್‌ಐಟಿಗೆ ಆರಂಭಿಕ ವಿಘ್ನ ಉಂಟಾಗಿದೆ.

ಐಪಿಎಸ್‌ ಅಧಿಕಾರಿಗಳಾದ ಎಂ.ಎನ್. ಅನುಚೇತ್ ಮತ್ತು ಸೌಮ್ಯಲತಾ ಅವರು ಹೊರಹೋಗಲು ಮುಂದಾಗಿದ್ದಾರೆ ಎಂಬ ವರದಿಗಳಿವೆ. ಈ ಕುರಿತು ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Dharmasthala Skull Case: : ಯಾಕೆ ಈ ನಿರ್ಧಾರ ?

ಐಪಿಎಸ್‌ ಅಧಿಕಾರಿ ಎಂ.ಎನ್. ಅನುಚೇತ್ ಅವರು ಹಿಂದೆ ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್‍ಪಿ) ಕಾರ್ಯನಿರ್ವಹಿಸಿದ್ದಾರೆ. ಈ ವೇಳೆಯಲ್ಲಿಯೇ ಸೌಜನ್ಯಾ ಪ್ರಕರಣ ನಡೆದಿತ್ತು.

ಆಗ ಅವರ ಮೇಲೆ ಮತ್ತು ಇನ್ನಿತರ ತನಿಖಾಧಿಕಾರಿಗಳ ಮೇಲೆ ಸಾಕ್ಷಿ ನಾಶ ಮಾಡಿದ ಆರೋಪಗಳು ಕೇಳಿಬಂದಿದ್ದವು. ಈ ಹಿಂದೆ ತಾವು ಕರ್ತವ್ಯ ನಿರ್ವಹಿಸಿದ್ದ ಸ್ಥಳದಲ್ಲಿ ನಡೆದ ಪ್ರಕರಣದ ತನಿಖೆಯಿಂದ ದೂರ ಉಳಿಯುವುದು ಸೂಕ್ತ ಎಂದು ಅನುಚೇತ್ ಭಾವಿಸಿರುವ ಸಾಧ್ಯತೆಯಿದೆ.

ಸೌಮ್ಯಲತಾ ಅವರು ಯಾವ ನಿರ್ದಿಷ್ಟ ಕಾರಣಕ್ಕಾಗಿ ತಂಡದಿಂದ ಹೊರಹೋಗಲು ಮುಂದಾಗಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಅವರು ಸರ್ಕಾರಕ್ಕೆ ಬರೆಯುವ ಪತ್ರದಲ್ಲಿ ಇದರ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.

Also Read : ಧರ್ಮಸ್ಥಳ ತಲೆಬುರುಡೆ ಕೇಸ್‌: ಎಸ್‌ಐಟಿ ರಚನೆ, ಮುಂದೇನಾಗುತ್ತೆ ?

ಗೃಹ ಸಚಿವರ ಸ್ಪಷ್ಟನೆ :

ಈ ವರದಿಗಳ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದು, ಎಸ್‍ಐಟಿ ತಂಡದಿಂದ ಯಾವುದೇ ತನಿಖಾಧಿಕಾರಿಗಳು ಹಿಂದೆ ಸರಿದಿಲ್ಲ ಎಂದು ಹೇಳಿದ್ದಾರೆ.

ಎಸ್‍ಐಟಿ ಮುಖ್ಯಸ್ಥರಾಗಿ ಡಾ. ಪ್ರಣವ್ ಮೊಹಂತಿ ಅವರನ್ನು ನೇಮಿಸಲಾಗಿದ್ದು, ಅನುಚೇತ್, ಸೌಮ್ಯಲತಾ ಮತ್ತು ಜಿತೇಂದ್ರಕುಮಾರ್ ದಯಾಮ ತಂಡದ ಸದಸ್ಯರಾಗಿದ್ದಾರೆ.

ಸೌಜನ್ಯಾ ಪ್ರಕರಣ ಎಸ್‍ಐಟಿ ವ್ಯಾಪ್ತಿಗೆ ಬರುತ್ತದೆಯೇ ?

ಧರ್ಮಸ್ಥಳ ಸುತ್ತಮುತ್ತ ನಡೆದಿರುವ ಅಸಹಜ ಸಾವುಗಳ ತನಿಖೆಗಾಗಿ ಎಸ್‍ಐಟಿ ರಚಿಸಲಾಗಿದೆ. ಆದರೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಈ ಎಸ್‍ಐಟಿಯ ಕಾರ್ಯಸೂಚಿಯಲ್ಲಿ ಸೇರಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Also Read : ಒಂದೇ ವಧುವನ್ನು ಮದುವೆ ಆದ ಸಹೋದರರು

ಎಸ್‍ಐಟಿಯು ಧರ್ಮಸ್ಥಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಹಲವು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಲಿದೆ.

ಸದ್ಯಕ್ಕೆ, ಅನುಚೇತ್ ಮತ್ತು ಸೌಮ್ಯಲತಾ ಅವರು ಎಸ್‍ಐಟಿಯಿಂದ ಹೊರಹೋಗುವ ಕುರಿತು ಅಧಿಕೃತ ನಿರ್ಧಾರ ಹೊರಬಿದ್ದಿಲ್ಲ, ಗೃಹ ಸಚಿವರು ಇದನ್ನು ನಿರಾಕರಿಸಿದ್ದಾರೆ.

Dharmasthala Skull Case : Two IPS Officers Exit SIT!

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories