DIESEL Theft 5 Arrested : ಕುಂದಾಪುರದಲ್ಲಿ ಟ್ಯಾಂಕರ್‌ಗಳಿಂದ ಡಿಸೇಲ್‌ ಕಳವು : ಐವರ ಬಂಧನ

ಕುಂದಾಪುರ : ವಿಶ್ರಾಂತಿಗಾಗಿ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸುತ್ತಿದ್ದ ಟ್ಯಾಂಕರ್‌ಗಳಿಂದ ಡಿಸೇಲ್‌ ಕಳವು ಮಾಡುತ್ತಿರುವ ಕುರಿತು ಖಚಿತ ಮಾಹಿತಿಯ ಮೇಲೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನೇತೃತ್ವದ ತಂಡದ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿರುವ (DIESEL Theft 5 Arrested) ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಸಂಕದಗುಂಡಿ ಎಂಬಲ್ಲಿ ನಡೆದಿದೆ.

ಮಡಿಕೇರಿಯ ಮಾರ್ದಾಳ ನಿವಾಸಿ ಕಿರಣ್ (32 ವರ್ಷ ), ಪುತ್ತೂರಿನ ಮಹಮ್ಮದ್ ಮುಸ್ತಾಫ್ (34 ವರ್ಷ), ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯವರಾದ ಅಶೋಕ್(30 ವರ್ಷ ), ರೂಪೇಶ್ ಪೂಜಾರಿ(27 ವರ್ಷ ) ಹಾಗೂ ಶಿರೂರು ಅಳ್ವೆಗದ್ದೆಯ ಮೋಹನ ಪೂಜಾರಿ(42) ಬಂಧಿತ ಆರೋಪಿಗಳಾಗಿದ್ದಾರೆ. ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸುತ್ತಿದ್ದ ಟ್ಯಾಂಕರ್‌ಗಳಿಂದ 15 ರಿಂದ 20 ಲೀಟರ್ ಡಿಸೇಲ್ ಕಳವು ಮಾಡಿ ಕಡ್ಡ ಡಿಸೇಲ್‌ನ್ನು ಶಿರೂರಿನ ಮೋಹನ್‌ ಪೂಜಾರಿ ಅವರಿಗೆ ನೀಡುತ್ತಿರುವದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಶಿರೂರಿನ ರಾಷ್ಟ್ರೀಯ ಹೆದ್ದಾರಿ-66 ರ ಪಶ್ಚಿಮಕ್ಕೆ ಇರುವ ಖಾಲಿ ಜಾಗದಲ್ಲಿ ಚಾಲಕರು ಟ್ಯಾಂಕರ್‌ಗಳನ್ನು ನಿಲ್ಲಿಸುತ್ತಿದ್ದಂತೆಯೇ ಆರೋಪಿಗಳು ಪೈಪ್‌ ಬಳಸಿ ಡಿಸೇಲ್‌ ಕಳವು ಮಾಡುತ್ತಿದ್ದರು. ಆರೋಪಿಗಳಿಂದ ಕಳವು ಮಾಡಿದ್ದ ಡಿಸೇಲ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಬೈಂದೂರು ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಮತಾಂತರವೇ ಕಾರಣ

ಮಂಗಳೂರು : ಆತ ಚಾಲಕನಾಗಿದ್ರೆ, ಆಕೆ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ರು, ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ರು. ಆದರೆ ತಂದೆ ಪತ್ನಿ ಹಾಗೂ ಮಕ್ಕಳಿಗೆ ವಿಷವುಣಿಸಿ ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮಂಗಳೂರಿನ ಮಾರ್ಗನ್ಸ್‌ ಗೇಟ್‌ನಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಸ್ಪೋಟಕ ಟ್ವಿಸ್ಟ್‌ ಸಿಕ್ಕಿದೆ. ನಾಲ್ವರ ಆತ್ಮಹತ್ಯೆಗೆ ಮತಾಂತರವೇ ಕಾರಣ ಅನ್ನೋದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಬಾಗಲಕೋಟೆ ಜಿಲ್ಲೆಯ ಸುನಗ್ ಗ್ರಾಮದ ಬೀಳಗಿ ಮೂಲದ ನಾಗೇಶ್ ಶೇರಿಗುಪ್ಪಿ(30 ವರ್ಷ ), ವಿಜಯಲಕ್ಷ್ಮಿ(26 ವರ್ಷ), ಮಕ್ಕಳಾದ ಸಪ್ನಾ(8 ವರ್ಷ) ಮತ್ತು ಸಮರ್ಥ್(4 ವರ್ಷ ) ಆತ್ಮಹತ್ಯೆ ಮಾಡಿಕೊಂಡು ಸಾವಪ್ಪಿದ್ದರು. ಸಾವಿಗೂ ಮೊದಲು ನಾಗೇಶ್‌ ಶೇರಿಗುಪ್ಪ ಡೆತ್‌ನೋಟ್‌ನಲ್ಲಿ ಮತಾಂತರದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಆರಂಭಿಸಿದ್ದರು. ಆದರೀಗ ಕಟುಂಬದ ಸಾಮೂಹಿಕ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ ಅನ್ನೋದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಇದನ್ನೂ ಓದಿ : 10 Years Sentence : ಬೈಂದೂರು ಅಪ್ರಾಪ್ತ ನಾದಿನಿ ಅತ್ಯಾಚಾರ ಪ್ರಕರಣ : 10 ವರ್ಷ ಶಿಕ್ಷೆ, 20 ಸಾವಿರ ದಂಡ

ಇದನ್ನೂ ಓದಿ : ಯಡ್ತಾಡಿಯಲ್ಲಿ ಮಾರುತಿ ಸ್ವಿಫ್ಟ್‌ ಕಾರು- ರಿಕ್ಷಾ – ಬೈಕ್‌

ಇದನ್ನೂ ಓದಿ :

( DIESEL Theft 5 Arrested from tankers in Kundapura)

Comments are closed.