Opinion on Plastic Ban : ಶಾಲೆಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ; ಇಂತಹ ಕ್ರಮಗಳು ಇಂದಿನ ಅಗತ್ಯ

ಪ್ಲಾಸ್ಟಿಕ್ ಎಂಬ ಮಹಾಮಾರಿ ಭೂಮಿಗೆ ಎಷ್ಟು ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತಿದೆ. ಇದನ್ನು ನಿಷೇಧಿಸುವಂತೆ (Opinion on Plastic Ban ) ಒಂದಷ್ಟು ನಿಯಮಗಳು ಬಂದಿದ್ದರೂ, ಎಲ್ಲವೂ ಸ್ವಲ್ಪ ದಿನಗಳಲ್ಲಿ ಅವಗಣನೆಗೆ ಒಳಪಡುತ್ತಿತ್ತು. ಪ್ಲಾಸ್ಟಿಕ್ ಎಲ್ಲಾ ಕಡೆಗಳಲ್ಲೂ ಬಳಕೆ ಆಗುತ್ತಿದೆ. ಅದರಲ್ಲೂ ಶಾಲಾ ಕಾಲೇಜುಗಳ ಆವರಣದಲ್ಲಿ ತುಸು ಹೆಚ್ಚೇ ಬಳಕೆ ಆಗುತ್ತಿದೆ. ಇದು ಶಾಲಾ ಮಕ್ಕಳ ಆರೋಗ್ಯದ ಮೇಲು ಪರೋಕ್ಷವಾಗಿ ದುಷ್ಪರಿಣಾಮ ಬೀರುತ್ತಿತ್ತು.

ಇದನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಶಿಕ್ಷಣ ಇಲಾಖೆಯು (Karnataka Education Department) ರಾಜ್ಯದ ಎಲ್ಲಾ ಶಾಲೆಗಳು ಹಾಗೂ ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಆದೇಶ ಹೊರಡಿಸಿದೆ. ಇದನ್ನು ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿದ್ದು, ಕಟ್ಟು ನಿಟ್ಟಿನ ಪಾಲನೆ ಮಾಡುವಂತೆ ಹೇಳಲಾಗಿದೆ. ಈ ಆದೇಶ ಹೊರಬೀಳಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ (BC Nagesh) ಅವರು ಶಾಲೆ ಹಾಗೂ ಕಚೇರಿ ಭೇಟಿ ನೀಡಿದ ಸಂದರ್ಭದಲ್ಲಿ, ಅತಿಯಾದ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಗಮನಿಸಿದ್ದಾರೆ. ಶಾಲಾ ವಾತಾವಣರದಲ್ಲಿ ವಿಪರೀತ ಪ್ಲಾಸ್ಟಿಕ್ ಬಳಕೆಯನ್ನು ಕಂಡು ಶಿಕ್ಷನ ಸಚಿವರು ಆದೇಶ ಹೊರಡಿಸಿದ್ದಾರೆ. ಪ್ಲಾಸ್ಟಿಕ್ ಕವರ್, ತಟ್ಟೆ, ಫ್ಲೆಕ್ಸ್, ಲೋಟ, ಚಮಚ, ಡೆಕೋರೇಶನ್, ಪ್ಲಾಸ್ಟಿಕ್ ಧ್ವಜ ಹೀಗೆ ಯಾವುದೇ ಪ್ಲಾಸ್ಟಿಕ್‌ನಿಂದ ತಯಾರಿಸಿದ ಯಾವುದೇ ವಸ್ತುಗಳನ್ನು ಶಾಲಾ ಆವರಣದಲ್ಲಿ ಬಳಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಸ್ವಾಗತಾರ್ಹ ನಿಯಮ

ಸರ್ಕಾರ ಈಗಲಾದರೂ ಎಚೆತ್ತು, ಪ್ಲಾಸ್ಟಿಕ್ ನಿಷೇಧ ಕಾನೂನು ಹೊರಡಿಸಿರುವುದು ಬಹಳ ಉತ್ತಮ ನಿರ್ಧಾರ. ಈ ನಿಯಮ ಈ ಹಿಂದಿನ ನಿಯಮಗಳಂತೆ ಗಾಳಿಯಲ್ಲಿ ತೇಲಿಹೋಗದೆ, ಸರಿಯಾಗಿ ಪಾಲನೆ ಆದರೆ ಒಂದಷ್ಟು ಮಟ್ಟಿನ ಮಾಲಿನ್ಯ ನಿಯಂತ್ರಣಕ್ಕೆ ಬರಬಹುದು. ಜೊತೆಗೆ ವಿದ್ಯಾರ್ಥಿ ಜೀವನದಿಂದಲೇ ಮಕ್ಕಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಬಹುದು.

ಓರ್ವ ಸಾಮಾನ್ಯ ನಾಗರಿಕರಾಗಿ ನಾವು ಆದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬಹುದು. ಪ್ಲಾಸ್ಟಿಕ್ ಕವರ್ ಬದಲು ಬಟ್ಟೆ ಚೀಲ, ಸ್ಟೀಲ್ ಬಾಟಲಿ, ಟಿಫಿನ್ ಬಾಕ್ಸ್ ಹೀಗೆ ಎಲ್ಲವನ್ನೂ ಪ್ಲಾಸ್ಟಿಕ್ ಬದಲು ಪರ್ಯಾಯ ವ್ಯವಸ್ಥೆ ರೂಢಿಸಿಕೊಳ್ಳಬೇಕು. ದಿನನಿತ್ಯ ಅಥವಾ ಪ್ರಯಾಣದ ವೇಳೆ ಫುಡ್ ಪ್ಯಾಕ್ ಇತ್ಯಾದಿಗಳನ್ನು ಬಳಸದೆ ಇದ್ದರೆ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದಂತೆ.

ಕೇಂದ್ರ ಸರ್ಕಾರವೂ ಈಮುನ್ನ ಮಹತ್ವದ ನಿರ್ಣಯವೊಂದರಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿತ್ತು. ಜುಲೈ 2022 ರಿಂದ ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ ಸೇರಿದಂತೆ12 ರೀತಿಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಮೊದಲ ಹಂತವಾಗಿ ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆ ನಿಷೇಧಿಸಲಾಗಿತ್ತು. ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಬಾಕ್ಸ್, ಸ್ಟ್ರಾ, ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ಸ್ಪೂನ್, ಗ್ಲಾಸ್, ಬೋರ್ಡ್ ಗಳು, ಬೇಕರಿ ತಿನಿಸುಗಳ ಕವರ್, ಆಕಾಶ ಬುಟ್ಟಿ, ಇಯರ್ ಬಡ್ಸ್, ಸಿಗರೆಟ್ ಬಡ್ಸ್, ಬ್ಯಾನರ್ ಹೀಗೆ ಒಟ್ಟು12 ಬಗೆಯ ಪ್ಲಾಸ್ಟಿಕ್ ಉತ್ಪನ್ನಗಳ ನಿಷೇಧ ಮಾಡಲು ಕೇಂದ್ರ ಸರ್ಕಾರ ಮುಂದಾಗಿತ್ತು.

  • ತೇಜಸ್ವಿನಿ ಭಾರದ್ವಾಜ್

ಇದನ್ನೂ ಓದಿ: Opinion: ನೀವು ಯಾವ ಪಂಥೀಯರು?

( Opinion on Plastic Ban :Karnataka education department bans plastic use in schools)

Comments are closed.