ಹೆಜಮಾಡಿ ಭಾಗದ ಮೀನುಪ್ರಿಯರಿಗೆ ಬಂಪರ್ ಲಾಟರಿ : ಕಡಲ ತೀರದಲ್ಲಿಂದು ಮೀನಿನ ಸುಗ್ಗಿ
ಉಡುಪಿ ಜಿಲ್ಲೆ ಕಾಪು ತಾಲೂಕಿನ ಹೆಜಮಾಡಿ ಭಾಗದ ಮೀನು ಪ್ರಿಯರು ಇಂದು ಬೆಳ್ಳಂ ಬೆಳಗ್ಗೆ ಸಿಹಿ ಸುದ್ದಿಯನ್ನು ಕೇಳಿದ್ದಾರೆ. ಹೆಜಮಾಡಿ ಸಮುದ್ರ ತೀರದಲ್ಲಿ ಇಂದು ಭೂತಾಯಿ ಮೀನಿನ ಸುಗ್ಗಿಯೇ ನಡೆದಿದೆ. ಹೆಜಮಾಡಿ ಕಡಲ ತೀರದಲ್ಲಿ ಇಂದು ರಾಶಿ ರಾಶಿ ಭೂತಾಯಿ ಮೀನುಗಳು ಬಂದು ಬಿದ್ದಿದ್ದು ಮೀನುಪ್ರಿಯರು ಸಖತ್ ಖುಷ್ ಆಗಿದ್ದಾರೆ.
ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ಕೈರಂಪಣಿ ಬಳಿ ಬಲೆ ಬೀಸಿದ ಸಂದರ್ಭದಲ್ಲಿ ಅಚಾನಕ್ಕಾಗಿ ಸಮುದ್ರದ ತೀರಕ್ಕೆ ಲಕ್ಷಾಂತರ ಮೀನುಗಳು ಬಂದು ಬಿದ್ದಿವೆ. ಕೈಗೆ ಸಿಗದಷ್ಟು ಲಕ್ಷಾಂತರ ಮೀನುಗಳನ್ನು ಕಂಡು ಮೀನು ಕಂಡು ತೀರದ ನಿವಾಸಿಗಳ ಖುಷಿಗೆ ಪಾರವೇ ಇಲ್ಲದಂತಾಗಿತ್ತು.
ಇದನ್ನೂ ಓದಿ: ಮುಲ್ಕಿ ಕಂಬಳದಲ್ಲಿ ಬಹುಮಾನ ಗೆದ್ದ ಅನ್ಯಧರ್ಮೀಯನ ಬಳಿ ಹಫ್ತಾ ವಸೂಲಿಗೆ ಮುಂದಾದವರ ಬಂಧನ
ಬಕೆಟ್ಗಳಲ್ಲಿ, ಚೀಲಗಳಲ್ಲಿ ಮೀನು ತುಂಬಿಸಿಕೊಂಡು ಹೋದ ಸ್ಥಳೀಯ ನಿವಾಸಿಗಳು ಇಂದು ಬಂಪರ್ ಲಾಟರಿ ಹೊಡೆದಷ್ಟು ಖುಷಿಯಾಗಿದ್ದಾರೆ. ಇನ್ನು ಭೂತಾಯಿ ಮೀನನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಮೀನುಗಳು ದುಬಾರಿ ದರದಲ್ಲಿ ಮೀನು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇನ್ನು ಹೆಜಮಾಡಿ ಕಡಲ ತೀರದಲ್ಲಿ ಭೂತಾಯಿ ಮೀನುಗಳು ಪುಟಿದೇಳುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ



