fishermen are worried :ಕಡಲಿನಲ್ಲಿ ಪದೇ ಪದೇ ತೂಫಾನ್, ಆತಂಕದಲ್ಲಿ ಮೀನುಗಾರರು

ಮಂಗಳೂರು : fishermen are worried : ತಿಂಗಳ ಹಿಂದಷ್ಟೇ ಈ ವರ್ಷದ ಮೀನುಗಾರಿಕೆ ಋತು ಆರಂಭವಾಗಿತ್ತು. ಆದ್ರೆ ಮೀನುಗಾರಿಕೆ ಆರಂಭವಾದ ಬಳಿಕ ಪದೇ ಪದೇ ತೂಫಾನ್ ಏಳುತ್ತಿರುವುದರಿಂದ ಈ ಬಾರಿಯ ಮೀನುಗಾರಿಕೆ ಅತಂತ್ರವಾಗಿದೆ. ಇದರಿಂದ ಮೀನುಗಾರರು ಮುಂದೆ ಜೀವನ, ಬೋಟ್ ನಿರ್ವಹಣೆ ಹೇಗೆ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.

ಮಳೆಗಾಲದ ನಿಷೇಧದ ಅವಧಿ ಮುಗಿಯುತ್ತಿದ್ದಂತೆ ಭರಪೂರ ಮೀನು ಲಭ್ಯವಾಗುತಿತ್ತು. ಆದ್ರೆ ಈ ಭಾರಿ ಇದುವರೆಗೂ ಮೀನುಗಾರಿಕೆ ನಡೆಸುವ ಸೂಕ್ತ ವಾತಾವರಣವೇ ನಿರ್ಮಾಣವಾಗಿಲ್ಲ. ಆರಂಭದ ಮೀನುಗಾರಿಕೆಯಲ್ಲಿ ಸಿಗಡಿ ಮೀನುಗಾರಿಕೆ ನಡೆಯುತ್ತದೆ. ಸಣ್ಣ ಬೋಟ್ ಗಳಿಗೆ ಈ ಒಂದು ತಿಂಗಳ ದುಡಿಮೆಯೇ ಹೆಚ್ಚು ಇಂಪಾರ್ಟೆಂಟ್. ನಂತರದ ದುಡಿಮೆ ಅಷ್ಟಕಷ್ಟೇ ಎಂಬಂತೆ ಇರುತ್ತದೆ. ಲಕ್ಷಾಂತರ ರೂಗಳ ದುಡಿಮೆ ಆಗುತ್ತಿದ್ದ ಸಿಗಡಿ ಮೀನುಗಾರಿಕೆಯಲ್ಲಿ ಈ ವರ್ಷ ಕೆಲ ಬೋಟ್ ಗಳು ಐದು ಸಾವಿರವು ಲಾಭ ಪಡೆದಿಲ್ಲ.

ಪದೇ ಪದೇ ತೂಫಾನ್ ಎದ್ದರೆ ಮೀನುಗಾರಿಕೆ ನಡೆಸುವುದು ಕಷ್ಟಸಾಧ್ಯವಾಗುತ್ತದೆ. ತೂಫಾನ್ ಈ ಮೀನುಗಾರಿಕೆ ಅವಧಿಯನ್ನೇ ನುಂಗಿ ಹಾಕುತ್ತದೆ. ಈ ಬಾರಿಯ ಮೀನುಗಾರಿಕೆ ಋತು ಆರಂಭವಾದ ಮರುದಿನವೇ ತೂಫಾನ್ ಎದ್ದು ಬೋಟ್ ಗಳು ಬಂದರಿನಲ್ಲಿ ಲಂಗರು ಹಾಕಿ ನಿಂತವು. ವಾರದ ಬಳಿಕ ಮೀನುಗಾರಿಕೆ ಚಿಗುರಿದರು ಕೆಲ ದಿನಗಳ ಬಳಿಕ ಮತ್ತೆ ತೂಫಾನ್ ಎದ್ದಿತು. ಇದೀಗ ಮೂರನೇ ಬಾರಿ ತೂಫಾನ್ ನಿಂದಾಗಿ ಕಡಲ ಮೀನುಗಾರಿಕೆಗೆ ಸಂಕಷ್ಟ ಎದುರಾಗಿದೆ. ಉತ್ತರಕನ್ನಡ ಜಿಲ್ಲೆಯ ಬೈತಕೋಲ್ ಬಂದರು, ಉಡುಪಿ, ಮಂಗಳೂರಿನ ಬಂದರುಗಳಲ್ಲಿಯೂ ಬೋಟ್ ಗಳು ನಿಂತಿದೆ. ಕೆಲ ಬೋಟ್ ನ ಮೀನುಗಾರರು ತಮ್ಮ ಜೀವದ ಹಂಗು ತೊರೆದು ಮೀನುಗಾರಿಕೆ ನಡೆಸುವ ಸಾಹಸವನ್ನು ಮಾಡುತ್ತಿದ್ದಾರೆ.

ಮೀನುಗಾರಿಕೆ ವೃತ್ತಿಯೇ ಅನಿಶ್ಚಿತತೆ ಕಸುಬು. ಯಾಕೆಂದರೆ ಮತ್ಸ್ಯ ಸಂಪತ್ತು ಯಾವಾಗ ಸಿಗುತ್ತದೆ ಎಂದು ಊಹಿಸುವುದೇ ಕಷ್ಟ. ಕೆಲವು ಬಾರಿ ಭರಪೂರ ಮೀನು ಸಿಕ್ಕರೆ, ಇನ್ನು ಕೆಲವು ಸಲ ಬರೀ ಕೈಯಲ್ಲಿಯೇ ಹಿಂದುರಿಗಬೇಕಾದ ಪರಿಸ್ಥಿತಿಯು ಇರುತ್ತದೆ. ಅದರಲ್ಲಿಯೂ ಈ ರೀತಿಯ ತೂಫಾನ್ ಎದ್ದರೆ ಸಣ್ಣ ಬೋಟ್ ಗಳಿಗೆ ಮೀನುಗಾರಿಕೆ ನಡೆಸುವುದೇ ಸಾಧ್ಯವಾಗುದಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಕಡೆಯಿಂದ ಮೀನುಗಾರರು ಸಾಹಸದಿಂದ ಮೀನುಗಾರಿಕೆ ನಡೆಸಲು‌ ಸಮುದ್ರ ಕಡೆ ತೆರಳಿದರೆ ಇತ್ತ ಮೀನುಗಾರ ಮನೆಯವರು ಆತಂಕದಲ್ಲೇ ಮನೆಯವರು ಬರುವ ದಾರಿಯನ್ನು ಕಾಯುತ್ತಿರುತ್ತಾರೆ. ಈ ಬಾರಿ ಎದ್ದಿರುವ ತೂಫಾನ್ ಇನ್ನು ಕೆಲವಯ ದಿನಗಳ ಕಾಲ ಮುಂದುವರಿಯು ಸಾಧ್ಯತೆಯಿದೆ‌. ಒಟ್ಟಿನಲ್ಲಿ ಇನ್ನು ಮುಂದಿನ ದಿನದಲ್ಲಾದರೂ ಸಮುದ್ರರಾಜ ಶಾಂತನಾಗಿ ಸಮೃದ್ಧ ಮೀನುಗಾರಿಕೆ ನಡೆಯುವಂತಾಗಲಿ.

ಇದನ್ನು ಓದಿ : Comeback Ajinkya Rahane: “ಆಯ್ಕೆಗಾರರೇ ಈಗೆನ್ನುತ್ತೀರಿ..” ನನ್ನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಈ ದ್ವಿಶತಕ ಸಾಕಲ್ಲವೇ?

ಇದನ್ನೂ ಓದಿ : SIIMA 2022 : ಪುನೀತ್‌ ರಾಜ್ ಕುಮಾರ್‌ ಗೆ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ

Frequent storms in the sea, fishermen are worried

Comments are closed.