ಹಿಂದೂ ದೇಗುಲದ ಎದುರು ದಫ್​ ಪ್ರದರ್ಶನಕ್ಕೆ ಭಾರೀ ವಿರೋಧ : ಕಾರ್ಯಕ್ರಮ ರದ್ದುಗೊಳಿಸಿದ ಆಯೋಜಕರು

ಹಿಂದೂಪರ ಸಂಘಟನೆಗಳಿಂದ ಭಾರೀ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಚನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ದಫ್​ ಪ್ರದರ್ಶನವನ್ನು ಕೈ ಬಿಡಲಾಗಿದೆ. ದೇಗುಲದ ಎದುರು ದಫ್​ ಪ್ರದರ್ಶನಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂಪರಿಷತ್​ ಹಾಗೂ ಬಜರಂಗದಳ ಕಾರ್ಯಕರ್ತರು ಹೇರಿದ ತೀವ್ರ ಒತ್ತಡಕ್ಕೆ ಕಾರ್ಯಕ್ರಮ ಆಯೋಜಕರು ಮಣಿದಿದ್ದಾರೆ.
ಕೆಜಿವಿ ಸುಳ್ಯ ಹಬ್ಬ ಸಮಾಜ ಸಂಘದ ವತಿಯಿಂದ ಸುಳ್ಯ ತಾಲೂಕಿನ ಚನ್ನಕೇಶವ ದೇವಸ್ಥಾನದ ಎದುರು ಡಿಸೆಂಬರ್​ 25 ಹಾಗೂ 26ರಂದು ಕೆವಿಜಿ ಸುಳ್ಯ ಹಬ್ಬ – 2025ನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಂಗಳೂರು ಇವರಿಂದ ದಫ್​ ಪ್ರದರ್ಶನ ನಡೆಯಬೇಕಿತ್ತು. ಆಮಂತ್ರಣ ಪತ್ರಿಕೆಗಳಲ್ಲಿ ಚನ್ನಕೇಶವ ದೇಗುಲದ ಮುಂಭಾಗದಲ್ಲಿ ದಫ್​ ಪ್ರದರ್ಶನದ ಬಗ್ಗೆ ನಮೂದಿಸಲಾಗಿತ್ತು. ಇದು ವಿಎಚ್​ಪಿ ಹಾಗೂ ಬಜರಂಗಳದಳ ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿತ್ತು.

ಇದನ್ನೂ ಓದಿ: ಬೆಂಗಳೂರಿಗರ ಹೊಸ ವರ್ಷಾಚರಣೆ ಸಂಭ್ರಮದ ಮೇಲೆ ಆ‌ರ್ ಸಿಬಿ ದುರಂತ ಕರಿನೆರಳು : ಎಂಜಿರೋಡ್‌ನಲ್ಲಿ ಸೆಬೇಷನ್‌ಗೆ ಬೀಳುತ್ತಾ ಬ್ರೇಕ್!

ಈ ಹಿನ್ನೆಲೆಯಲ್ಲಿ ಆಕ್ರೋಶ ಹೊರ ಹಾಕಿದ ಹಿಂದೂಪರ ಸಂಘಟನೆ ಕಾರ್ಯಕರ್ತರು, ಹಿಂದೂ ದೇವಾಲಯದ ಎದುರು ದಫ್​ ಪ್ರದರ್ಶನ ನಡೆಸಿದರೆ , ಮಸೀದಿಯ ಎದುರು ಹನುಮಾನ ಚಾಲೀಸಾ ಆಯೋಜಿಸುವುದಾಗಿ ಎಚ್ಚರಿಕೆ ನೀಡಿದ್ದರು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಘಟನೆ ನಡೆಯಬಾರದು ಎಂದು ಕಾರ್ಯಕ್ರಮ ಆಯೋಜಕರಿಗೆ ತಾಕೀತು ಮಾಡಿದ್ದರು . ಈ ಹಿನ್ನೆಲೆಯಲ್ಲಿ ದಫ್​ ಪ್ರದರ್ಶನಕ್ಕೆ ಬ್ರೇಕ್​ ಹಾಕಲಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories