Kanthara’s real incident: ಕಾಂತಾರ ನೆನಪಿಸಿದ ನೈಜ ಘಟನೆ: ದೈವಕೋಲದ ವಿಚಾರದಲ್ಲಿ ಕೋರ್ಟ್‌ ಮೆಟ್ಟಿಲೇರಿದ ವ್ಯಕ್ತಿ ನಿಗೂಢ ಸಾವು

ಉಡುಪಿ: (Kanthara’s real incident) ಕಾಂತಾರ ಚಿತ್ರಕ್ಕೆ ಹೋಲುವಂತೆ ಉಡುಪಿಯಲ್ಲಿ ನೈಜ ಘಟನೆಯೊಂದು ನಡೆದಿದೆ. “ಕೋರ್ಟ್‌ ಗೆ ಹೋಗ್ತಿ, ಆದರೆ ನಿನ್ನ ತೀರ್ಮಾನ ನಾನು ಮೆಟ್ಟಿಲಲ್ಲಿ ಮಾಡ್ತೇನೆ” ಎಂಬ ಪಂಜುರ್ಲಿ ದೈವದ ನುಡಿಯನ್ನು ಲೆಕ್ಕಿಸದೇ ಕೋರ್ಟ್‌ ಮೆಟ್ಟಿಲೇರಿದ ವ್ಯಕ್ತಿ ಕೋರ್ಟ್‌ ಮೆಟ್ಟಿಲಲ್ಲಿ ರಕ್ತ ಕಾರಿ ಸಾವನ್ನಪ್ಪುತ್ತಾನೆ. ಇಂತಹದೇ ಒಂದು ಘಟನೆ ಉಡುಪಿಯಲ್ಲಿ ನಡೆದಿದ್ದು, ಉಡುಪಿ ಜಿಲ್ಲೆಯ ಪಡುಬಿದ್ರಿ ತಾಲೂಕಿನ ಪಡುಹಿತ್ಲು ಗ್ರಾಮದಲ್ಲಿ ದೈವಕೋಲದ ವಿಚಾರವಾಗಿ ಕೋರ್ಟ್‌ ಮೆಟ್ಟಲೇರಿದ್ದ ವ್ಯಕ್ತಿ ದೈವದ ತುಂಬಿಲ ಸೇವೆ ಸಂದರ್ಭದಲ್ಲಿ ದೈವಸ್ಥಾನದ ಎದುರೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಪಡುಹಿತ್ಲು ಗ್ರಾಮದಲ್ಲಿ ಜಾರಂದಾಯ ಬಂಟ ದೈವಸ್ಥಾನದಲ್ಲಿ ವರ್ಷಕ್ಕೊಮ್ಮೆ ನೇಮೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಸಮಸ್ತ ಊರ ಮಂದಿ ಈ ನೇಮೋತ್ಸವದಲ್ಲಿ ಭಾಗಿಯಾಗುತ್ತಾರೆ . ಈ ದೈವಸ್ಥಾನವನ್ನು ನೋಡಿಕೊಳ್ಳಲು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿ ಎಂಬ ಸಮಿತಿ ಇದ್ದು, ಇದಕ್ಕೆ ಪ್ರಕಾಶ್‌ ಶೆಟ್ಟಿ ಎನ್ನುವವರು ಅಧ್ಯಕ್ಷರಾಗಿದ್ದು, ಸಮಿತಿ ಬದಲಾವಣೆಯಿಂದಾಗಿ ತಮ್ಮ ಅಧಿಕಾರ ಕಳೆದುಕೊಳ್ಳುತ್ತಾರೆ.

ಇದರ ನಂತರದಲ್ಲಿ ಪ್ರಕಾಶ್‌ ಶೆಟ್ಟಿ ಅಧಿಕಾರದ ಆಸೆಗೆ ಪ್ರತ್ಯೇಕ ಟ್ರಸ್ಟ್‌ ರಚಿಸಿ, ಬಂಡಾರ ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಇದರ ಅಧ್ಯಕ್ಷರಾಗಿ ನೇಮಿಸುತ್ತಾರೆ. ದೈವಸ್ಥಾನ ತಮಗೆ ಸೇರಿದ್ದು ಎಂಬ ಅಧಿಕಾರದ ಹಕ್ಕನ್ನು ಸ್ಥಾಪಿಸಲು ಜಯ ಪೂಜಾರಿ ಯತ್ನಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿ ಜನವರಿ 7 ರಂದು ಕೋಲ ನಡೆಸಲು ತೀರ್ಮಾನಿಸಲಾಗುತ್ತದೆ. ಇದಕ್ಕೆ ವಿರುದ್ದವಾಗಿ ನ್ಯಾಯಾಲಯದ ಮೆಟ್ಟಿಲೇರಿ ಕೋಲಕ್ಕೆ ತಡೆಯಾಜ್ಞೆ (Kanthara’s real incident) ತರುವಲ್ಲಿ ಜಯ ಪೂಜಾರಿ ಯಶಸ್ವಿಯಾಗುತ್ತಾರೆ.

ಡಿಸೆಂಬರ್‌ 23 ಕ್ಕೆ ತಡೆಯಾಜ್ಞೆ ತಂದ ಜಯಪೂಜಾರಿ ಡಿಸೆಂಬರ್‌ 24 ರಂದು ನಡೆಯುತ್ತಿದ್ದ ಕೊಡಮಣಿತ್ತಾಯ ದೈವದ ತಂಬಿಲ ಸೇವೆ ಸಂದರ್ಭದಲ್ಲಿ ಎಲ್ಲರೆದುರೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ (Kanthara’s real incident).

ಆದರೆ ದೈವದ ಮನೆಯ ಮುಂದೆ ಸಾವನ್ನಪ್ಪಿದ ಜಯಪೂಜಾರಿ ಅವರ ಈ ಸಾಹಸ ಕೋರ್ಟ್‌ ಗೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಾಗಿ ಜಾರಂದಾಯ ದೈವಸ್ಥಾನದ ದೈವ ನರ್ತಕ ಭಾಸ್ಕರ ಬಂಗೇರ ಅವರನ್ನು ಬೆದರಿಸಿ ತಾವು ಹೇಳುವ ಹಾಗೆ ದೈವದ ರೀತಿಯಲ್ಲಿ ನುಡಿ ಕೊಡಬೇಕು ಎಂದು ಬೆದರಿಸಿರುವುದಾಗಿ ದೈವ ನರ್ತಕ ಭಾಸ್ಕರ ಬಂಗೇರ ಆರೋಪಿಸಿದ್ದಾರೆ. ಹಣದ ಆಮೀಷವೊಡ್ಡಿ ನಾವು ಹೇಳಿದ ಹಾಗೆ ನುಡಿ ಕೊಡಬೇಕು ಇಲ್ಲದೇ ಇದ್ದಲ್ಲಿ ನೀನು ಹೇಗೆ ಕೋಲ ಕಟ್ಟುತ್ತಿ ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ : Kaavi art revival: ಕಾವಿ ಕಲೆಗೆ ಪುನರುಜ್ಜೀವನ : ಕದಿಕೆ ಟ್ರಸ್ಟ್‌ ಜೊತೆ ಕೈ ಜೋಡಿಸಿದ ವಿಶ್ವ ಕೊಂಕಣಿ ಕೇಂದ್ರ

ಇದೀಗ ಕೋರ್ಟ್‌ ಮೆಟ್ಟಿಲೇರಿದ್ದ ಜಯಪೂಜಾರಿ ಅವರ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಇಂದು ಕೋಲ ನಡೆಸಲು ಟ್ರಸ್ಟ್‌ ತೀರ್ಮಾನ ಮಾಡಿದರೆ ಸಮಿತಿಯು ಕೋಲ ನಡೆಸದಂತೆ ಪಟ್ಟು ಹಿಡಿದಿದೆ. ಟ್ರಸ್ಟ್‌ ಹಾಗೂ ಸಮಿತಿಯ ಈ ವಾಗ್ವಾದದ ಹಿನ್ನಲೆಯಲ್ಲಿ ಜಾರಂದಾಯ ದೈವಸ್ಥಾನದ ಸುತ್ತ ಪೊಲೀಸ್‌ ಬಂದೋ ಬಸ್ತ್‌ ಕೈಗೊಳ್ಳಲಾಗಿದ್ದು, ಸೂತಕದ ಹಿನ್ನಲೆ ಕೋಲ ನಡೆಸದಿರಲು ತೀರ್ಮಾನಿಸಲಾಗಿದೆ.

In Paduhitlu village of Padubidri taluk of Udupi district, a man who had appeared in court regarding the issue of deity fell down and died in front of the deity during the tumbila service of the deity.

Comments are closed.