Peanut-Til Barfi: ಸಂಕ್ರಾಂತಿಗೆ ಮನೆಯಲ್ಲಿಯೇ ತಯಾರಿಸಿ ಶೇಂಗಾ–ಎಳ್ಳು ಬರ್ಫಿ

ಸಂಕ್ರಾಂತಿ (Makara Sankranti-2023) ಚಳಿಗಾಲದಲ್ಲಿ ಬರುವ ಹಬ್ಬ (Winter Festival). ಎಳ್ಳು–ಬೆಲ್ಲ ತಿಂದು ಒಳ್ಳೆ ಮಾತಾಡೋಣ ಎಂದು ಈ ಹಬ್ಬದಲ್ಲಿ ಒಬ್ಬರಿಗೊಬ್ಬರು ಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ. ಹಾಗೆ ಎಳ್ಳು, ಬೆಲ್ಲ, ಶೇಂಗಾಗಳಿಂದ ತಯಾರಿಸಿದ ಸಿಹಿ ತಿನಿಸುಗಳನ್ನು (Peanut-Til Barfi) ಮಾಡುವುದು ಈ ಹಬ್ಬದ ವಿಶೇಷ. ಸಾಮಾನ್ಯವಾಗಿ ಎಳ್ಳಿನ ಉಂಡೆ, ಶೇಂಗಾ ಹೋಳಿಗೆ, ಶೇಂಗಾ ಉಂಡೆಗಳನ್ನು ತಯಾರಿಸುತ್ತಾರೆ. ಎಳ್ಳು ಫೈಬರ್‌, ಐರನ್‌, ಕಾಪರ್‌,ವಿಟಮಿನ್‌ ಇ, ವಿಟಮಿನ್‌ ಬಿ, ಕ್ಯಾಲ್ಸಿಯಂ, ಆರೋಗ್ಯಕರ ಫ್ಯಾಟ್‌ನಿಂದ ಕೂಡಿದೆ. ಈ ಪ್ರಮುಖ ಅಂಶಗಳು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಿಸುತ್ತದೆ. ಶೇಂಗಾವು ಅತಿ ಹೆಚ್ಚಿನ ಫೈಬರ್‌ ಅನ್ನು ಹೊಂದಿದೆ. ಒಮೆಗಾ–3 ಫ್ಯಾಟಿ ಆಸಿಡ್‌ ಮತ್ತು ಪ್ರೋಟೀನ್‌ಗಳ ಹೊಂದಿದ್ದು ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಶೇಂಗಾ–ಎಳ್ಳು ಬರ್ಫಿ ತಿನ್ನುವುದು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಪೂರೈಸಲು ಉತ್ತಮವಾಗಿದೆ.

ಈ ವರ್ಷದ ಸಂಕ್ರಾಂತಿಗೆ ಎಳ್ಳು, ಶೇಂಗಾದಿಂದ ಮನೆಯಲ್ಲಿಯೇ ಬರ್ಫಿ ತಯಾರಿಸಿ. ಶೇಂಗಾ–ಎಳ್ಳು ಬರ್ಫಿ ತಯಾರಿಸುವುದು ಬಹಳ ಸುಲಭ. ಬರ್ಫಿ ತಯಾರಿಸುವು ಕ್ರಮ ಇಲ್ಲಿದೆ.

Peanut-Til Barfi : ಶೇಂಗಾ–ಎಳ್ಳು ಬರ್ಫಿ ತಯಾರಿಸುವುದು ಹೇಗೆ ?

ಬೇಕಾಗುವ ಪದಾರ್ಥಗಳು :
ಶೇಂಗಾ – 1/2 ಕಪ್‌
ಎಳ್ಳು – 1 ಕಪ್‌
ಬೆಲ್ಲ ಅಥವಾ ಸಕ್ಕರೆ– 1 ಕಪ್‌
ಏಲಕ್ಕೆ ಪುಡಿ– ಅರ್ಧ ಚಮಚ
ಒಣ ಕೊಬ್ಬರಿ ತುರಿ– ಎರಡು ಚಮಚ
ತುಪ್ಪ– ಒಂದು ಚಮಚ

ತಯಾರಿಸುವ ವಿಧಾನ:
ಮೊದಲಿಗೆ ಶೇಂಗಾ ಮತ್ತು ಎಳ್ಳನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಶೇಂಗಾದ ಮೇಲಿನ ಸಿಪ್ಪೆ ಬಿಡಿಸಿ. ಮೂರೂ ಪದಾರ್ಥಗಳನ್ನು ಮಿಕ್ಸರ್‌ ಜಾರ್‌ಗೆ ಹಾಕಿ ಒಂದು ಸುತ್ತ ಗ್ರೈಂಡ್‌ ಮಾಡಿಕೊಳ್ಳಿ.

ಒಂದು ದಪ್ಪ ತಳದ ಪಾತ್ರೆಗೆ ಬೆಲ್ಲ ಅಥವಾ ಸಕ್ಕರೆ ಹಾಕಿ. ಅದಕ್ಕೆ ಅರ್ಧ ಕಪ್ಪ ನೀರು ಸೇರಿಸಿ, ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಸ್ಟೋವ್‌ ಹಚ್ಚಿ ಸಣ್ಣ ಉರಿಯಲ್ಲಿ ಒಂದು ಎಳೆ ಪಾಕ ತರಿಸಿ. ನಂತರ ಗ್ರೈಂಡ್‌ ಮಾಡಿಟ್ಟುಕೊಂಡ ಪದಾರ್ಥಗಳನ್ನು ಸೇರಿಸಿ. ಬರ್ಫಿ ಹದ ಬಂದ ಮೇಲೆ ಅದನ್ನು ತುಪ್ಪ ಸವರಿದ ಪ್ಲೇಟ್‌ಗೆ ಹಾಕಿ. ಅದು ಆರಿದ ಮೇಲೆ ಚೌಕಾಕಾರದಲ್ಲಿ ಕತ್ತರಿಸಿ. ಈಗ ಶೇಂಗಾ–ಎಳ್ಳು ಬರ್ಫಿ ಸವಿಯಲು ರೆಡಿ.

ಇದನ್ನೂ ಓದಿ: Diabetes : ಕಡಿಮೆ ಗ್ಲೈಸೆಮಿಕ್‌ ಇಂಡೆಕ್ಸ್‌ ಹೊಂದಿರುವ ಈ ಹಣ್ಣುಗಳು ಮಧುಮೇಹಿಗಳಿಗೂ ಬೆಸ್ಟ್‌

ಇದನ್ನೂ ಓದಿ: Walnut Benefits During Pregnancy: ಪ್ರಗ್ನೆನ್ಸಿ ಮತ್ತು ವಾಲ್ನಟ್‌; ನಿಮ್ಮ ಮಗುವಿನ ಬೆಳವಣಿಗೆಗೆ ಇದು ಸೂಪರ್‌ ಫುಡ್‌

(How to make Peanut-Til Barfi for Makar Sankranti)

Comments are closed.