Karnataka assembly election : ಅಬಕಾರಿ ಅಕ್ರಮ ತಡೆಗೆ ವಿಶೇಷ ತಂಡ

ಉಡುಪಿ : (Karnataka assembly election) ರಾಜ್ಯ ವಿಧಾನಸಭಾ ಚುನಾವಣೆ 2023 ಸಮೀಪಿಸುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ, ಜಾರಿ ಮತ್ತು ತನಿಖೆ ಕಾರ್ಯಗಳನ್ನು ಚುರುಕುಗೊಳಿಸಿ, ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಜಿಲ್ಲಾ ಅಬಕಾರಿ ಉಪ ಆಯುಕ್ತರು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆ, ಮತದಾರರನ್ನು ಸೆಳೆಯಲು ನಕಲಿ/ ಕಳಪೆ ಮಟ್ಟದ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿಗಳನ್ನು ತಯಾರಿಸಿ, ಸಾಗಾಣಿಕೆ ಹಾಗೂ ಶೇಖರಣೆ ಮಾಡಿ, ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿತರಿಸುವ ಸಾಧ್ಯತೆಗಳು ಹೆಚ್ಚಿವೆ. ಇದನ್ನು ಸೇವನೆ ಮಾಡಿದವರ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ. ಕೆಲವು ಸಮಾಜ ಘಾತುಕರು ಅಕ್ರಮವಾಗಿ ಆದಾಯ ಗಳಿಸಲು ತೆರಿಗೆ ಪಾವತಿಸಿರುವ ಮದ್ಯವನ್ನು ಖರೀದಿಸಿ, ದಾಸ್ತಾನು ಇಟ್ಟು, ಅದನ್ನು ಚುನಾವಣೆಯ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಾಧ್ಯತೆ ಹೆಚ್ಚಾಗಿ ಇರುವುದರಿಂದ ಇಂತಹ ಕಾರ್ಯಗಳನ್ನು ತಡೆಗಟ್ಟಿ ಅಂತಹವರ ವಿರುದ್ಧ ಅಬಕಾರಿ ಇಲಾಖೆ ವತಿಯಿಂದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ, ಜಾರಿ ಮತ್ತು ತನಿಖೆ ಕಾರ್ಯಗಳನ್ನು ಚುರುಕುಗೊಳಿಸಿ, ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ, ನಕಲಿ, ಕಳ್ಳಭಟ್ಟಿ, ಅನಧಿಕೃತ ಮದ್ಯ ತಯಾರಿ, ಸಾಗಾಣಿಕೆ, ದಾಸ್ತಾನು ಮತ್ತು ಮಾರಾಟ ಕಂಡುಬಂದಲ್ಲಿ ಈ ಕೆಳಗೆ ನೀಡಲಾದ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಟೋಲ್ ಫ್ರೀ ನಂ: 1800 4250 732
ಉಡುಪಿ ದೂ.ಸಂಖ್ಯೆ: 0820-2532732
ಕುಂದಾಪುರ ದೂ.ಸಂಖ್ಯೆ: 08254-200902
ಕಾರ್ಕಳ ದೂ.ಸಂಖ್ಯೆ: 08258-298865

ತಾಲೂಕು ಕಂಟ್ರೋಲ್ ರೂಂ ಅಥವಾ ಅಬಕಾರಿ ಅಧಿಕಾರಿಗಳ ಸಂಚಾರಿ ದೂರವಾಣಿ ಸಂಖ್ಯೆ
ಜಿಲ್ಲಾ ಅಬಕಾರಿ ಉಪ ಆಯುಕ್ತರು ಮೊ.ನಂ : 9449597104
ಉಡುಪಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಮೊ.ನಂ : 9449597113
ಕುಂದಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಮೊ.ನಂ : 9449597777
ಉಡುಪಿ ಉಪ ವಿಭಾಗದ ಅಬಕಾರಿ ನಿರೀಕ್ಷಕರು ಮೊ.ನಂ : 9449597114
ಕುಂದಾಪುರ ಉಪ ವಿಭಾಗದ ಅಬಕಾರಿ ನಿರೀಕ್ಷಕರು ಮೊ.ನಂ : 9449597778
ಉಡುಪಿ ವಲಯ-1 ಅಬಕಾರಿ ನಿರೀಕ್ಷಕರು ಮೊ.ನಂ : 9448921980
ಉಡುಪಿ ವಲಯ-2 ಅಬಕಾರಿ ನಿರೀಕ್ಷಕರು ಮೊ.ನಂ : 9731860034
ಕಾರ್ಕಳ ವಲಯ ಅಬಕಾರಿ ನಿರೀಕ್ಷಕರು ಮೊ.ನಂ : 9686198924
ಕುಂದಾಪುರ ವಲಯ ಅಬಕಾರಿ ನಿರೀಕ್ಷಕರು ಮೊ.ನಂ : 9731674117
\ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರು ಮೊ.ನಂ : 9035773785 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Karnataka weather : ಕರಾವಳಿ ಸೇರಿ‌ ರಾಜ್ಯದ ಹಲವೆಡೆ 5 ದಿನ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

Karnataka assembly election: Special team to prevent illegal excise duty

Comments are closed.