Karnataka Weather Report : 24 ಗಂಟೆಗಳಲ್ಲಿ ಕರ್ನಾಟಕ ಈ ಜಿಲ್ಲೆಗಳಲ್ಲಿ ಭಾರೀ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

Karnataka Weather Report : ಕರ್ನಾಟಕ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಸೇರಿದಂತೆ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಬೆಂಗಳೂರು : Karnataka Weather Report : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ವಾಯುವ್ಯದಿಂದ ಬೀಸುತ್ತಿರುವ ಗಾಳಿಯ ಪ್ರಭಾವದಿಂದ ಕರ್ನಾಟಕ ರಾಜ್ಯದಲ್ಲಿ ಬಾರೀ ಮಳೆ ಸುರಿಯಲಿದೆ. ಅದ್ರಲ್ಲೂ ಕರ್ನಾಟಕ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಸೇರಿದಂತೆ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನು ನೀಡಿದೆ

Karnataka Heavy Rain Alert IMD Issued Yellow Alert In These Districts
Image Credit to Original Source

ರಾಜ್ಯ ರಾಜಧಾನಿ ಬೆಂಗಳೂರು, ಕರಾವಳಿ, ಮಲೆನಾಡು ಹಾಗೂ ಒಳನಾಡಿನಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಸುರಿಯಲಿದೆ. ಅದ್ರಲ್ಲೂ ಮುಂದಿನ 24 ಗಂಟೆಗಳ ಅವಧಿಯಲ್ಲಿ ಚಂಡಮಾರುತದ ವೇಗ ಗಂಟೆಗೆ 30-40 ಕಿ.ಮೀ.ಗಿಂತಲೂ ಅಧಿಕವಾಗಿ ಇರಲಿದೆ. ಇನ್ನು ಕರಾವಳಿ ಕರ್ನಾಟಕದಲ್ಲಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಚಂಡಮಾರುತ ಬೀಸಲಿದೆ.

ಇದನ್ನೂ ಓದಿ : ಉಚಿತ ಬಸ್‌ ಪ್ರಯಾಣ : ಶಕ್ತಿಯೋಜನೆಯಡಿ ಮಹಿಳೆಯರು ಸ್ಮಾರ್ಟ್‌ ಕಾರ್ಡ್‌ ಮಾಡಿಸದಿದ್ರೆ ಉಚಿತ ಪ್ರಯಾಣ ರದ್ದು

ಚಂಡಮಾರುತದ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮೀನುಗಾರರು ಮುಂದಿನ ೨೪ ಗಂಟೆಗಳ ಅವಧಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಸೂಚನೆಯನ್ನು ನೀಡಲಾಗಿದೆ. ಇನ್ನು ಸಮುದ್ರ ತೀರಕ್ಕೆ ತೆರಳುವ ಪ್ರವಾಸಿಗರು ಕೂಡ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ಇನ್ನು ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಬೆಳಗಿನ ಅವಧಿಯಲ್ಲಿ ಬಿಸಿಲಿನಿಂದ ಕೂಡಿರಲಿದ್ದು, ಮಧ್ಯಾಹ್ನದ ಅವಧಿಯಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಸಂಜೆ ಅಥವಾ ರಾತ್ರಿಯ ವೇಳೆಯಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೇ ಬಲವಾದ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

karnataka-heavy-rain-alert-imd-issued-yellow-alert-in-these-districts
Image Credit to Original Source

ಇನ್ನು ಕರ್ನಾಟಕ ರಾಜ್ಯದ ಹಲವು ಕಡೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಮಡಿಕೇರಿಯ ಭಾಗಮಂಡಲ, ಪೊನ್ನಂಪೇಟೆ ಯಲ್ಲಿ ತಲಾ 4 ಸೆಂ.ಮೀ ಹಾಗೂ ಸಿದ್ದಾಪುರ, ಉಡುಪಿ ಜಿಲ್ಲೆಯ ಕುಂದಾಪುರ, ಕೊಲ್ಲೂರು ಸೇರಿದಂತೆ ಪುತ್ತೂರು, ಕಮ್ಮರಡಿ, ನಾಪೋಕ್ಲುವಿನಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.

ಇದನ್ನೂ ಓದಿ : ಕೋವಿಡ್‌ ಅಕ್ರಮ ನ್ಯಾಯಾಂಗ ತನಿಖೆ ಸಂಕಷ್ಟ : ಆರೋಗ್ಯ ಇಲಾಖೆ ಅಧಿಕಾರಿಗಳು, ಸುಧಾಕರ್ ಗೆ ಎದೆಯಲ್ಲಿ ಢವ ಢವ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಗೇರುಸೊಪ್ಪಾ, ಕದ್ರಾ, ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ, ಬೆಳ್ತಂಗಡಿ, ಮಂಗಳೂರು ವಿಮಾನ ನಿಲ್ದಾಣ, ಪಣಂಬೂರು, ಕಾರ್ಕಳ, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಖಜೂರಿ, ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಎಚ್‌ಎಂಎಸ್, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ

Karnataka Heavy Rain Alert IMD Issued Yellow Alert In These Districts
Image Credit to Original Source

ಇನ್ನು ಮಂಚಿಕೆರೆ, ಗೋಕರ್ಣ, ಕುಮಟಾ, ಜೊಯಿಡಾ, ಹೊನ್ನಾವರ, ಮಂಗಳೂರು, ಧರ್ಮಸ್ಥಳ ಉಪ್ಪಿನಂಗಡಿ ಸೇರಿದಂತೆ ಲೋಂಡಾ, ಕಮಲಾಪುರ, ಎನ್.ಆರ್.ಪುರ, ಕೊಪ್ಪ, ಜಯಪುರ, ಕೊಟ್ಟಿಗೆಹಾರ, ಮಡಿಕೆರೆ ಸೋಮವಾರಪೇಟೆ, ಸಕಲೇಶಪುರ, ತಾಳಗುಪ್ಪದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ 2 ತಿಂಗಳಲ್ಲಿ 3,200 ಡೆಂಗ್ಯೂ ಪ್ರಕರಣ : ಎಚ್ಚರಿಕೆ ಕೊಟ್ಟ ಆರೋಗ್ಯ ಸಚಿವ, ಏನಿದರ ಲಕ್ಷ್ಮಣ

ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೆಳಗಿನಿಂದ ಮೋಡಕವಿದ ವಾತಾವರಣವಿದ್ದು, ಇನ್ನೂ ಹಲಡೆದೆ ಮಳೆ ಸುರಿದಿದೆ. ಒಂದೆಡೆ ಮಳೆ ಸುರಿಯುತ್ತಿದ್ದರೂ ಕೂಡ ಬಿಸಿಲಧಗೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ.

Karnataka Heavy Rain Alert IMD Issued Yellow Alert In These Districts

Comments are closed.