Kodi Habba 2022 : ಕೊಡಿ‌ಹಬ್ಬದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಬೇಡ : ವಿಶ್ವ ಹಿಂದೂ ಪರಿಷತ್ ಆಗ್ರಹ

ಉಡುಪಿ : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ ಪ್ರತಿ ವರ್ಷ ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಬರುವ ಮಹತ್ವದ ಜಾತ್ರೆ ಮಹೋತ್ಸವ ಎಂದರೆ (Kodi Habba 2022) ಕೋಟೇಶ್ವರದ ಕೊಡಿ ಹಬ್ಬವಾಗಿದೆ. ಈ ಜಾತ್ರೆ ಡಿಸೆಂಬರ್‌ 8ರಂದು ಪ್ರಾರಂಭವಾಗಲಿದ್ದು, ಏಳು ದಿನಗಳ ಕಾಲ ಬಹಳಷ್ಟು ಸಂಭ್ರಮದಿಂದ ನಡೆಯುತ್ತದೆ. ಆದರೆ ಈ ವರ್ಷ ಈ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್‌ ಭಜರಂಗದಳ ಮನವಿ ಮಾಡಿದೆ.

ಭಯೋತ್ಪಾದನೆ, ಲವ್‌ ಜಿಹಾದ್‌ನಂತಹ ಪ್ರಕರಣ ಹೆಚ್ಚಿರುವ ಕಾರಣಕ್ಕೆ ಹಿಂದೂ ಸಂಘಟನೆಗಳು ಈ ರೀತಿಯ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಹಿಂದೂ ಸಂಘಟನೆಗಳ ಬೇಡಿಕೆಗೆ ವ್ಯವಸ್ಥಾಪನಾ ಸಮಿತಿ ಸಮ್ಮತಿಸುವ ಸಾಧ್ಯತೆ ಇದೆ. ಪ್ರತಿ ವರ್ಷ ಒಂದೇ ಸಮಯದಲ್ಲಿ ಉಡುಪಿ ಜಿಲ್ಲೆಯ ಎರಡು ಕಡೆಗಳಲ್ಲಿ ಕೊಡಿ ಹಬ್ಬದ ಜಾತ್ರೆ ನಡೆಯುತ್ತದೆ. ಒಂದು ಕೋಟೇಶ್ವರದ ಕೊಡಿ ಹಬ್ಬವಾದರೆ, ಇನ್ನೊಂದು ಉಪ್ಪುಂದದ ಕೊಡಿ ಹಬ್ಬವಾಗಿದೆ. ಉಪ್ಪುಂದ ಕೊಡಿ ಹಬ್ಬ ಈ ವರ್ಷ ಡಿಸೆಂಬರ್‌ 9ರಂದು ಜಾತ್ರ ಮಹೋತ್ಸವ ನೆರೆವೆರಲಿದ್ದು, ಈ ಜಾತ್ರೆ ಕೂಡ ಏಳು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.

ಇದನ್ನೂ ಓದಿ : Jenavac JE vaccine: ಕಾರ್ಕಡ ಶಾಲೆಯಲ್ಲಿ ಮೆದುಳು ಜ್ವರ ಲಸಿಕಾ ಅಭಿಯಾನ

ಇದನ್ನೂ ಓದಿ : Jayaprakash Hegde: ಟೋಲ್‌ ವಸೂಲಿ ಮನ್ನಾ ಹೋಣೆ ಸಿಎಂ ಹೆಗಲಿಗೆ: ಜಯಪ್ರಕಾಶ್‌ ಹೆಗ್ಡೆ

ಇದನ್ನೂ ಓದಿ : Ermayi Falls : ಬೆಳ್ತಂಗಡಿ ಎರ್ಮಾಯಿ ಫಾಲ್ಸ್ ಗೆ ಹೋದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು

ಈ ಬಾರಿ ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಧರ್ಮ ದಂಗಲ್‌ ಆರಂಭವಾಗಲಿದೆ. ಡಿಸೆಂಬರ್‌ ೯ರಂದು ನೆರವೇರಲಿರುವ ಜಾತ್ರಯಲ್ಲಿ ದೇವಸ್ಥಾನದ ಆವರಣದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಭಜರಂಗದಳ, ವಿಶ್ವ ಹಿಂದೂ ಪರಿಷತ್‌ ಹಿಂದೂ ಜಾಗರಣ ವೇದಿಕೆಯ ಒತ್ತಾಯದ ಮೇರೆಗೆ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಆಡಳಿತಾಧಿಕಾರಿಯಿಂದ ಸಹಾಯಕ ಕಮಿಷನರ್‌ಗೆ ಈಗಾಗಲೇ ನಿರ್ಣಯವನ್ನು ರವಾನಿಸಿದ್ದಾರೆ.

Kodi Habba 2022: Do not allow non-religious people to trade in Kodi Habba: Vishwa Hindu Parishad demands

Comments are closed.