Recruitment 2022:ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ

(Recruitment 2022)ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡದಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಶಿರಸಿಯಲ್ಲಿ ಹುದ್ದೆಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 13 , 2022 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

(Recruitment 2022)ಹುದ್ದೆಯ ಸಂಪೂರ್ಣ ವಿವರ:
ಸಂಸ್ಥೆಯ ಹೆಸರು : ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ
ಹುದ್ದೆಯ ಹೆಸರು : ಅರೆಕಾಲಿಕ ಪ್ರಾಧ್ಯಾಪಕ
ಹುದ್ದೆಯ ಸಂಖ್ಯೆ:5
ಉದ್ಯೋಗ ಸ್ಥಳ :ಶಿರಸಿ
ವೇತನ: 40000 ರೂ.ಪ್ರತಿ ತಿಂಗಳು

ಹುದ್ದೆಯ ವಿವರ:
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ :1
ಇಂಗ್ಲೀಷ್‌ನಲ್ಲಿ ಸಂವಹನ ಕೌಶಲ್ಯಗಳು ಮತ್ತು ವ್ಯಕ್ತಿತ್ವ ಅಭಿವೃದ್ಧಿ :1
ಕನ್ನಡ ಕೃಷಿ/ಕನ್ನಡ ಭಾಷೆ ಭಾಗ:1
ಮಾನವೀಯ ಮೌಲ್ಯಗಳು ಮತ್ತು ನೈತಿಕತೆ: 1
ಅನ್ವಯಿಕ ವಿಜ್ಞಾನಗಳಿಗೆ ಸಂಖ್ಯಾಶಾಸ್ತ್ರೀಯ ವಿಧಾನಗಳು: 1

ವಿದ್ಯಾರ್ಹತೆ ವಿವರ:
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ: ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ
ಇಂಗ್ಲಿಷ್‌ನಲ್ಲಿ ಸಂವಹನ ಕೌಶಲ್ಯಗಳು ಮತ್ತು ವ್ಯಕ್ತಿತ್ವ ಅಭಿವೃದ್ಧಿ: ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ
ಕನ್ನಡ ಕೃಷಿ/ಕನ್ನಡ ಭಾಷೆ ಭಾಗ-I: ಕನ್ನಡದಲ್ಲಿ ಸ್ನಾತಕೋತ್ತರ ಪದವಿ
ಮಾನವ ಮೌಲ್ಯಗಳು ಮತ್ತು ನೀತಿಶಾಸ್ತ್ರ: ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
ಅನ್ವಯಿಕ ವಿಜ್ಞಾನಗಳಿಗೆ ಅಂಕಿಅಂಶ ವಿಧಾನಗಳು: ಕೃಷಿ ಅಂಕಿಅಂಶಗಳು ಅಥವಾ ಅಂಕಿಅಂಶಗಳಲ್ಲಿ ಸ್ನಾತಕೋತ್ತರ ಪದವಿ
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡದಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು ಈ ಮೇಲೆ ತಿಳಿಸಿರುವಂತಹ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.

ಆಯ್ಕೆ ವಿಧಾನ:
ಅರ್ಹ ಅಭ್ಯಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ:Zilla Panchayat Recruitment :ಬಾಗಲಕೋಟೆ ಜಿ.ಪಂ.ನಲ್ಲಿ 54 ಹುದ್ದೆಗಳು ಖಾಲಿ : ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

ಇದನ್ನೂ ಓದಿ:NITM Recruitment 2022:ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ

ಅರ್ಜಿ ಸಲ್ಲಿಸುವ ವಿಧಾನ :
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ,ಗುರುತಿನ ಚೀಟಿ, ವಯಸ್ಸು,ಶೈಕ್ಷಣಿಕ,ಅರ್ಹತೆ, ಇತ್ಯಾದಿ ದಾಖಲೆ)ದಿನಾಂಕ 13-12- 2022 ರಂದು 11 ಗಂಟೆಗೆ ಅರಣ್ಯ ವಿಶ್ವವಿದ್ಯಾಲಯ ಶಿರಸಿಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬೇಕು.

ಪ್ರಮುಖ ದಿನಾಂಕಗಳು:
ನೇರ ಸಂದರ್ಶನಕ್ಕೆ ಹಾಜರಾಗುವ ದಿನಾಂಕ:13 ಡಿಸೆಂಬರ್ 2022.

Recruitment 2022 Application Invitation for the post of Professor in University of Agricultural Sciences

Comments are closed.