ಕುಂದಾಪುರ : ಅನಧಿಕೃತ ಮರಳುಗಾರಿಕೆ, 5 ಲಾರಿಗಳ ವಶ

ಕುಂದಾಪುರ : ಕುಂದಾಪುರದಲ್ಲಿ ಅಕ್ರಮ ಮರಳು ಸಾಗಾಟಕ್ಕೆ (Unauthorized sand mining) ಬ್ರೇಕ್‌ ಹಾಕಲಾಗಿದೆ. ಅಷ್ಟೇ ಅಲ್ಲದೇ ಅನಧಿಕೃತ ಮರಳು ಸಾಗಣಿಕೆ ಮಾಡುತ್ತಿದ್ದ 5 ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಹಟ್ಟಿಯಂಗಡಿ ಹಾಗೂ ಹೆಮ್ಮಾಡಿ ಪರಿಸರದಲ್ಲಿ ಅಕ್ರಮವಾಗಿ ಮರಳು ಸಾಗಾಟಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಅವರು ಕಾರ್ಯಾಚರಣೆ ನಡೆಸಿ 5 ಟಿಪ್ಪರ್‌ ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಹಟ್ಟಿಯಂಗಡಿ ಗ್ರಾಮದ ಹಟ್ಟಿಕುದ್ರು ಹಾಗೂ ಹೆಮ್ಮಾಡಿ ಗ್ರಾಮದ ಕನ್ನಡಕುದ್ರು ಎಂಬಲ್ಲಿ ಪಂಚ ಗಂಗಾವಳಿ ನದಿಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ, ಸಾಗಾಟ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸ್ವೀಕೃತವಾದ ದೂರಿನ ಮೇರೆಗೆ ಇಲಾಖೆ ಹಿರಿಯ ಭೂವಿಜ್ಞಾನಿ ಸಂದೀಪ್‌ ಜಿ.ಯು ಮಾರ್ಗದರ್ಶನದಲ್ಲಿ ಶುಕ್ರವಾರ ರಾತ್ರಿ 10 ಗಂಟೆಯ ಸುಮಾರಿಗೆ ಹಟ್ಟಿಕುದ್ರು ಎಂಬಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಇದನ್ನೂ ಓದಿ : ಉಳ್ಳಾಲದಲ್ಲಿ ರೈಲು ಢಿಕ್ಕಿ ಯುವಕ ಬಲಿ

ಇದನ್ನೂ ಓದಿ : 7 ಗಂಟೆಗಳ ನಂತರ ಬೋರ್‌ವೆಲ್‌ಗೆ ಬಿದ್ದ 9 ವರ್ಷದ ಬಾಲಕನ ರಕ್ಷಣೆ

ಈ ವೇಳೆ ಮರಳು ದಕ್ಕೆಯಲ್ಲಿದ್ದ 4 ಲಾರಿಗಳ ನು ಹಾಗೂ ರಾತ್ರಿ ಒಂದು ಗಟಮೇಯ ಸುಮಾರಿಗೆ ಕನ್ನಡಕುದ್ರು ಎಂಬಲ್ಲಿ ದಾಳಿ ನಡೆಸಿ ಮರಳು ಸಹಿತ ಒಂದು ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವವರೆಗೆ ಅನಧಿಕೃತ ಮರಳು ಸಾಗಾಣಿಕೆಗೆ ಬಳಸುತ್ತಿದ್ದ 4 ಲಾರಿಗಳನ್ನು ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಸುಪರ್ದಿಯಲ್ಲಿ ಹಾಗೂ ಒಂದು ಲಾರಿಯನ್ನು ಕುಂದಾಪುರ ಪೊಲೀಸ್‌ ಠಾಣೆ ಸುಪರ್ದಿಯಲ್ಲಿ ಇರಿಸಲಾಗಿದೆ ಎಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಿಳಿಸಿದೆ.

ಸರಕಾರಿ ಕಛೇರಿಯ ನೆಲಮಾಳಿಗೆಯಲ್ಲಿ 2.31 ಕೋಟಿ ರೂ., 1 ಕೆಜಿ ಚಿನ್ನದ ಗಟ್ಟಿ ಪತ್ತೆ

ರಾಜಸ್ಥಾನ : ರಾಜಸ್ಥಾನದ ಸರಕಾರಿ ಅಧಿಕಾರಿಗಳು (Govt Office in Jaipur) ಸರಕಾರಿ ಕಟ್ಟಡವಾದ ಯೋಜನಾ ಭವನದಲ್ಲಿ 2.31 ಕೋಟಿ ರೂಪಾಯಿ ನಗದು ಮತ್ತು 1 ಕೆಜಿ ಚಿನ್ನದ ಗಟ್ಟಿಯನ್ನು ಪತ್ತೆ ಆಗಿರುತ್ತದೆ. ಇಲಾಖೆಯ ಸುಮಾರು 7ರಿಂದ 8 ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ನಿರ್ದೇಶಕರಾದ ಮಹೇಶ್ ಗುಪ್ತಾ ಅವರ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಜೈಪುರ ನಗರ ಪೊಲೀಸರು ನಗದು ವಶಪಡಿಸಿಕೊಂಡಿದ್ದಾರೆ. ತಡರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ ಮತ್ತು ಡಿಜಿಪಿ, ಜೈಪುರ ಪೊಲೀಸ್ ಕಮಿಷನರ್ ಆನಂದ್ ಶ್ರೀವಾಸ್ತವ ಅವರು ಐಟಿ ಇಲಾಖೆಯ ಹೆಚ್ಚುವರಿ ನಿರ್ದೇಶಕರು ತಮ್ಮ ನೆಲಮಾಳಿಗೆಯಲ್ಲಿ ನಗದು ಮತ್ತು ಚಿನ್ನದ ಗಟ್ಟಿಯನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಜೈಪುರದ ಸರಕಾರಿ ಕಚೇರಿ ಯೋಜನಾ ಭವನದ ನೆಲಮಾಳಿಗೆಯಲ್ಲಿ ಕಬೋರ್ಡ್‌ನಲ್ಲಿ ಇರಿಸಲಾಗಿದ್ದ ಬ್ಯಾಗ್‌ನಲ್ಲಿ 2.31 ಕೋಟಿ ರೂಪಾಯಿಗೂ ಹೆಚ್ಚು ನಗದು ಮತ್ತು ಸುಮಾರು 1 ಕೆಜಿ ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿವೆ. 102 ಸಿಆರ್‌ಪಿಸಿ ಅಡಿಯಲ್ಲಿ ಪೊಲೀಸರು ಈ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಈ ವಿಷಯವನ್ನು ತನಿಖೆ ಮಾಡಲು ತಂಡವೊಂದು ಪತ್ತೆಯಾಗಿದೆ ಎಂದು ಜೈಪುರ ಪೊಲೀಸ್ ಕಮಿಷನರ್ ಆನಂದ್ ಕುಮಾರ್ ಶ್ರೀವಾಸ್ತವ ಅವರು ಎಎನ್‌ಐಗೆ ತಿಳಿಸಿದ್ದಾರೆ. “ಸಿಸಿಟಿವಿ ದೃಶ್ಯಾವಳಿಗಳನ್ನು ಶೋಧಿಸಲಾಗುತ್ತಿದೆ. ಸಿಎಂ ಅಶೋಕ್ ಗೆಹ್ಲೋಟ್ ಅವರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ” ಎಂದು ಆನಂದ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.

Kundapur: Unauthorized sand mining, 5 lorries seized

Comments are closed.