Kundapura fraud case: ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಸಹಕಾರ ಸಂಘಕ್ಕೆ ವಂಚನೆ : ದೂರು ದಾಖಲು

ಕುಂದಾಪುರ: (Kundapura fraud case) ಕುಂದಾಪುರದ ಶ್ರೀ ಮೂಕಾಂಬಿಕಾ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘವೊಂದರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದ ಸಾಲವನ್ನು ಮರು ಪಾವತಿಸದೇ ವಂಚನೆ ಮಾಡಿದ ಆರೋಪದ ಮೇಲೆ ಸದಸ್ಯನೋರ್ವನ ವಿರುದ್ದ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಉದಯ್‌ ಮೆಂಡನ್‌ ಎಂಬಾತ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದಲ್ಲಿರುವ ತನ್ನ 15 ಸೆಂಟ್ಸ್‌ ಸ್ವಂತ ಜಾಗವನ್ನು ಅಡಮಾನವಿಟ್ಟು 2015 ನ.4 ರಂದು 21 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾನೆ ಹಾಗೂ ಜಮೀನಿನ ಹಕ್ಕಿನ ಕಾಗದ ಪತ್ರವನ್ನು ಸಂಘಕ್ಕೆ ಒತ್ತೆಯಾಗಿರಿಸಿ ಕುಂದಾಪುರದ ಸಬ್‌ ರಿಜಿಸ್ಟರ್‌ ಆಫೀಸಿನಲ್ಲಿ ನೊಂದಣೆಯಾದ ಅಡಮಾನ ಪತ್ರವನ್ನು ಬರೆದುಕೊಟ್ಟಿದ್ದಾನೆ. ಆದರೆ ಆರೋಪಿ ಉದಯ್‌ ಮೆಂಡನ್‌ ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡದೇ ಶ್ರೀ ಮೂಕಾಂಬಿಕಾ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಮೊಹರನ್ನು ಸೃಷ್ಟಿಸಿ ಬಿಡುಗಡೆ ಪತ್ರ ಎನ್ನುವ ನಕಲಿ (Kundapura fraud case) ದಾಖಲೆಯನ್ನು ತಯಾರು ಮಾಡಿ ಈ ದಾಖಲೆಗೆ ಸಂಘದ ಕಾರ್ಯನಿರ್ವಾಹಣಾಧಿಕಾರಿಯಾದ ಮನೋರಂಜನ್‌ ದಾಸ್‌ ಶೆಟ್ಟಿ ಅವರ ನಕಲಿ ಸಹಿ ಮಾಡಿ ದಾಖಲೆ ಪತ್ರವನ್ನು ಕುಂದಾಪುರದ ಉಪನೊಂದಣಾಧಿಕಾರಿಯವರ ಸಮಕ್ಷಮ ನ್ಯಾಯವಾದ ದಾಖಲೆ ಎಂದು ನಂಬಿಸಿ 2018 ನ. 29 ರಂದು ನೊಂದಾಯಿಸಿಕೊಂಡಿದ್ದಾನೆ.

ಆ ನಂತರದಲ್ಲಿ ಅದೇ ನಕಲಿ ದಾಖಲೆಯ ಆಧಾರದ ಮೇಲೆ ಕುಂದಾಪುರದ ಮಿತ್ರ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಹತ್ತು ಲಕ್ಷ ರೂ ಸಾಲ ಪಡೆದು ವಂಚನೆ ಮಾಡಿರುವುದಾಗಿ ಶ್ರೀ ಮೂಕಾಂಬಿಕಾ ವಿವಿದ್ದೋದ್ದೇಶ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿಯಾದ ಮನೋರಂಜನ್‌ ದಾಸ್‌ ಶೆಟ್ಟಿ ಅವರು ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : Gopalakrishna Nairy: ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ನಿಧನ

ಇದನ್ನೂ ಓದಿ : Mandya KSRTC Bus accident: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕೆ.ಎಸ್.ಆರ್.ಟಿ.ಸಿ ಬಸ್

ಇದನ್ನೂ ಓದಿ : US crime : ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ : 5 ಮಕ್ಕಳು ಸೇರಿ, 7 ಮಂದಿಗೆ ಗುಂಡಿಕ್ಕಿ ತಾನು ಆತ್ಮಹತ್ಯೆ ಮಾಡಿಕೊಂಡ ಪತಿ

Kundapura fraud case: Fraud of co-operative society by creating fake document and getting loan: File a complaint

Comments are closed.