Dasun Shanaka : ಶ್ರೀಲಂಕಾ ನಾಯಕನಿಗೆ ಐಪಿಎಲ್ ಫ್ರಾಂಚೈಸಿಗಳು ಅನ್ಯಾಯ ಮಾಡಿದ್ರಾ?

ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಲಂಕಾ 16 ರನ್’ಗಳ ರೋಚಕ ಗೆಲುವು ಸಾಧಿಸಿ 2 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ಗೆಲುವಿಗೆ ಕಾರಣವಾಗಿದ್ದು ನಾಯಕ ದಸುನ್ ಶನಕ (Sri Lanka captains Dasun Shanaka) ಅವರ ಆಲ್ರೌಂಡ್ ಆಟ.

ಬ್ಯಾಟಿಂಗ್’ನಲ್ಲಿ ಅಬ್ಬರಿಸಿದ ಕೇವಲ 22 ಎಸೆತಗಳಲ್ಲಿ 6 ಸಿಕ್ಸರ್’ಗಳ ನೆರವಿನಿಂದ ಅಜೇಯ 56 ರನ್ ಚಚ್ಚಿದ್ದ ಶನಕ, ನಂತರ ಬೌಲಿಂಗ್’ನಲ್ಲೂ ಮಿಂಚಿ 2 ವಿಕೆಟ್ ಪಡೆದು ಲಂಕಾ ಗೆಲುವಿಗೆ ಕಾರಣರಾಗಿದ್ದರು.ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ಅಬ್ಬರಿಸಿದ್ದ ಶನಕ 27 ಎಸೆತಗಳಲ್ಲಿ 45 ರನ್ ಸಿಡಿಸಿದ್ದರು. ಟೀಮ್ ಇಂಡಿಯಾ ವಿರುದ್ಧ ಆಡಿದ ಕಳೆದ ಟಿ20 ಇನ್ನಿಂಗ್ಸ್’ಗಳಲ್ಲಿ ಶನಕ ಅಮೋಘ ಪ್ರದರ್ಶನ ತೋರಿದ್ದು 255 ರನ್ ಕಲೆ ಹಾಕಿದ್ದಾರೆ.

ಭಾರತ ವಿರುದ್ಧದ ಕಳೆದ 5 ಟಿ20 ಇನ್ನಿಂಗ್ಸ್’ಗಳಲ್ಲಿ ದಸುನ್ ಶನಕ ಸಾಧನೆ :

  • 47* (19 ಎಸೆತ)/ಧರ್ಮಶಾಲಾ, 2022
  • 74* (38 ಎಸೆತ)/ಧರ್ಮಶಾಲಾ, 2022
  • 33* (18 ಎಸೆತ)/ ದುಬೈ, 2022
  • 45* (27 ಎಸೆತ)/ ಮುಂಬೈ, 2023
  • 56* (22 ಎಸೆತ)/ ಪುಣೆ, 2023

ಭಾರತ ವಿರುದ್ಧ ಕಳೆದ ಐದು ಟಿ20 ಪಂದ್ಯಗಳಲ್ಲಿ ಭರ್ಜರಿ ಆಟವಾಡಿದರೂ, ದಸುನ್ ಶನಕ ಯಾವುದೇ ಐಪಿಎಲ್ ಫ್ರಾಂಚೈಸಿಗಳ ಕಣ್ಣಿಗೆ ಬೀಳದಿರುವುದು ವಿಪರ್ಯಾಸ. ಕಳೆದ ತಿಂಗಳು ಕೇರಳದ ಕೊಚ್ಚಿಯಲ್ಲಿ ನಡೆದಿದ್ದ ಐಪಿಎಲ್ ಆಟಗಾರರ ಹರಾಜಿನಲ್ಲಿ ಶನಕ 50 ಲಕ್ಷ ರೂ.ಗಳ ಮೂಲಬೆಲೆ ಹೊಂದಿದ್ದರು. ಆದರೆ ಶ್ರೀಲಂಕಾ ನಾಯಕನನ್ನು ಖರೀದಿಸಲು ಯಾವ ಫ್ರಾಂಚೈಸಿ ಕೂಡ ಮುಂದೆ ಬಂದಿರಲಿಲ್ಲ.

ಕೆಳಕ್ರಮಾಂಕದ ಸ್ಫೋಟಕ ದಾಂಡಿಗನಾಗಿರುವ ದಸುನ್ ಶನಕ, ಮೀಡಿಯಂ ಪೇಸರ್ ಬೌಲರ್ ಕೂಡ ಹೌದು. ನೈಜ ಆಲ್ರೌಂಡರ್ ಆಗಿರುವ ಶನಕ ಐಪಿಎಲ್ ಆಟಗಾರರ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದರು.”ದಸುನ್ ಶನಕ ಐಪಿಎಲ್’ನಲ್ಲಿ ಅವಕಾಶ ಪಡೆಯಲು ಎಲ್ಲಾ ರೀತಿಯ ಅರ್ಹತೆ ಹೊಂದಿದ್ದರು” ಎಂದು ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್ ಹೇಳಿದರೆ, “ಶನಕ ಅವರನ್ನು ಖರೀದಿಸದೆ ಐಪಿಎಲ್ ತಂಡಗಳು ತಂತ್ರಗಾರಿಕೆಯಲ್ಲಿ ಎಡವಿವೆ” ಎಂದು ಭಾರತ ತಂಡದ ಮಾಜಿ ಟೆಸ್ಟ್ ಓಪನರ್ ಅಭಿನವ್ ಮುಕುಂದ್ ಟ್ವೀಟ್ ಮಾಡಿದ್ದಾರೆ.

ಶ್ರೀಲಂಕಾದ ದಿಗ್ಗಜ ವೇಗಿ ಲಸಿತ್ ಮಲಿಂಗಾ ಕೂಡ ದಸುನ್ ಶನಕ ಅವರನ್ನು ಯಾವುದೇ ಐಪಿಎಲ್ ಫ್ರಾಂಚೈಸಿಗಳು ಖರೀದಿಸದೇ ಇರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಸದ್ಯದಲ್ಲೇ ಶನಕ ಯಾವುದಾದರೊಂದು ಐಪಿಎಲ್ ತಂಡ ಸೇರಲಿದ್ದಾರೆ. ಅದಾಗದೇ ಇದ್ದರೆ ನಿಜಕ್ಕೂ ನನಗೆ ಅಚ್ಚರಿಯಾಗಲಿದೆ” ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಕೂಡ ಆಗಿರುವ ಲಸಿತ್ ಮಲಿಂಗಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Abhishek Reddy : ಕರ್ನಾಟಕ ತಂಡದಲ್ಲಿ ಸಿಗದ ಅವಕಾಶ, ಆಂಧ್ರ ಪ್ರದೇಶ ಪರ ಆಡುತ್ತಿದ್ದಾನೆ ಕನ್ನಡಿಗ

ಇದನ್ನೂ ಓದಿ : Kedar Jadhav double century : ರಣಜಿ ಟ್ರೋಫಿಯಲ್ಲಿ ಸಿಡಿಲಬ್ಬರದ 283 ರನ್ ಚಚ್ಚಿದ ಟೀಮ್ ಇಂಡಿಯಾದ ಮಾಜಿ ಆಟಗಾರ

ಇದನ್ನೂ ಓದಿ : Virat Kohli in Baba ashram : ಮಥುರಾ ವೃಂದಾವನ ಧಾಮದಲ್ಲಿ ಕಿಂಗ್ ಕೊಹ್ಲಿ; ಪತ್ನಿ, ಪುತ್ರಿಯೊಂದಿಗೆ ಬಾಬಾ ಆಶೀರ್ವಾದ ಪಡೆದ ವಿರಾಟ್

ಭರ್ಜರಿ ಫಾರ್ಮ್ ಹೊರತಾಗಿಯೂ ದಸುನ್ ಶನಕ ಅವರನ್ನು ಖರೀದಿಸದ ಐಪಿಎಲ್ ಫ್ರಾಂಚೈಸಿಗಳ ವಿರುದ್ಧ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

Dasun Shanaka : Sri Lanka captain wronged by IPL franchises?

Comments are closed.