Kedar Jadhav double century : ರಣಜಿ ಟ್ರೋಫಿಯಲ್ಲಿ ಸಿಡಿಲಬ್ಬರದ 283 ರನ್ ಚಚ್ಚಿದ ಟೀಮ್ ಇಂಡಿಯಾದ ಮಾಜಿ ಆಟಗಾರ

ಪುಣೆ: ಟೀಮ್ ಇಂಡಿಯಾ ಪರ 73 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿರುವ ಆಟಗಾರ. 2019ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ (Kedar Jadhav double century) ಸ್ಟಾರ್. ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 2018ರಲ್ಲಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರ. ಅದೇ ಆಟಗಾರನೀಗ 3 ವರ್ಷಗಳ ನಂತರ ರಣಜಿ ಟ್ರೋಫಿಗೆ ಕಂಬ್ಯಾಕ್ ಮಾಡಿ ಮೊದಲ ಪಂದ್ಯದಲ್ಲೇ ಸಿಡಿಲಬ್ಬರದ 283 ರನ್ ಸಿಡಿಸಿದ್ದಾನೆ.

ನಾವು ಹೇಳುತ್ತಿರುವುದು ಮಹಾರಾಷ್ಟ್ರ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಕೇದಾರ್ ಜಾಧವ್ (Kedar Jadhav) ಬಗ್ಗೆ.38 ವರ್ಷದ ಕೇದಾರ್ ಜಾಧವ್ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ ಅಸ್ಸಾಂ ವಿರುದ್ಧದ ಎಲೈಟ್ ‘ಬಿ’ ಹಂತದ ರಣಜಿ ಪಂದ್ಯದಲ್ಲಿ (Ranji Trohy 2022-23) 283 ರನ್ ಸಿಡಿಸಿದ್ದಾರೆ. 283 ಎಸೆತಗಳನ್ನೆದುರಿಸಿದ ಬಲಗೈ ಬ್ಯಾಟ್ಸ್’ಮನ್ ಕೇದಾರ್ ಜಾಧವ್ 21 ಬೌಂಡರಿ ಹಾಗೂ 12 ಸಿಕ್ಸರ್’ಗಳ ನೆರವಿನಿಂದ 283 ರನ್ ಬಾರಿಸಿದ್ದಾರೆ.

ಜಾಧವ್ ಅವರ ದ್ವಿಶತಕದ ನೆರವಿನಿಂದ ಮಹಾರಾಷ್ಟ್ರ ತಂಡ ತನ್ನ ಮೊದಲ ಇನ್ನಿಂಗ್ಸ್’ನಲ್ಲಿ 594 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿದೆ.2019ರಲ್ಲಿ ಕೊನೆಯ ರಣಜಿ ಪಂದ್ಯವಾಡಿದ್ದ ಕೇದಾರ್ ಜಾಧವ್, 3 ವರ್ಷಗಳ ನಂತರ ಆಡಿದ ಮೊದಲ ರಣಜಿ ಮ್ಯಾಚ್’ನಲ್ಲಿ ದ್ವಿಶತಕದೊಂದಿಗೆ ಅಬ್ಬರಿಸಿದ್ದಾರೆ. ಭಾರತ ಪರ 73 ಏಕದಿನ ಪಂದ್ಯಗಳನ್ನಾಡಿರುವ ಕೇದಾರ್ ಜಾಧವ್ 2 ಶತಕ ಹಾಗೂ 6 ಅರ್ಧಶತಗಳ ನೆರವಿನಿಂದ 1389 ರನ್ ಗಳಿಸಿದ್ದಾರೆ. ಭಾರತ ಪರ ಜಾಧವ್ 9 ಟಿ20 ಪಂದ್ಯಗಳನ್ನೂ ಆಡಿದ್ದಾರೆ.

ಇದನ್ನೂ ಓದಿ : Abhishek Reddy : ಕರ್ನಾಟಕ ತಂಡದಲ್ಲಿ ಸಿಗದ ಅವಕಾಶ, ಆಂಧ್ರ ಪ್ರದೇಶ ಪರ ಆಡುತ್ತಿದ್ದಾನೆ ಕನ್ನಡಿಗ

ಇದನ್ನೂ ಓದಿ : Virat Kohli in Baba ashram : ಮಥುರಾ ವೃಂದಾವನ ಧಾಮದಲ್ಲಿ ಕಿಂಗ್ ಕೊಹ್ಲಿ; ಪತ್ನಿ, ಪುತ್ರಿಯೊಂದಿಗೆ ಬಾಬಾ ಆಶೀರ್ವಾದ ಪಡೆದ ವಿರಾಟ್

ಇದನ್ನೂ ಓದಿ : Hardik Pandya Amit Shah: ಅಮಿತ್ ಶಾ ಜೊತೆ ಫೋಟೋ, ಸುಳ್ಳು ಹೇಳಿ ಸಿಕ್ಕಿ ಬಿದ್ದ ಚಾಲಾಕಿ ಪಾಂಡ್ಯ

2020ರ ನ್ಯೂಜಿಲೆಂಡ್ ಪ್ರವಾಸದ ನಂತರ ಟೀಮ್ ಇಂಡಿಯಾದಿಂದ ಹೊರ ಬಿದ್ದಿದ್ದ ಕೇದಾರ್ ಜಾಧವ್’ಗೆ ಮತ್ತೆ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಲು ಸಾಧ್ಯವಾಗಿಲ್ಲ. ಕಳೆದ ಮೂರು ವರ್ಷಗಳಿಂದ ದೇಶೀಯ ಕ್ರಿಕೆಟ್’ನಿಂದಲೂ ದೂರ ಉಳಿದಿದ್ದ ಜಾಧವ್ ಈ ವರ್ಷ 37ನೇ ವಯಸ್ಸಿನಲ್ಲಿ ರಣಜಿ ಟ್ರೋಫಿಗೆ ಮರಳಿ ದ್ವಿಶತಕ ಬಾರಿಸಿ ಗಮನ ಸೆಳೆದಿದ್ದಾರೆ.

Kedar Jadhav double century: Former player of Team India who scored 283 runs in Ranji Trophy

Comments are closed.