ಕುಂದಾಪುರ : ಸರಕಾರಿ ಕೆಲಸ ಕೊಡಿಸಿ, ಮದುವೆಯಾಗುವುದಾಗಿ ನಂಬಿಸಿ ದಲಿತ ಮಹಿಳೆಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪುರಸಭೆಯ ಮಾಜಿ ಸದಸ್ಯನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ಕೋಡಿಯ ನಿವಾಸಿ ಸಂದೀಪ ಪೂಜಾರಿ (34 ವರ್ಷ) ಎಂಬಾತನೇ ಬಂಧನಕ್ಕೊಳಗಾದ ಆರೋಪಿ. ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯೋರ್ವರ ಪತಿ ಅಂಚೆ ಇಲಾಖೆಯಲ್ಲಿ ಸೇವೆಯಲ್ಲಿದ್ದರು. ಆದರೆ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಮಹಿಳೆಗೆ ಸರಕಾರಿ ಉದ್ಯೋಗವನ್ನು ಕೊಡಿಸಿ ಮದುವೆಯಾಗುವುದಾಗಿ ಸಂದೀಪ ಪೂಜಾರಿ ನಂಬಿಸಿದ್ದ. ಮಾತ್ರವಲ್ಲ ಮಹಿಳೆಯಿಂದ ಹಣವನ್ನು ಪಡೆದು ವಾಪಾಸು ಕೊಡದೆ ವಂಚಿಸಿದ್ದಾನೆಂದು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿರುವ ಕುಂದಾಪುರ ಠಾಣೆಯ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.