Mangalore Family Suicide : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಮತಾಂತರವೇ ಕಾರಣ

ಮಂಗಳೂರು : ಆತ ಚಾಲಕನಾಗಿದ್ರೆ, ಆಕೆ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ರು, ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ರು. ಆದರೆ ತಂದೆ ಪತ್ನಿ ಹಾಗೂ ಮಕ್ಕಳಿಗೆ ವಿಷವುಣಿಸಿ ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮಂಗಳೂರಿನ ಮಾರ್ಗನ್ಸ್‌ ಗೇಟ್‌ನಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ (Mangalore Family Suicide) ಇದೀಗ ಸ್ಪೋಟಕ ಟ್ವಿಸ್ಟ್‌ ಸಿಕ್ಕಿದೆ. ನಾಲ್ವರ ಆತ್ಮಹತ್ಯೆಗೆ ಮತಾಂತರವೇ ( conversion ) ಕಾರಣ ಅನ್ನೋದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಬಾಗಲಕೋಟೆ ಜಿಲ್ಲೆಯ ಸುನಗ್ ಗ್ರಾಮದ ಬೀಳಗಿ ಮೂಲದ ನಾಗೇಶ್ ಶೇರಿಗುಪ್ಪಿ(30 ವರ್ಷ ), ವಿಜಯಲಕ್ಷ್ಮಿ(26 ವರ್ಷ), ಮಕ್ಕಳಾದ ಸಪ್ನಾ(8 ವರ್ಷ) ಮತ್ತು ಸಮರ್ಥ್(4 ವರ್ಷ ) ಆತ್ಮಹತ್ಯೆ ಮಾಡಿಕೊಂಡು ಸಾವಪ್ಪಿದ್ದರು. ಸಾವಿಗೂ ಮೊದಲು ನಾಗೇಶ್‌ ಶೇರಿಗುಪ್ಪ ಡೆತ್‌ನೋಟ್‌ನಲ್ಲಿ ಮತಾಂತರದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಆರಂಭಿಸಿದ್ದರು. ಆದರೀಗ ಕಟುಂಬದ ಸಾಮೂಹಿಕ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ ಅನ್ನೋದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ವಿಜಯಲಕ್ಷ್ಮೀ ಹಾಗೂ ನಾಗೇಶ್‌ ಸಂಬಂಧ ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ಚೆನ್ನಾಗಿರಲಿಲ್ಲ. ನಾಗೇಶ್‌ ನಿತ್ಯವೂ ಮನೆಗೆ ಕುಡಿದು ಬರುತ್ತಿದ್ದ. ಪತ್ನಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದ. ಈ ನಡುವಲ್ಲೇ ವಿಜಯಲಕ್ಷ್ಮೀಗೆ ನೂರ್‌ ಜಹಾನ್‌ ಎಂಬಾಕೆಯ ಪರಿಚಯವಾಗಿತ್ತು. ಮಂಗಳೂರು ನಗರದಲ್ಲಿ ವಾಸವಾಗಿದ್ದ ನೂರ್‌ ಜಹಾನ್‌ ಮದುವೆ ಬ್ರೋಕರ್‌ ಆಗಿದ್ದು, ಪತಿಗೆ ವಿಚ್ಚೇಧನ ನೀಡಿ ನಮ್ಮ ಧರ್ಮಕ್ಕೆ ಮತಾಂತರ ಆಗು. ನಮ್ಮ ಧರ್ಮದ ಒಳ್ಳೆಯ ಹುಡುಗನ ಜೊತೆಗೆ ನಿನಗೆ ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.

ಅಲ್ಲದೇ ವಿಜಯಲಕ್ಷ್ಮೀ ತನ್ನ ಪತಿಗೆ ವಿಚ್ಚೇಧನವನ್ನು ನೀಡಿ ಮತಾಂತರವಾಗಲು ಸಿದ್ದತೆ ನಡೆಸಿದ್ದಳು. ಇನ್ನೊಂದೆಡೆಯಲ್ಲಿ ನೂರ್‌ ಜಹಾನ್‌ ಹುಡುಗನನ್ನು ಹುಡುಕುವ ಕಾರ್ಯ ವನ್ನು ಆರಂಭಿಸಿದ್ದಾಳೆ. ಅದ್ಯಾವಾಗ ಈ ವಿಚಾರ ನಾಗೇಶ್‌ ಕಿವಿಗೆ ಬಿತ್ತೋ, ಆವಾಗ್ಲೆ ಗಂಡ ಹೆಂಡತಿಯ ನಡುವಿನ ಜಗಳ ವಿಕೋಪಕ್ಕೆ ತಿರುಗಿತ್ತು. ಪತ್ನಿ ಮತಾಂತರ ಹೊಂದುತ್ತಾಳೆ ಅನ್ನೋ ಕಾರಣಕ್ಕೆ ನಾಗೇಶ್‌ ಪತ್ನಿ ಹಾಗೂ ಇಬ್ಬರೂ ಮಕ್ಕಳನ್ನು ಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದು ಇದೀಗ ಪೊಲೀಸರ ತನಿಖೆಯಿಂದ ಬಯಲಾಗಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಬ್ರೋಕರ್‌ ನೂರ್‌ ಜಹಾನ್‌ ಎಂಬಾಕೆಯ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಮತಾಂತರ ಸದ್ದು ಮಾಡುತ್ತಿರೋ ಹೊತ್ತಲ್ಲೇ ಇದೀಗ ಒಂದೇ ಕುಟುಂಬದ ನಾಲ್ವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಇದನ್ನೂ ಓದಿ : 4 Members Suicide : ಮಂಗಳೂರಲ್ಲಿ ಘೋರ ದುರಂತ : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಇದನ್ನೂ ಓದಿ : 10 Years Sentence : ಬೈಂದೂರು ಅಪ್ರಾಪ್ತ ನಾದಿನಿ ಅತ್ಯಾಚಾರ ಪ್ರಕರಣ : 10 ವರ್ಷ ಶಿಕ್ಷೆ, 20 ಸಾವಿರ ದಂಡ

(Mangalore Family Suicide : The conversion of four members of the same family to suicide)

Comments are closed.