Google Play Games : ವಿಂಡೋಸ್‌ನಲ್ಲೂ ಆಟ ಆಡಿ!ವಿಂಡೋಸ್ 10 ಮತ್ತು 11 ನಲ್ಲೂ ಬರಲಿದೆ ಗೂಗಲ್ ಗೇಮ್ಸ್

ಪ್ಲೇ ಸ್ಟೋರ್‌ ಗೇಮ್‌ ಪ್ರಿಯರಿಗೆ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ. ಇನ್ಮೇಲೆ ವಿಂಡೋಸ್ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ಗಳಲ್ಲೂ ನೀವು ಗೂಗಲ್‌ ಪ್ಲೇ ಸ್ಟೋರ್‌ ಗೇಮ್‌ಗಳನ್ನು ನೀವಿನ್ನು ಆಡಬಹುದು. ಮುಂದಿನ ವರ್ಷ ಅಂದರೆ 2022 ರಿಂದ ವಿಂಡೋಸ್ (Windows) ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಕಂಪ್ಯೂಟರ್‌ಗಳಿಗೆ ಗೂಗಲ್ ಪ್ಲೇ ಗೇಮ್ಸ್ (Google Play Games) ಅಪ್ಲಿಕೇಶನ್ ಅನ್ನು ತರುವುದಾಗಿ ಗೂಗಲ್ ಘೋಷಿಸಿದೆ.

ಅಂದಹಾಗೆ ಇನ್ಮೇಲೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಗೇಮ್‌ಗಳು ವಿಂಡೋಸ್ (Windows 11) ಮತ್ತು ವಿಂಡೋಸ್ 10 (Windows 10) ಎರಡರಲ್ಲೂ ಕಾರ್ಯನಿರ್ವಹಿಸಲಿದೆ. ಈ ಅಪ್ಲಿಕೇಶನ್ ಹೇಗೆ ವರ್ಕ್ ಆಗುತ್ತೆ? ಯಾವೆಲ್ಲಾ ಗೇಮ್ಸ್ ಇದರಲ್ಲಿ ಇರಲಿವೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಹೇಳದೆ ಬಹಳ ರಹಸ್ಯವಾಗಿ ಇಡಲಾಗಿದೆ.

ಗೂಗಲ್ ಕಂಪೆನಿಯ ಮೂಲಗಳ ಪ್ರಕಾರ ಇದು ಈಗಿರುವ ಬ್ಲೂ ಸ್ಟಾಕ್ ಹಾಗೂ ಮೈಕ್ರೋಸಾಫ್ಟ್ ವಿಂಡೋಸ್ ಟೆಕ್ನಾಲಜಿ ಗಳಿಗಿಂತ ಭಿನ್ನವಾಗಿದೆ. ಈ ಆ್ಯಪ್ ವಿಂಡೋಸ್ ಆ್ಯಪ್‌ ಕಂಪ್ಯೂಟರ್‌ಗಳಲ್ಲಿ ನೇರವಾಗಿ ಡೌನ್ಲೋಡ್ ಮಾಡಿಕೊಂಡು ಆಡಲು ಸಾಧ್ಯವಿದೆ. ಇದಕ್ಕೆ ಕ್ಲೌಡ್‌ನಿಂದ ಸ್ಟ್ರಿಮ್ ಮಾಡುವ ಯಾವುದೇ ಅಗತ್ಯ ಇಲ್ಲ. ಈ ಆ್ಯಪ್‌ ಬಳಸಿ ಬಳಕೆದಾರರು ಆಂಡ್ರಾಯ್ಡ್ ಮೊಬೈಲ್ ಹಾಗೂ ವಿಂಡೋಸ್ ಪಿಸಿಗಳಲ್ಲಿ ನಿರಂತರವಾಗಿ ಗೇಮ್ ಆಡಲು ಸಾಧ್ಯ.

2022 ರಿಂದ ಆಟಗಾರರು ತಮ್ಮ ನೆಚ್ಚಿನ ಗೂಗಲ್ ಪ್ಲೇ ಗೇಮ್ಸ್‌ಗಳನ್ನು ಹೆಚ್ಚಿನ ಗ್ಯಾಜೆಟ್‌ಗಳಲ್ಲಿ ಬಳಸಲು ಸಾಧ್ಯವಾಗುತ್ತದೆ. ಫೋನ್, ಟ್ಯಾಬ್ಲೆಟ್, ಕ್ರೋಮ್‌ಬುಕ್ ಮತ್ತು ಶೀಘ್ರದಲ್ಲೇ, ವಿಂಡೋಸ್ ಪಿಸಿಗಳ ನಡುವೆ ಮನಬಂದಂತೆ ಚೇಂಜ್ ಮಾಡಿ ಆಡಲು ಸಹಕಾರಿಯಾಗಿದೆ ಎಂದು ಗೂಗಲ್‌ನ ಉತ್ಪನ್ನ ನಿರ್ದೇಶಕ ಗ್ರೆಗ್ ಹರ್ಟಲ್ ತಿಳಿಸಿದ್ದಾರೆ. ಈ ಗೂಗಲ್ ನಿರ್ಮಿತ ಉತ್ಪನ್ನವು ಹೆಚ್ಚಿನ ಲ್ಯಾಪ್‌ಟಾಪ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಿಗೆ ಅತ್ಯುತ್ತಮವಾದ ಗೂಗಲ್ ಗೇಮ್ಸ್‌ಗಳನ್ನು ಒದಗಿಸಲಿದೆ ಮತ್ತು ಆಟಗಾರರು ತಮ್ಮ ನೆಚ್ಚಿನ ಆಂಡ್ರಾಯ್ಡ್ ಗೇಮ್ಸ್‌ಗಳನ್ನು ಇನ್ನಷ್ಟು ಆನಂದಿಸಲು ನಮ್ಮ ಪ್ಲಾಟ್‌ಫಾರ್ಮ್ ಅನ್ನು ವಿಸ್ತರಿಸಲು ನಾವು ಎಕ್ಸೈಟ್ ಆಗಿದ್ದೇವೆ ಎಂದಿದ್ದಾರೆ ಅವರು.

ಇದನ್ನೂ ಓದಿ: Realme Discounts Offers : ರಿಯಲ್‌ ಮಿ ಸ್ಮಾರ್ಟ್‌ಫೋನ್‌ಗೆ ಭರ್ಜರಿ 5 ಸಾವಿರ ಡಿಸ್ಕೌಂಟ್; ಗ್ರಾಹಕರು ಫುಲ್ ಖುಷ್

ಇದನ್ನೂ ಓದಿ : Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

Google Play Games : Google Is Bringing Android Games To Windows PC In 2022

Comments are closed.