Winter Health Tips: ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ: ಪಾರ್ಲರ್ ಇಲ್ಲದೆ ಮನೆಯಲ್ಲೇ ಮಾಡಿ ಈ ಸಿಂಪಲ್ ಸ್ಟೆಪ್ಸ್

ಚಳಿಗಾಲ ಬಂತೆಂದರೆ ಸಾಕು ಹಲವರಿಗೆ ಡ್ರೈ ಸ್ಕಿನ್ ಸಮಸ್ಯೆ ಕಾಣುತ್ತದೆ. ಇದಕ್ಕೆ ಮುಖ್ಯ ಕಾರಣ ಡಿ ಹೈಡ್ರೇಶನ್ ಹಾಗೂ ಕೋಲ್ಡ್ ವೆದರ್. ದಿನನಿತ್ಯದ ಬ್ಯುಸಿ ಶೆಡ್ಯೂಲ್ನಲ್ಲಿ ಚರ್ಮದ ಕಾಳಜಿ ಮಾಡಲು ಆಗದೆ, ಡ್ರೈ ಸ್ಕಿನ್, ರ್ಯಾಶಸ್, ಮುಂತಾದ ಸಣ್ಣ ಪುಟ್ಟ ಸಮಸ್ಯೆಗಳನ್ನು ಅವಾಯ್ಡ್ ಮಾಡುವವರೇ ಹೆಚ್ಚು. ಇನ್ನುಳಿದಂತೆ ಕೆಲವರು ಪಾರ್ಲರ್ ಹೋಗಿ ಸಾವಿರಾರು ರೂಪಾಯಿ ಕೊಟ್ಟು ಟ್ರೀಟ್ಮೆಂಟ್ ಮಾಡಿಸಿ ಬರುತ್ತಾರೆ. ಆದರೆ ಇದ್ಯಾವುದೂ ಇಲ್ಲದೆ ಮನೆಯಲ್ಲೇ ಇದ್ದು, ಚರ್ಮದ ಆರೈಕೆ ಮಾಡಬಹುದು. (Winter Health Tips)

ಮಾಶ್ಚರೈಸರ್ ಬಳಸಿ:
ಚಳಿಗಾಲದಲ್ಲಿ ತ್ವಚೆಯನ್ನು ಡ್ರೈ ಆಗದಂತೆ ನೋಡಿಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಮಾಶ್ಚರೈಸರ್ ಖರೀದಿಸುವ ಮುನ್ನ, ಪರಾಬಿನ್ (paraben) ಸಲ್ಪೇಟ್ ( sulphate) , ಮಿನರಲ್ ಆಯಿಲ್ ಇಲ್ಲದ ನ್ಯಾಚುರಲ್ ಪ್ರಾಡಕ್ಟ್ ಗಳನ್ನೇ ಖರೀದಿಸಿ. ಅತಿ ಡ್ರೈ ಸ್ಕಿನ್ ಹೊಂದಿದವರು ಕೋಕೋ, ಶೀಯ ಬಟರ್ ಇರುವ ಮಾಶ್ಚರೈಸರ್ ಕೇಳಿ ಪಡೆಯಿರಿ.
ವಾರಕ್ಕೊಮ್ಮೆ ಸ್ಕ್ರಬ್ ಮಾಡಿ: ಸ್ಕ್ರಬ್ ಮಾಡುವುದರಿಂದ ಡೆಡ್ ಸ್ಕಿನ್ ರಿಮೂವ್ ಆಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಸ್ಕ್ರಬ್ ಬಳಸಿ ಅಥವಾ ಕಾಫಿ ಹುಡಿ, ಮುಲ್ತಾನಿ ಮಿಟ್ಟಿ ಬಳಸಿ ಮಾಡಿದರೆ ಡೆಡ್ ಸ್ಕಿನ್ ಮಾಯವಾಗಿ ಕಾಂತಿ ಹೆಚ್ಚುತ್ತದೆ.

ಎಣ್ಣೆಯನ್ನು ಬಳಸಿ:
ನಿಮ್ಮ ಚರ್ಮಕ್ಕೆ ಅನುಸರಿಸಿ ವಾರಕ್ಕೊಮ್ಮೆ ಎಣ್ಣೆ ಹಚ್ಚಿ ಸ್ನಾನ ಮಾಡಿದರೆ, ಡ್ರೈ ಸ್ಕಿನ್ ಸಮಸ್ಯೆಯನ್ನು ಕೊಂಚ ಮಟ್ಟಿಗೆ ನಿವಾರಿಸಲು ಸಾಧ್ಯ. ನಾರ್ಮಲ್ ಸ್ಕಿನ್ ಇದ್ದವರು ಯಾವುದೇ ಎಣ್ಣೆ ಬಳಸಬಹುದು. ಎಕ್ಸ್ಟ್ರಾ ಡ್ರೈ ಸ್ಕಿನ್ ನವರು ಆಲಿವ್ ಎಣ್ಣೆ ಅಥವಾ ಎಳ್ಳೆಣ್ಣೆ ಬಳಸಬಹುದು.

ಉಗುರು ಬೆಚ್ಚಗಿನ ನೀರನ್ನು ಮಾತ್ರ ಬಳಸಿ: ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಹೆಚ್ಚಿನವರ ಕ್ರಮ. ಆದರೆ, ಇದು ಮತ್ತಷ್ಟು ಡ್ರೈ ಆಗುವಂತೆ ಮಾಡುತ್ತದೆ. ಸಾಧ್ಯ ವಾದಷ್ಟು ನೀರು ಕುಡಿಯಿರಿ: ನೀರು ನಮ್ಮ ದೇಹವನ್ನು ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ದಿನಕ್ಕೆ 2-3 ಲೀಟರ್ ಆದರೂ ನೀರು ಕುಡಿಯುವುದು ಅತೀ ಮುಖ್ಯ.

ಕಾಫಿ ಟೀ ಸೇವನೆ ಕಡಿಮೆ ಮಾಡಿ: ಕಾಫಿ ಟೀ ಸೇವನೆ ಸಾಧ್ಯವಾದಷ್ಟು ಕಡಿಮೆ ಮಾಡಿ. ಅದರ ಬದಲು ಬಿಸಿ ನೀರು, ಕಷಾಯ ಅಥವಾ ಸೂಪ್ ಕುಡಿಯಬಹುದು. ಈ ಎಲ್ಲ ಕ್ರಮಗಳನ್ನು ಅನುಸರಿಸಿ, ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಬಹುದು.

ಇದನ್ನೂ ಓದಿ: Aadhaar : ಕನ್ನಡದಲ್ಲೇ ನವೀಕರಿಸಬಹುದು ಆಧಾರ್‌ ಕಾರ್ಡ್‌ ಮಾಹಿತಿ

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

(winter health tips you must follow to keep your skin smooth)

Comments are closed.