Pet Dog License : ಲೈಸೆನ್ಸ್‌ ಇಲ್ಲದೇ ಇನ್ಮುಂದೆ ಮನೆಯಲ್ಲಿ ನಾಯಿ ಸಾಕುವಂತಿಲ್ಲ; ಕದ್ದು ಮುಚ್ಚಿ ಸಾಕಿದ್ರೆ ಬೀಳುತ್ತೆ ಭಾರೀ ದಂಡ !

ಬೆಂಗಳೂರು : ಮನೆಯಲ್ಲಿ ನಾಯಿಗಳನ್ನು ಸಾಕುವುದಕ್ಕೆ ಬಹುತೇಕರು ಇಷ್ಟ ಪಡ್ತಾರೆ. ತಮ್ಮಿಷ್ಟ ನಾಯಿಗಳನ್ನು ಸಾಕುವುದರ ಜೊತೆಗೆ ಡಾಗ್‌ ಶೋಗಳಲ್ಲಿಯೂ ಭಾಗವಹಿಸಿ ಸಂಭ್ರಮಿಸುತ್ತಾರೆ. ಬಹುತೇಕ ಮನೆಗಳಲ್ಲಿ ನಾಯಿ ಇದ್ದೇ ಇರುತ್ತೆ. ಆದ್ರೆ ಇನ್ಮುಂದೆ ನಿಮ್ಮಿಷ್ಟದಂತೆ ಮನೆಯಲ್ಲಿ ನಾಯಿಯನ್ನು ಸಾಕುವಂತಿಲ್ಲ. ನೀವೇನಾದ್ರೂ ನಾಯಿ ಸಾಕಲೇ ಬೇಕು ಅಂತಿದ್ರೆ ಕಡ್ಡಾಯವಾಗಿ ಪಶು ವೈದ್ಯಾಧಿಕಾರಿಗಳಿಂದ ಲೈಸೆನ್ಸ್‌ ಪಡೆಯಬೇಕು.

ಇಷ್ಟು ದಿನ ಮನೆಯಲ್ಲಿ ತಮ್ಮಿಷ್ಟದ ನಾಯಿಗಳನ್ನು ಸಾಕಬಹುದಾಗಿತ್ತು. ಇನ್ನೂ ಹಲವರು ನಾಯಿ ಸಾಕುವುದನ್ನು ಫ್ಯಾಷನ್‌ ಮಾಡಿಕೊಂಡಿದ್ರೆ, ಇನ್ನೂ ಕೆಲವು ಉದ್ಯೋಗ ವನ್ನಾಗಿಸಿಕೊಂಡು ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ತಳಿಯ ನಾಯಿಗಳು ಕೂಡ ಸಿಲಿಕಾನ್‌ ಸಿಟಿಗೆ ಎಂಟ್ರಿ ಕೊಟ್ಟಿವೆ. ಸಾವಿರ ರೂಪಾಯಿಯಿಂದ ಹಿಡಿದು ಲಕ್ಷಾಂತರ ರೂಪಾಯಿ ಬೆಲೆಯ ನಾಯಿಗಳು ಕಾಣ ಸಿಗುತ್ತವೆ. ಆದ್ರೆ ಇನ್ಮುಂದೆ ನಿಮಗೆ ಇಷ್ಟ ಬಂದ ಹಾಗೆ ನಾಯಿಯನ್ನು ಸಾಕುವಂತಿಲ್ಲ. ಮನೆಯಲ್ಲಿ ಒಂದು ನಾಯಿ ಸಾಕಬೇಕು ಅನಿಸಿದ್ದರೂ ಕೂಡ ಕಡ್ಡಾಯವಾಗಿ ಲೈಸೆನ್ಸ್‌ ಪಡೆಯಬೇಕಾಗಿದೆ. ಅಷ್ಟೇ ಅಲ್ಲಾ ಅಪಾರ್ಟ್‌ಮೆಂಟ್‌ಗಳಲ್ಲಿ ಮನುಷ್ಯನ ಮೇಲೆ ದಾಳಿ ಮಾಡಬಹುದಾದ ಆಕ್ರಮಣಕಾರಿ ತಳಿಯ ನಾಯಿಗಳನ್ನು ಸಾಕುವಂತಿಲ್ಲ.

ಲೈಸೆನ್ಸ್‌ ಪಡೆದ ನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ದರು ಕೂಡ ಮಾಲೀಕರು ಸರಪಳಿಯನ್ನು ಹಾಕಿರಲೇ ಬೇಕು. ಒಂದೊಮ್ಮೆ ಮಲ ವಿಸರ್ಜನೆ ಮಾಡಿದ್ರೆ ಅದನ್ನು ತೆರವುಗೊಳಿಸುವ ಜವಾಬ್ದಾರಿಯೂ ಮಾಲೀಕರದ್ದೇ ಆಗಿರುತ್ತೆ. 12 ವರ್ಷ ಮೇಲ್ಪಟ್ಟ ಹೆಣ್ಣು ನಾಯಿಗಳಿಗೆ ಕಡ್ಡಾಯವಾಗಿ ಸಂತಾನಹರಣ ಶಸ್ತ್ರ ಚಿಕಿತ್ಸೆಯನ್ನು ಮಾಡಲೇ ಬೇಕೆಂಬ ನಿಯಮ ಜಾರಿಗೆ ಬರಲಿದೆ.

ಲೈಸೆನ್ಸ್‌ ಪಡೆದಿರುವ ನಾಯಿಗಳಿಗೆ ಮೈಕ್ರೋಚಿಪ್‌ ಅಳವಡಿಕೆ ಮಾಡಲಾಗುತ್ತಿದ್ದು, ಈ ಮೂಲಕ ನಾಯಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯುವ ಕಾರ್ಯವನ್ನು ಮಾಡಲಾಗುತ್ತದೆ. ಮಾತ್ರವಲ್ಲ ಕಾಲ ಕಾಲಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ನೀಡಬಹುದಾದ ಲಸಿಕೆಗಳನ್ನು ನೀಡುವುದು ಕಡ್ಡಾಯವಾಗಲಿದೆ.

ಬಿಬಿಎಂಪಿ ಇಂತಹದ್ದೊಂದು ನಿಯಮವನ್ನು ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಜಾರಿಗೆ ತರಲು ಸಿದ್ದತೆಯನ್ನು ಮಾಡಿಕೊಂಡಿದೆ. ಡಾಗ್‌ ರೂಲ್ಸ್‌ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಬಿಬಿಎಂಪಿ ಸರಕಾರಕ್ಕೆ ಅನುಮತಿಯನ್ನು ಕೋರಿದೆ. ಒಂದೊಮ್ಮೆ ಸರಕಾರ ಒಪ್ಪಿಗೆಯನ್ನು ನೀಡಿದ್ರೆ ನಾಯಿ ಸಾಕೋದಕ್ಕೆ ಅನುಮತಿ ಪಡೆಯೋದು ಕಡ್ಡಾಯವಾಗಲಿದೆ. ಆದರೆ ಈ ನಿಯಮದ ಕುರಿತು ಶ್ವಾನ ಪ್ರಿಯರು ಅಪಸ್ವರವೆತ್ತುವ ಸಾಧ್ಯತೆಯೂ ಇದೆ.

ಇದನ್ನೂ ಓದಿ : ದಸರಾ ಸಂಭ್ರಮ: ಗೊಂಬೆ ಹಬ್ಬದ ಮೆರುಗು ಹೆಚ್ಚಿಸುವ ಕಲಾ ಕೌಶಲ್ಯ, ಚಿತ್ರಕಲಾ ಪರಿಷತ್‌ನಲ್ಲಿ ವಿಶೇಷ ಮಾರಾಟ ಮೇಳ

ಇದನ್ನೂ ಓದಿ : ವಾಹನ ಚಾಲಕರಿಗೆ ಎಚ್ಚರ ! ಡ್ರೈವಿಂಗ್‌ ವೇಳೆ ಬ್ಲೂಟೂತ್‌, ಇಯರ್‌ ಪೋನ್‌ ಅಷ್ಟೇ ಅಲ್ಲಾ, Google Map ಬಳಸಿದ್ರೂ ಬೀಳುತ್ತೆ ದಂಡ

( No dog can be domesticated without a license; Steal and shut up is a hefty fine ! )

Comments are closed.