Mangalore Murder : ಹಾಡಹಗಲೇ ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿಯನ್ನು ಚೂರಿ ಇರಿದು ಬರ್ಬರ ಹತ್ಯೆ

ಮಂಗಳೂರು : (Mangalore Murder) ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸದ ಸಿಬಂದಿಯನ್ನು ಚೂರಿ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಮಂಗಳೂರು  ನಗರದ ಹಂಪನಕಟ್ಟೆ ಮಿಲಾಗ್ರಿಸ್ ಸಮೀಪ ಶುಕ್ರವಾರ ಹಾಡುಹಗಲೇ  ನಡೆದಿದೆ. ಹತ್ಯೆಗೀಡಾದ ವ್ಯಕ್ತಿ ಅತ್ತಾವರ ನಿವಾಸಿ ರಾಘವ (50) ಎಂದು ತಿಳಿದು ಬಂದಿದೆ.

ಮಂಗಳೂರು  ನಗರದ ಹಂಪನಕಟ್ಟೆ ಮಿಲಾಗ್ರಿಸ್ ಸಮೀಪದಲ್ಲಿರುವ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೋರ್ವರನ್ನು ಮುಸುಕುದಾರಿಯೊಬ್ಬರು ಹಾಡುಹಗಲೇ ಚೂರಿ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಅಂಗಡಿಯ ಮಾಲೀಕ ಊಟ ಮುಗಿಸಿಕೊಂಡು ಅಂಗಡಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಮಾಲೀಕರು ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಸದ್ಯ ಘಟನೆಯ ಕುರಿತು ಅಂಗಡಿ ಮಾಲೀಕರು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಡಿಸಿಪಿ ಅಂಶುಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಕೃತ್ಯ ದಾಖಲಾಗಿರುವ ಸಾಧ್ಯತೆಯಿದ್ದು, ಪರಿಶೀಲನೆ ನಡೆಯುತ್ತಿದೆ. ಜ್ಯುವೆಲ್ಲರಿಯಿಂದ ಓರ್ವ ಮುಸುಕುಧಾರಿ ಹೊರಗೆ ಬರುವುದು ಕಂಡು ಬಂದಿದೆ. ಘಟನೆ ವೇಳೆ ಅಂಗಡಿಯಲ್ಲಿ ಮೃತ ವ್ಯಕ್ತಿ ಒಬ್ಬರೇ ಇದ್ದರೆಂದು ತಿಳಿದುಬಂದಿದೆ.

ಕೊಲೆಗೆ ದರೋಡೆಯೆ ಕಾರಣವಾ ಅಥವಾ ಬೇರೆ ಕಾರಣವಿರಬಹುದೇ ಎಂದು ತಿಳಿದು ಬಂದಿಲ್ಲ.‌ ಅಂಗಡಿ ಮಾಲಕರು ಊಟ ಮಾಡಿ ವಾಪಸ್ ಆದಾಗ ಘಟನೆ ಗಮನಕ್ಕೆ ಬಂದಿದ್ದು, ದುಷ್ಕರ್ಮಿ ವ್ಯಕ್ತಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತನಿಖೆ ಮುಂದುವರೆದಿದ್ದು, ಆದಷ್ಟು ಬೇಗ ಕೊಲೆಪಾತಕನನ್ನು ಪತ್ತೆ ಹಚ್ಚುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Assault on parking Attendant: ಶುಲ್ಕ ಪಾವತಿಸುವಂತೆ ಕೇಳಿದ ಪಾರ್ಕಿಂಗ್ ಅಟೆಂಡೆಂಟ್ ಮೇಲೆ ಹಲ್ಲೆ: ಆರೋಪಿ ಅರೆಸ್ಟ್

ಬೈಕ್‌ ಟ್ಯಾಂಕರ್‌ ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

ಕಾರ್ಕಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್‌ ಮತ್ತು ಬೈಕ್‌ ನಡುವೆ ಮುಖಾಮುಖಿ ಢಿಕ್ಕಿಯಾಗಿದ್ದು, ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಹಾಗೂ ಸಹ ಸವಾರೆಗೆ ಗಾಯಗಳಾಗಿರುವ ಘಟನೆ ಕಾರ್ಕಳ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯ ಮಾಳ ಗೇಟ್‌ನ ಹೇರ್‌ ಪಿನ್‌ ಟರ್ನ್‌ ಎಂಬಲ್ಲಿ ನಡೆದಿದೆ. ನಿತೀನ್‌ ರಾಥೋಡ್‌ ಮೃತ ಬೈಕ್‌ ಸವಾರ.

ನಿತೀನ್‌ ರಾಥೋಡ್‌ ಹಾಗೂ ಕೀರ್ತನಾ ಇಬ್ಬರು ಬೈಕ್‌ ನಲ್ಲಿ ಕಾರ್ಕಳ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶೃಂಗೇರಿ ಕಡೆಯಿಂದ ಮಾಳ ಕಡೆಗೆ ಸವಾರಿ ಮಾಡುತ್ತಿದ್ದು, ಈ ವೇಳೆ ಮಾಳ ಕಡೆಯಿಂದ ಶೃಂಗೇರಿ ಕಡೆಗೆ ಹೋಗುತ್ತಿದ್ದ ಟ್ಯಾಂಕರ್‌ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರ ನಿತೀನ್‌ ರಾಥೋಡ್‌ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೀರ್ತನಾ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : Student dies at hostel: ಹಾಸ್ಟೆಲ್‌ನ 6ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು

ಇದನ್ನೂ ಓದಿ : Maharashtra crime: ಸ್ನೇಹಿತನನ್ನು ಕೊಲೆ ಮಾಡಿ ದೇಹವನ್ನು ಎಸೆಯಲು ಹೋದವ ತಾನೂ ಹೆಣವಾದ

Mangalore Murder: Barbaric murder of jewelery shop staff in broad daylight

Comments are closed.