National Youth Day 2023: ರಾಷ್ಟ್ರೀಯ ಯುವ ದಿನ : ಇಂದು ಮಹಾನ್‌ ಮಾನವತಾವಾದಿ ಸ್ವಾಮಿ ವಿವೇಕಾನಂದರ ಜನ್ಮದಿನ

ಪ್ರತಿ ವರ್ಷ ನಮ್ಮ ದೇಶದಲ್ಲಿ ಜನವರಿ 12 ರಂದು ಸ್ವಾಮಿ ವಿವೇಕಾನಂದರ (Swami Vivekananda) ಜನ್ಮದಿನವನ್ನು ರಾಷ್ಟ್ರೀಯ ಯುವ ದಿನ (National Youth Day 2023) ಎಂದು ಆಚರಿಸಲಾಗುತ್ತದೆ. ಈ ಮೂಲಕ ಭಾರತದ ಶ್ರೇಷ್ಠ ದಾರ್ಶನಿಕ ಹಾಗೂ ಆಧ್ಯಾತ್ಮ ಗುರುವನ್ನು ಗೌರವಿಸಲಾಗುತ್ತದೆ. ಈ ದಿನವನ್ನು ಯುವ ದಿವಸ ಎಂದೂ ಕರೆಯುತ್ತಾರೆ. ಏಕೆಂದರೆ ನಮ್ಮ ದೇಶದ ಯುವಜನತೆ ಅವರು ತೋರಿಸಿದ ಮಾರ್ಗದಲ್ಲಿ ನಡೆದು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲಿ ಎಂಬುದಾಗಿದೆ. ರಾಷ್ಟ್ರೀಯ ಯುವ ದಿನದ ಸಂದರ್ಭದಲ್ಲಿ ಅದರ ಇತಿಹಾಸ ಮತ್ತು ಮಹತ್ವದ ಬಗ್ಗೆ ಇಲ್ಲಿದೆ ಓದಿ.

ರಾಷ್ಟ್ರೀಯ ಯುವ ದಿನದ ಇತಿಹಾಸ :
1984 ರಲ್ಲಿ ಭಾರತ ಸರ್ಕಾರವು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ತೀರ್ಮಾನಿಸಿತು. ಇದು ದೇಶದ ಯುವ ಜನತೆಯನ್ನು ಪ್ರೇರೇಪಿಸುವ ಹಾಗೂ ಅವರನ್ನು ಸಬಲೀಕರಣಗೊಳಿಸುವುದಾಗಿದೆ. ಸ್ವಾಮಿ ವಿವೇಕಾನಂದರು ಭಾರತದಲ್ಲಷ್ಟೇ ಅಲ್ಲ ಪ್ರಪಂಚದಾದ್ಯಂತ ಅಸಂಖ್ಯಾತ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರು ಜನವರಿ 12, 1863 ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದರು. ಅವರು ಶಿಕ್ಷಣ ಮತ್ತು ಯುವ ಜನತೆಯ ಸಬಲೀಕರಣವನ್ನು ಪ್ರತಿಪಾದಿಸಿದರು. ಶಿಕ್ಷಣ ಮತ್ತು ಮಾನವೀಯತೆಯಿಂದ ಮಾತ್ರ ಧರ್ಮ ಮತ್ತು ದೇವರನ್ನು ಕಂಡುಕೊಳ್ಳಬಹುದು ಎಂದು ಅವರು ಪ್ರಬಲವಾಗಿ ನಂಬಿದ್ದರು. ಶ್ರೀ ರಾಮಕೃಷ್ಣ ಪರಮಹಂಸರ ಅನುಯಾಯಿಗಳಾಗಿದ್ದ ಸ್ವಾಮಿ ವಿವೇಕಾನಂದರು ತಮ್ಮ ಉಪನ್ಯಾಸಗಳ ಮೂಲಕ ದೇಶದಾದ್ಯಂತ ಜಾಗೃತಿಯನ್ನು ಹಚ್ಚಿಸಲು ಸಹಾಯ ಮಾಡಿದರು. 1893ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಮಾಡಿದ ಭಾಷಣದಿಂದಾಗಿ ಅವರು ಪ್ರಪಂಚದಾದ್ಯಂತ ಪ್ರಸಿದ್ಧಿಯನ್ನು ಪಡೆದರು.

ರಾಷ್ಟ್ರೀಯ ಯುವ ದಿನದ ಥೀಮ್‌ :
ಈ ವರ್ಷದ ರಾಷ್ಟ್ರೀಯ ಯುವ ದಿನದ ಥೀಮ್‌ ‘ವಿಕಸಿತ್‌ ಯುವ–ವಿಕಸಿತ್‌ ಭಾರತ’ ಎಂಬುದಾಗಿದೆ. ರಾಷ್ಟ್ರ ಮಟ್ಟದಲ್ಲಿ ನಮ್ಮ ದೇಶದ ಪ್ರತಿಭಾವಂತ ಯುವಕರನ್ನು ರಾಷ್ಟ್ರ ನಿರ್ಮಾಣದತ್ತ ಪ್ರೇರೇಪಿಸುವುದರ ಜೊತೆಗೆ ರಾಷ್ಟ್ರೀಯ ಯುವಜನೋತ್ಸವವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತದೆ. ಇದು ದೇಶದ ವಿವಿಧ ಭಾಗಗಳ ವೈವಿಧ್ಯಮಯ ಸಂಸ್ಕೃತಿಗಳನ್ನು, ಏಕ್ ಭಾರತ್, ಶ್ರೇಷ್ಠ ಭಾರತ್‌ ಎಂದು ಉತ್ಸಾಹದಲ್ಲಿ ಭಾಗವಹಿಸುವವರನ್ನು ಒಂದೇ ವೇದಿಕೆಯ ಮೇಲೆ ತರುತ್ತದೆ. ಈ ವರ್ಷ, ಜನವರಿ 12 ರಿಂದ 16 ರವರೆಗೆ ಕರ್ನಾಟಕದ ಹುಬ್ಬಳ್ಳಿ-ಧಾರವಾಡದಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ. ದೇಶದ ಯುವ ಜನತೆಯಲ್ಲಿ ವಿವೇಕಾನಂದರ ವಿಚಾರಗಳ ಮತ್ತು ತತ್ವಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸುವುದು ಈ ಆಚರಣೆಯ ಹಿಂದಿನ ಉದ್ದೇಶವಾಗಿದೆ.

ರಾಷ್ಟ್ರೀಯ ಯುವ ದಿನದ ಆಚರಣೆ :
ಪ್ರತಿ ವರ್ಷ ಜನವರಿ 12ರಂದು ಆಚರಿಸುವ ರಾಷ್ಟ್ರೀಯ ಯುವ ದಿನವನ್ನು ಭಾರತದ ಎಲ್ಲಾ ರಾಜ್ಯಗಳು ವಿಶೇಷವಾಗಿ ಆಚರಿಸುತ್ತಾರೆ. ಅನೇಕ ಸಂಘ–ಸಂಸ್ಥೆಗಳಲ್ಲಿ, ಶಾಲಾ–ಕಾಲೇಜುಗಳಲ್ಲಿ ಅವರ ಚಿಂತನೆಗಳನ್ನು ಭೋದನೆ ಮಾಡಲಾಗುತ್ತದೆ. ಜೊತೆಗೆ ಅನೇಕ ಭಾಷಣ, ಸೆಮಿನಾರ್‌ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅನೇಕ ಕ್ಲಬ್‌ಗಳು ರಕ್ತದಾನ ಶಿಬಿರಗಳನ್ನು ನಡೆಸುವುದು ಹಾಗೂ ಅವರ ಚಿಂತನೆಗಳಿರುವ ಪುಸ್ತಗಳನ್ನು ವಿತರಿಸುವುದು ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಇದನ್ನೂ ಓದಿ : Aravanam prasada: ಶಬರಿಮಲೆಯಲ್ಲಿ ಅರವಣ ಪ್ರಸಾದಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್‌

ಇದನ್ನೂ ಓದಿ : Auto Expo 2023: ಇಂದು ಪ್ರಾರಂಭವಾದ ಆಟೋ ಎಕ್ಸ್ಪೋ 2023; ಭರ್ಜರಿಯಾಗಿ ಅನಾವರಣವಾಗಲಿರುವ ಹೊಸ ಕಾರುಗಳು

(National Youth Day 2023 is celebrated on January 12, on the behalf of Swami Vivekananda Birth Anniversary)

Comments are closed.