ದಾರಿ ತಪ್ಪಿಸಿದ ಮಾರ್ಗಸೂಚಿ : ಮಣಿಪಾಲದಲ್ಲೊಂದು ದಾರಿ ತಪ್ಪಿಸುವ ಬೋರ್ಡ್

ಉಡುಪಿ : ದೂರದ ಊರಿನಿಂದ ಬರುವ ಪ್ರಯಾಣಿಕರಿಗೆ ಸಹಾಯವಾಗಲೆಂದು ದಾರಿ ಮಧ್ಯೆದಲ್ಲಿ ಮಾರ್ಗಸೂಚಿಯ ಫಲಕಗಳನ್ನು (Manipal Wrong Route Map) ಹಾಕಲಾಗುತ್ತದೆ. ಪ್ರಯಾಣಿಕರು ಸರಿಯಾದ ಮಾರ್ಗದಲ್ಲಿ ತಾವು ತಲುಪಬೇಕಾದ ಸ್ಥಳಕ್ಕೆ ತಲುಪಲಿ ಎಂದು ಹಾಕುವ ಮಾರ್ಗಸೂಚಿಯೊಂದು ಪ್ರಯಾಣಿಕರ ದಿಕ್ಕನ್ನು ತಪ್ಪಿಸಿದೆ. ಹೌದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಣಿಪಾಲದಲ್ಲೊಂದು ದಾರಿ ತಪ್ಪಿಸುವ ಮಾರ್ಗಸೂಚಿ ಬೋರ್ಡ್‌ನ್ನು ಹಾಕಿ ಪ್ರಯಾಣಿಕರ ದಿಕ್ಕನ್ನು ತಪ್ಪಿಸುತ್ತಿದ್ದಾರೆ.

ಮಣಿಪಾಲ ಸಿಂಡಿಕೇಟ್ ಸರ್ಕಲ್ ನಲ್ಲಿ ಕಾಮಗಾರಿಗಾಗಿ ರಸ್ತೆ ಅಗೆದ ಜಾಗದಲ್ಲಿ ಕಳೆದ ಸುಮಾರು ಮೂರು ವಾರಗಳಿಂದ ಒಂದು ವಿಚಿತ್ರ ಬೋರ್ಡನ್ನು ತಂದಿರಿಸಿದ್ದಾರೆ. ಕಾರ್ಕಳ ಧರ್ಮಸ್ಥಳದ ಕಡೆಗೆ ಹೋಗುವ ರಸ್ತೆಗೆ ಉಡುಪಿ – ಮಲ್ಪೆ – ಕುಂದಾಪುರ ಎನ್ನುವ ಮಾರ್ಗಸೂಚಿ ಫಲಕವನ್ನು ಹಾಕಿದ್ದಾರೆ. ಇದು ಯಾರೋ ಕಿಡಿಗೇಡಿಗಳ ಕೆಲಸವೋ ? ಅಥವಾ ರಸ್ತೆ ಕಾಮಗಾರಿ ಅವರ ಕೆಲಸವೋ ತಿಳಿದಿಲ್ಲ. ಆದರೆ ಇದ್ದರಿಂದಾಗಿ ತುರ್ತು ಆಗಿ ಆ ದಾರಿಯಿಂದ ಹೋಗುವ ಪ್ರಯಾಣಿಕರ ದಿಕ್ಕನ್ನು ಮಾತ್ರ ತಪ್ಪಿಸುವಂತೆ ಆಗಿದೆ.

ಇದನ್ನೂ ಓದಿ : Drunk and Drive: ಉಡುಪಿಯಲ್ಲಿ ಕುಡಿದ ಮತ್ತಿನಲ್ಲಿ ಟೆಂಪೋ ಚಲಾಯಿಸಿದ ಚಾಲಕ: ಬೈಕ್ ಸವಾರನಿಂದ ಕಪಾಳಮೋಕ್ಷ

ಇದನ್ನೂ ಓದಿ : Karkala Suicide case: ಡೆತ್‌ ನೋಟ್‌ ಬರೆದಿಟ್ಟು ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಚಾಲಕ ಆತ್ಮಹತ್ಯೆ

ಇದನ್ನೂ ಓದಿ : Sexual assault case: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: 20 ವರ್ಷ ಜೈಲು 50 ಸಾವಿರ ದಂಡ

ವಿಶೇಷ ಎಂದರೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ, ಜನಪ್ರತಿನಿಧಿಗಳು ಅಧಿಕಾರಿಗಳು ಕೂಡ ಇದೇ ಬೋರ್ಡ್‌ನ್ನು ಹಾದು ಪ್ರತಿನಿತ್ಯ ಅವರ ಕಚೇರಿ ಕಡೆ ತೆರಳುತ್ತಾರೆ. ಇಂತಹ ನಿರ್ಲಕ್ಷ್ಯ ಅಧಿಕಾರಿಗಳ ಗಮನಕ್ಕೆ ಬಾರದೇ ಇರುವುದು ದುರಂತವೇ ಸರಿ. ಹೊರ ಜಿಲ್ಲೆಗಳಿಂದ ಬಂದಿರುವ ಪ್ರಯಾಣಿಕರು ನಿತ್ಯವೂ ಈ ಬೋರ್ಡ್ ನೋಡಿ ಹಾದಿ ತಪ್ಪುತ್ತಿದ್ದಾರೆ. ಇನ್ನೂ ಕೆಲವರು ಅನುಮಾನಗೊಂಡು ಸ್ಥಳೀಯರಲ್ಲಿ ವಿಚಾರಿಸಿಕೊಂಡು ಪ್ರಯಾಣ ಬೆಳೆಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದಲೂ ಇಂತಹ ಬೋರ್ಡ್ ಮಣಿಪಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಕೂಡ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.

Manipal Wrong Route Map : A wrong route board in Manipal

Comments are closed.