ಕಿಚ್ಚನ ಕರ್ನಾಟಕ ಚಲನಚಿತ್ರ ಕಪ್‌ನಲ್ಲಿ ಆಡಲಿದ್ದಾರೆ ಕ್ರಿಸ್ ಗೇಲ್, ಸುರೇಶ್ ರೈನಾ, ಲಾರಾ, ದಿಲ್ಷಾನ್

ಬೆಂಗಳೂರು: ವೆಸ್ಟ್ ಇಂಡೀಸ್ ದಿಗ್ಗಜರಾದ ಬ್ರಯಾನ್ ಲಾರಾ (Brian Lara), ಕ್ರಿಸ್ ಗೇಲ್ (Chris Gayle), ಭಾರತದ ಮಾಜಿ ಸ್ಫೋಟಕ ದಾಂಡಿಗ ಸುರೇಶ್ ರೈನಾ (Suresh Raina), ಶ್ರೀಲಂಕಾ ದಿಗ್ಗಜ ತಿಲಕರತ್ನ ದಿಲ್ಷಾನ್ (Tilakaratne Dilshan), ದಕ್ಷಿಣ ಆಫ್ರಿಕಾ ದಿಗ್ಗಜ ಹರ್ಷಲ್ ಗಿಬ್ಸ್ (Gibbs) ಮತ್ತು ತಮಿಳುನಾಡಿನ ಮಾಜಿ ಕ್ರಿಕೆಟಿಗ ಸುಬ್ರಮಣ್ಯನ್ ಬದ್ರಿನಾಥ್ (Badrinath), ಕರ್ನಾಟಕ ಚಲನಚಿತ್ರ ಕಪ್ 3ನೇ ಆವೃತ್ತಿಯ (Kannada Chalanachitra Cup – KCC) ಟೂರ್ನಿಯಲ್ಲಿ ಆಡಲಿದ್ದಾರೆ.

ಕೆಸಿಸಿ ಟೂರ್ನಿಗೆ ತಂಡಗಳು ಮತ್ತು ಆಟಗಾರರ ಆಯ್ಕೆ ಪ್ರಕ್ರಿಯೆ ಗುರುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೆಸಿಸಿ ಸಂಸ್ಥಾಪಕ ನಿರ್ದೇಶಕ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಧ್ರುವ ಸರ್ಜಾ, ಡಾಲಿ ಧನಂಜಯ್, ನಟಿಯರಾದ ರಮ್ಯಾ, ಮಾಲಾಶ್ರೀ, ಸುಧಾರಾಣಿ, ತಾರಾ ಮತ್ತು ಶೃತಿ ಪಾಲ್ಗೊಂಡಿದ್ದರು.

ಕೆಸಿಸಿ 3ನೇ ಆವೃತ್ತಿಯ ಟೂರ್ನಿ ಫೆಬ್ರವರಿ 24 ಮತ್ತು 25ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಗಂಗಾ ವಾರಿಯರ್ಸ್, ಕದಂಬ ಲಯನ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ಒಡೆಯರ್ ಚಾರ್ಜರ್ಸ್, ವಿಜಯನಗರ ಪೇಟ್ರಿಯಟ್ಸ್ ಮತ್ತು ಹೊಯ್ಸಳ ಈಗಲ್ಸ್ ತಂಡಗಳು ಆಡಲಿವೆ. ಸುರೇಶ್ ರೈನಾ ಗಂಗಾ ವಾರಿಯರ್ಸ್ ಪರ ಆಡಲಿದ್ದರೆ, ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಕದಂಬ ಲಯನ್ಸ್ ಪರ ಆಡಲಿದ್ದಾರೆ.

ವಿಂಡೀಸ್ ದಿಗ್ಗಜ ಬ್ರಯಾನ್ ಲಾರಾ ಒಡೆಯರ್ ಚಾರ್ಜರ್ಸ್ ಪರ ಆಡಲಿದ್ದಾರೆ.ಕೆಸಿಸಿ-2 ಟೂರ್ನಿಯಲ್ಲಿ ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಆಡಂ ಗಿಲ್’ಕ್ರಿಸ್ಟ್, ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನೆರ್, ಹರ್ಷಲ್ ಗಿಬ್ಸ್, ಇಂಗ್ಲೆಂಡ್’ನ ಓವೈಸ್ ಶಾ ಮತ್ತು ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಆಡಿದ್ದರು.

ಈ ಬಾರಿಯ ಕೆಸಿಸಿ-3 ಟೂರ್ನಿಯಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರು, ಮಾಧ್ಯಮ ಮಿತ್ರರು, ಶಾಸಕರುಗಳು ಆರು ತಂಡಗಳ ಪರ ಆಡಲಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ, ಸುರಪುರ ಶಾಸಕ ರಾಜೂಗೌಡ, ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಭಟ್ಕಳ ಶಾಸಕ ಸುನೀಲ್ ನಾಯ್ಕ್ ಸೇರಿದಂತೆ ಆರು ತಂಡಗಳ ಪರ ಆರು ರಾಜಕಾರಣಿಗಳು ಆಡಲಿದ್ದಾರೆ.ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಮೋಹಕ ತಾರೆ ರಮ್ಯಾ ಕೆಸಿಸಿ 3ನೇ ಆವೃತ್ತಿಯ ಟೂರ್ನಿಯ ಬ್ರಾಂಡ್ ಅಂಬಾಸಿಡರ್’ಗಳಾಗಿದ್ದಾರೆ.

ಇದನ್ನೂ ಓದಿ : RCB ಆಟಗಾರ ಮೊಹಮ್ಮದ್ ಸಿರಾಜ್ ವಿಶ್ವದ ನಂ 1 ಬೌಲರ್

ಇದನ್ನೂ ಓದಿ : IND vs NZ T20 : ಇಂದಿನಿಂದ ಭಾರತ Vs ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯ : Playing XI

ಇದನ್ನೂ ಓದಿ : India vs New Zealand 3rd ODI : ರೋಹಿತ್ ಶರ್ಮಾ, ಶುಭಮನ್ ಗಿಲ್ ಆರ್ಭಟ : ನ್ಯೂಜಿಲೆಂಡ್ ಗೆ 385 ರನ್ ಸವಾಲು

Kannada Chalanachitra Cup: Chris Gayle, Suresh Raina, Laura, Dilshan will play in the Kannada Chalanachitra Cup.

Comments are closed.