Neeraj Chopra : ಕರ್ನಾಟಕದಲ್ಲೇ ತರಬೇತಿ ಪಡೆದಿದ್ದ ಚಿನ್ನದ ಹುಡುಗ : ನೀರಜ್‌ ಚೋಪ್ರಾಗೆ ಬಳ್ಳಾರಿಯ ಜಿಂದಾಲ್‌ ಪ್ರಾಯೋಜಕತ್ವ

ಬಳ್ಳಾರಿ : ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್‌ ಚೋಪ್ರಾ ಗುಣಗಾನ ನಡೆಯುತ್ತಿದೆ. ಆದ್ರೆ ಚಿನ್ನದ ಹುಡುಗನ ಸಾಧನೆ ಸಾಥ್‌ ಕೊಟ್ಟಿದ್ದು, ಗಡಿನಾಡು ಬಳ್ಳಾರಿ. ನೀರಜ್‌ ಚೋಪ್ರಾ ಒಲಿಂಪಿಕ್ಸ್‌ಗೆ ಮುನ್ನ ತರಬೇತಿ ಪಡೆದಿದ್ದು ಕರ್ನಾಟಕದಲ್ಲಿ.

ಹೌದು, ನೀರಜ್‌ ಚೋಪ್ರಾ ಇದೀಗ ಭಾರತೀಯರ ಪಾಲಿಗೆ ಚಿನ್ನದ ಹುಡುಗ. ಹರಿಯಾಣ ಮೂಲಕ ನೀರಜ್‌ ಬಳ್ಳಾರಿಯ ಸಂಡೂರಿನ ತೋರಣಗಲ್ಲು ಬಳಿಯಲ್ಲಿರುವ ಜಿಂದಾಲ್‌ ಕಂಪೆನಿಗೆ ಸೇರಿದ ತರಬೇತಿ ಸಂಸ್ಥೆಯಲ್ಲಿ ತರಬೇತಿಯನ್ನ ಪಡೆದಿದ್ದಾರೆ. ೨೦೧೭ರಲ್ಲಿ ಜಿಂದಾಲ್‌ ಸಂಸ್ಥೆ Inspire Institute of sports ಸಂಸ್ಥೆಯನ್ನು ಆರಂಭಿಸಿತ್ತು. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಕ್ರೀಡಾಪಟುಗಳು ತರಬೇತಿಯನ್ನು ಪಡೆಯುತ್ತಿದ್ದರು. ಇದೇ ಸಂಸ್ಥೆಯಲ್ಲಿಯೇ ನೀರಜ್‌ ಕೂಡ ತರಬೇತಿಯನ್ನು ಪಡೆದಿದ್ದಾರೆ.

ನೀರಜ್‌ ಚೋಪ್ರಾ 20217ರಲ್ಲಿ Inspire Institute of sports ಸಂಸ್ಥೆಯನ್ನು ಸೇರಿದ್ದು 2020 ವರೆಗೂ ಜಾವೆಲಿನ್‌ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಫ್ರಾನ್ಸ್‌ ಮೂಲದ ತರಬೇತುದಾರ ಅಂತೋನಿ ಅವರು ತರಬೇತಿಯನ್ನು ನೀಡಿದ್ದಾರೆ. ಸುಮಾರು 170ಕ್ಕೂ ಅಧಿಕ ಕ್ರೀಡಾಪಟುಗಳು ತರಬೇತಿಯನ್ನು ಪಡೆಯುತ್ತಿದ್ದು, ಈ ಪೈಕಿ ನೀರಜ್‌ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಚಿನ್ನದ ಹುಡುಗನ ಸಾಧನೆಗೆ ಜಿಂದಾಲ್‌ ಸಂಸ್ಥೆ ಪ್ರಾಯೋಜಕತ್ವ ನೀಡಿದೆ. ನೀರಜ್‌ ಸಾಧನೆ ಇದೀಗ ಇನ್ನಷ್ಟು ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ. ಒಟ್ಟಿನಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಹಿಂದೆ ಕರುನಾಡಿನ ನಂಟಿರೋದು ಕನ್ನಡಿಗರಿಗೆ ಹೆಮ್ಮೆಯನ್ನು ತಂದಿದೆ.

ಇದನ್ನೂ ಓದಿ : ಭಾರತಕ್ಕೆ ಚಿನ್ನದ ಕಿರೀಟ ತಂದ ನೀರಜ್‌ : ಪ್ರಧಾನಿ ಮೋದಿ ಅಭಿನಂದನೆ, ನನಸಾಯ್ತು ಭಾರತೀಯರ ಕನಸು

Comments are closed.