ಟಿಕೆಟ್ ತಪ್ಪಿದ್ದಕ್ಕೆ ಕಣ್ಣೀರಿಟ್ಟ ಶಾಸಕ ರಘುಪತಿ ಭಟ್ : ಪಕ್ಷೇತರರಾಗಿ ಸ್ಪರ್ಧಿಸುತ್ತಾರಾ ಬಿಜೆಪಿ ಶಾಸಕ

ಉಡುಪಿ : (MLA Raghupathi Bhatt) ಕರ್ನಾಟಕ ಚುನಾವಣೆ ಹಿನ್ನಲೆಯಲ್ಲಿ ಕೊನೆಗೂ ಬಿಜೆಪಿ ತನ್ನ 189 ಅಭ್ಯರ್ಥಿಗಳ ಪಟ್ಟಿಯನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಿದೆ. ಬಿಜೆಪಿ ಟಿಕೆಟ್‌ ಪಟ್ಟಿ ಬಿಡುಗಡೆ ಬೆನ್ನಲ್ಲೇ ಇದೀಗ ಎಲ್ಲೆಡೆ ಬಂಡಾಯದ ಭೀತಿ ಎದುರಾಗಿದೆ. ಇದರ ನಡುವೆ ಉಡುಪಿಯಲ್ಲೂ ಬಂಡಾಯದ ಭೀತಿ ಎದುರಾಗಿದೆ. ಏಕೆಂದರೆ ಉಡುಪಿ ಕ್ಷೇತ್ರದಲ್ಲಿ ಸತತವಾಗಿ ಮೂರು ಭಾರಿ ರಘುಪತಿ ಭಟ್‌ ಶಾಸಕರಾಗಿ ಹೊರಬಂದಿದ್ದರು. ಆದರೆ ಈ ಬಾರಿ ಅವರಿಗೆ ಟಿಕೆಟ್‌ ಕೈ ತಪ್ಪಿದ್ದು, ಹೊಸ ಮುಖಕ್ಕೆ ಟಿಕೆಟ್‌ ಘೋಷಣೆಯಾಗಿದೆ. ಈ ಹಿನ್ನಲೆಯಲ್ಲಿ ಪಕ್ಷ ನನ್ನನ್ನು ನಡೆಸಿಕೊಂಡ ರೀತಿ ಸರಿ ಇಲ್ಲ ಎಂದು ರಘುಪತಿ ಭಟ್‌ ಅವರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ವಿಧಾನಸಭಾ ಚುನಾವಣೆ ಘೋಷಣೆಯಾಗಿ ಹಲವು ದಿನಗಳು ಕಳೆದಿದ್ದರೂ ಕೂಡ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸುತ್ತಿತ್ತು. ಕೊನೆಗೂ ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇರುವಂತೆಯೇ ಬಿಜೆಪಿ ಹೈಕಮಾಂಡ್‌ ಪಟ್ಟಿಯನ್ನು ಪ್ರಕಟಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರು ಹಾಗೂ ಸಂಸದರ ಮಕ್ಕಳಿಗೆ ಟಿಕೆಟ್‌ ನೀಡಲು ಸಮ್ಮತಿ ಇಲ್ಲದ ಕಾರಣ ಪಕ್ಷದ ಕಾರ್ಯಕರ್ತರು ಹಾಗೂ ಹೊಸ ಮುಖಗಳನ್ನು ಕಣಕ್ಕೆ ಇಳಿಸಲು ಬಿಜೆಪಿ ಮುಂದಾಗಿದ್ದಾರೆ. ಇದರಿಂದಾಗಿ ಟಿಕೆಟ್‌ ಹಂಚಿಕೆ ಬಿಕ್ಕಟ್ಟಿನ ಹಂತ ತಲುಪಿದ್ದು, ಮೊದಲ ಪಟ್ಟಿಯ ಬಿಡುಗಡೆಯಾದ ಕೂಡಲೇ ಎಲ್ಲೆಡೆ ಬಂಡಾಯದ ಭೀತಿ ಎದುರಾಗಿದೆ.

ಕರಾವಳಿ ಭಾಗದ ಹಿಂದಿನ ಎಲ್ಲಾ ಚುನಾವಣೆಯಲ್ಲಿ ಹಿಂದುತ್ವ ಮತ್ತು ಮೇೂದಿಯನ್ನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದ ಬಿಜೆಪಿ ಈ ಬಾರಿ ಜಾತಿಯನ್ನೆ ಪ್ರಧಾನ ಅಸ್ತೃವಾಗಿ ಇಟ್ಟು ಕೊಂಡು ಅಭ್ಯರ್ಥಿಗಳ ಆಯ್ಕೆಯ ಕಸರತ್ತಿಗೆ ಮುಂದಾಗಿದೆ. ಅಧಿಕಾರದ ಬೇಕೆನ್ನುವಾಗ ಜಾತಿ ಲೆಕ್ಕಾಚಾರದಲ್ಲಿ ಸೀಟು ಹಂಚುವ ಕೆಲಸಕ್ಕೆ ಮುಂದಾಗುತ್ತಿರುವುದು ಬಿಜೆಪಿಯ ಮೇಲಿನ ವಿಶ್ವಾಸವನ್ನೆ ಕಳೆದು ಕೊಳ್ಳುವ ಪರಿಸ್ಥಿತಿಗೆ ಮತದಾರರನ್ನು ತಳ್ಳುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ ಉಡುಪಿಯಲ್ಲಿ ಮೂರು ಹಾಲಿ ಶಾಸಕರಿಗೆ ಈ ಬಾರಿ ಸೀಟು ಸಿಗುವುದಿಲ್ಲ ಎನ್ನುವ ಚರ್ಚೆ ಹರಿದಾಡಿತ್ತು. ಕುಂದಾಪುರದಲ್ಲಿ ಹಾಲಾಡಿಯವರು ಚುನಾವಣಯಿಂದ ಹಿಂದೆ ಸರಿದ ನಂತರ ಆ ಸ್ಥಳಕ್ಕೆ ಬ್ರಾಹ್ಮಣ ಸಮುದಾಯದ ಒಬ್ಬರಿಗೆ ಸೀಟು ಕೊಡಬೇಕಾದ ಕಾರಣಕೇೂಸ್ಕರ ಉಡುಪಿಯ ಶಾಸಕರಾದ ರಘಪತಿ ಭಟ್ಟರಿಗೆ ಸೀಟು ಕೊಡಲಿಲ್ಲ ಎನ್ನಲಾಗಿದೆ.

ಆದರೆ ಈ ಬಾರಿ ಖಂಡಿತವಾಗಿಯೂ ರಘುಪತಿ ಭಟ್ಟರಿಗೆ ಟಿಕೆಟ್‌ ಸಿಗುತ್ತೆ ಅಂದುಕೊಂಡ ಕಾರ್ಯಕರ್ತರು ಹಾಗೂ ಮತದಾನರಿಗೆ ಈ ಬಾರಿ ಶಾಕ್‌ ಆಗಿದ್ದು, ರಘುಪತಿ ಭಟ್ಟರಿಗೂ ಕೂಡ ಶಾಕ್‌ ನೀಡಿದೆ. ಇದರ ಬಗ್ಗೆ ತನ್ನ ಅಳಲನ್ನು ಕೂಡ ಬಟ್ಟರು ತೋಡಿಕೊಂಡಿದ್ದಾರೆ. ಪಕ್ಷ ನನ್ನ ನಡೆಸಿಕೊಂಡ ರೀತಿ ಸರಿಯಿಲ್ಲ. ಮೂರು ಬಾರಿಯ ಶಾಸಕ ನಾನು, ಪಕ್ಷದ ನಾಯಕರು ಸೌಜನ್ಯಕ್ಕಾದರೂ ಸಂಪರ್ಕಿಸಿ ಕೇಳಬಹುದಿತ್ತು. ಮೊದಲೇ ಟಿಕೆಟ್‌ ಸಿಗುವುದಿಲ್ಲ ಎಂದು ಗೊತ್ತಿದ್ದರೆ ಈಶ್ವರಪ್ಪ ರೀತಿ ಮಾಡುತ್ತಿದ್ದೆ. ನಾನು ಶಾಕ್‌ ಗೆ ಒಳಗಾಗಿದ್ದೇನೆ ನನಗೆ ಜಾತಿ ಇಲ್ಲ ಎಂದು ಟಿಕೆಟ್‌ ನೀಡಿಲ್ಲ ಎಂದು ಟಿಕೆಟ್‌ ವಂಚಿತ ಶಾಸಕ ರಘುಪತಿ ಭಟ್‌ ಕಣ್ಣೀರು ಹಾಕಿದ್ದಾರೆ.

ಪಕ್ಷದ ನಿರ್ಧಾರದ ಕುರಿತು ಬೇಸರವಿಲ್ಲ. ಈಗಿನ ಅಭ್ಯರ್ಥಿ ನಾವೇ ಬೆಳೆಸಿದ ಅಭ್ಯರ್ಥಿ ಅವರ ಬಗ್ಗೆ ಬೇಸರವಿಲ್ಲ. ಆದರೆ ನಡೆಸಿಕೊಂಡ ರೀತಿಯ ಬಗ್ಗೆ ಬೇಸರವಿದೆ. ಮೂರು ತಿಂಗಳ ಮುಂಚೆ ಈಶ್ವರಪ್ಪ ಅವರಿಗೆ ಮಾಡಿದ ಹಾಗೆ ನನಗೆ ಹೇಳಿದ್ದರೆ ನಾನು ಕೂಡ ಹಿಂದೆ ಸರಿಯುತ್ತಿದೆ ಎಂದು ಅತ್ತಿದ್ದಾರೆ. ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಡುವ ಪ್ರಶ್ನೆಯೇ ಇಲ್ಲ. ಯಾಕೆ ಹೀಗಾಯಿತು ಎಂಬುದು ತುಂಬಾ ಬೇಸರ ತಂದಿದೆ. ನಾನು ಬೆಳೆಸಿದ ಹುಡುಗ ಇಂದು ಅಭ್ಯರ್ಥಿಯಾಗಿದ್ದು, ಅವರಿಗೆ ಶುಭಾಶಯ ಕೋರುತ್ತೇನೆ. ಅಭ್ಯರ್ಥಿ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಉಡುಪಿಯಲ್ಲಿ ಪಾರ್ಟಿ ಕಟ್ಟಿದ್ದೇನೆ ಮತ್ತು ಬಿಜೆಪಿಯಿಂದ ಇಲ್ಲಿ ಯಾರು ನಿಂಥರೂ ಗೆಲ್ಲಲಿದ್ದಾರೆ ಎನ್ನುವ ಸ್ಥಿತಿ ನಿರ್ಮಾಣ ಮಾಡಿದ್ದೇನೆ. ಪಕ್ಷಕ್ಕೆ ಈಗ ನನ್ನ ಅವಶ್ಯಕತೆ ಇಲ್ಲ ಎಂಬುದು ತೋರಿಸಿದ್ದಾರೆ. ಅಮಿತ್‌ ಶಾ ಬೇಡ ಬೇರೆ ನಾಯಕರು ಕರೆ ಮಾಡಿ ತಿಳಿಸಬಹುದಿತ್ತು. ಇದು ನನಗೆ ತುಂಬಾ ಬೇಸರ ತಂದಿದೆ ” ಎಂಬುದಾಗಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ಕೊನೆಗೂ ನಿಜವಾಯ್ತು ಜೋಶಿ ಭವಿಷ್ಯ: ಶೆಟ್ಟರ್ ಕೈ ತಪ್ಪಿದ ಟಿಕೇಟ್

ಹಾಗಿದ್ದರೆ ಈ ಬಾರಿ ಶಾಸಕ ರಘುಪತಿ ಭಟ್‌ ಕಾರ್ಯಕರ್ತರ ಒತ್ತಾಯದ ಮೇರೆಗೆ ಸ್ವತಂತ್ರವಾಗಿ ನಿಲ್ಲುತ್ತಾರಾ ಎನ್ನುವ ಕುತೂಹಲ ಮೂಡಿದೆ. ಸ್ವತಂತ್ರವಾಗಿ ನಿಂತರೂ ಕೂಡ ಗೆಲ್ಲಬಹುದು ಎಂಬ ಅಭಿಪ್ರಾಯ ಶಾಸಕರದ್ದು. ಲೆಕ್ಕಾಚಾರ ಬಿಟ್ಟು ಸಾಧನೆ ಸಾಮಥ್ಯ೯ ವ್ಯಕ್ತಿತ್ವಕ್ಕೆ ಬೆಲೆಕೊಟ್ಟು ಅಭ್ಯರ್ಥಿಗಳ ಆಯ್ಕೆಗೆ ಮಾನದಂಡ ಪ್ರಯೇೂಗಿಸಿ ಅನ್ನುವುದು ಅಭಿವೃದ್ಧಿ ಪರ ಮಾತನಾಡುವ ಮತದಾರರ ಒತ್ತಾಯವೂ ಹೌದು.

MLA Raghupathi Bhatt : MLA in tears because of wrong ticket Raghupathi Bhatt : Will BJP MLA contest as an independent?

Comments are closed.