ಕೊನೆಗೂ ನಿಜವಾಯ್ತು ಜೋಶಿ ಭವಿಷ್ಯ: ಶೆಟ್ಟರ್ ಕೈ ತಪ್ಪಿದ ಟಿಕೇಟ್

(Jagdish Shetter) ನೀರಿಕ್ಷೆಯಂತೆ ರಾಜ್ಯದಲ್ಲಿ ಬಿಜೆಪಿ ಟಿಕೇಟ್ ಹೊಸ ಬಂಡಾಯದ ಅಲೆಯನ್ನೇ ಹುಟ್ಟು ಹಾಕಿದೆ. ಈ ಮಧ್ಯೆ ಬಿಜೆಪಿಯ ಹಿರಿಯ ನಾಯಕರು ಕಿರಿಯರಿಗಿಂತ ಜೋರಾದ ಬಂಡಾಯಕ್ಕೆ ಸಜ್ಜಾಗಿದ್ದು ಈ ಪೈಕಿ ಸಿಎಂ ಹಾಗೂ ಸಚಿವ ಸ್ಥಾನದ ಅಧಿಕಾರವನ್ನು ಕಂಡ ಜಗದೀಶ್ ಶೆಟ್ಟರ್ ಕೂಡ ಟಿಕೆಟ್ ಕೈತಪ್ಪಿದ್ದಕ್ಕೆ ಕೆಂಡಾಮಂಡಲರಾಗಿದ್ದಾರೆ. ಅಷ್ಟೇ ಅಲ್ಲ ಬಂಡಾಯದ ಬಾವುಟದೊಂದಿಗೆ ದೆಹಲಿಗೆ ಹಾರಿದ್ದಾರೆ.

ಜಗದೀಶ್ ಶೆಟ್ಟರ್ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಸಂಘಟನೆ ಸೇರಿದಂತೆ ಹಲವು ಕೆಲಸದಲ್ಲಿ ತೊಡಗಿಸಿಕೊಂಡವರು. ಅಷ್ಟೇ ಅಲ್ಲ ಪಕ್ಷದ ತುರ್ತು ಅಗತ್ಯಕ್ಕೆ ಸಿಎಂ ಸ್ಥಾನಕ್ಕೆ ಏರಿ ಪಕ್ಷವನ್ನು ಮುನ್ನಡೆಸಿದವರು. ಆದರೆ ಬದಲಾಗ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷ ಅವರನ್ನು ಚುನಾವಣೆಯಿಂದ ಸರಿಯುವಂತೆ ಸೂಚಿಸಿದೆ ಎನ್ನಲಾಗಿದೆ.

ಈ ಸಂಗತಿ ಶೆಟ್ಟರ್ ಅಸಮಧಾನಕ್ಕೆ ಕಾರಣವಾಗಿದೆ. ಕನಿಷ್ಠ ಎರಡು ಮೂರು ತಿಂಗಳ ಹಿಂದೆ ಚುನಾವಣೆಯಿಂದ ದೂರ ಸರಿಯುವಂತೆ ಹೇಳಿದ್ದರೇ ನಾನು ಯೋಚನೆ ಮಾಡಬಹುದಿತ್ತು. ಆದರೆ ಈಗ ಎಲ್ಲ ಸಿದ್ಧತೆ ಮಾಡಿಕೊಂಡು ಪ್ರಚಾರ ಮಾಡಲು ಆರಂಭಿಸಿದ ಬಳಿಕ ಚುನಾವಣೆಯಿಂದ ದೂರ ಸರಿಯುವಂತೆ ಹೇಳಿದ್ದು ಸರಿಯಲ್ಲ ಎಂದು ವರಿಷ್ಠರ ವಿರುದ್ಧವೇ ಕಿಡಿಕಾರಿದ್ದಾರೆ.

ಅಷ್ಟೇ ಅಲ್ಲ ಒಂದಿಷ್ಟು ಅಭಿವೃದ್ದಿ ಕಾರ್ಯಗಳು ಬಾಕಿ ಉಳಿದಿವೆ. ಕನಿಷ್ಠ ಅವುಗಳನ್ನು ಪೂರ್ಣಗೊಳಿಸುವುದಕ್ಕಾದರೂ ನಾನು ಚುನಾವಣೆಗೆ ಸ್ಪರ್ಧಿಸಿಯೇ ಸಿದ್ಧ ಎಂದಿದ್ದಾರೆ. ಶೆಟ್ಟರ್ ಈ ಬಂಡಾಯ ಹೈಕಮಾಂಡ್ ಪಾಲಿಗೂ ಕೊಂಚ‌ತಲೆನೋವಾಗಿದೆ. ಹಾಗೆ ನೋಡಿದರೇ ಶೆಟ್ಟರ್ ಜೊತೆ ಜೊತೆಯಲ್ಲೇ ಈಶ್ವರಪ್ಪನವರಿಗೂ ಹೈಕಮಾಂಡ್ ನಿವೃತ್ತಿ ಪಡೆಯುವಂತೆ ಸೂಚಿಸಿದೆ ಎನ್ನಲಾಗಿದೆ. ಆದರೆ ಈಶ್ವರಪ್ಪ ಯಾವುದೇ ಹೈಡ್ರಾಮಾ ಇಲ್ಲದೇ ನಿವೃತ್ತಿಗೆ ಜೈ ಎಂದಿದ್ದಾರೆ. ಆದರೆ ಶೆಟ್ಟರ್ ಮಾತ್ರ ಅಭಿಮಾನಿಗಳ ಜೊತೆ ಸರಣಿ ಸಭೆ ನಡೆಸಿ, ಬಂಡಾಯವಾಗಿ ಕಣಕ್ಕಿಳಿಯುವ ಮುನ್ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ಕರ್ನಾಟಕದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಬಿಜೆಪಿಗೆ ರಾಜೀನಾಮೆ ಘೋಷಣೆ !

ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಶೆಟ್ಟರ್ ನ್ನು ದೆಹಲಿಗೆ ಕರೆಯಿಸಿದೆ. ಅಮಿತ್ ಶಾ, ಅರುಣ ಸಿಂಗ್ ,ಧರ್ಮೇಂದ್ರ ಪ್ರಧಾನ್ ಶೆಟ್ಟರ್ ಜೊತೆ ಮಾತುಕತೆ ನಡೆಸಿ ಅವರನ್ನು ಮನವೊಲಿಸಲಿದೆ ಎನ್ನಲಾಗಿದೆ. ಮೂಲಗಳ ಮಾಹಿತಿ ಪ್ರಕಾರ ಈ ಹಿಂದೆಯೇ ಶೆಟ್ಟರ್ ಅವರನ್ನು 2023 ರ ಚುನಾವಣೆಯಿಂದ ದೂರ ಇಡಲು ಪ್ಲ್ಯಾನ್ ಮಾಡಲಾಗಿತ್ತು ಎನ್ನಲಾಗ್ತಿದೆ. ಈ ಬಗ್ಗೆ ಹಿಂದೆಯೇ ಒಮ್ಮೆ ಜೋಶಿ ಮಾತನಾಡಿದ್ದರು. ಶೆಟ್ಟರ್ ಇನ್ನೂ ರಾಜ್ಯಪಾಲರ ಹುದ್ದೆಗೆ ನೇಮಕವಾಗೋದು ಬಾಕಿ ಇದೆ ಎಂದಿದ್ದರು. ಅದರಂತೆ ಈಗ ಶೆಟ್ಟರ್ ಗೆ ಟಿಕೆಟ್ ನೀಡದೇ ಇರೋದು ಹೈಕಮಾಂಡ್ ಲೆಕ್ಕಾಚಾರದ ಮೇಲೆಯೇ ಚರ್ಚೆ ಹುಟ್ಟುಹಾಕಿದೆ.

Jagdish Shetter: Joshi’s prediction finally came true: Shetter’s missed ticket

Comments are closed.