Muslim female students : ಹಿಜಾಬ್​ಗೆ ಅನುಮತಿ ಕೊಡದ ಕಾಲೇಜುಗಳಿಂದ ಟಿಸಿ ಹಿಂಪಡೆದ ಮುಸ್ಲಿಂ ವಿದ್ಯಾರ್ಥಿನಿಯರು

ಉಡುಪಿ/ಮಂಗಳೂರು : Muslim female students : ಒಂದು ಕಾಲದಲ್ಲಿ ರಾಜ್ಯದಲ್ಲಿ ಭಾರೀ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದ ಹಿಜಾಬ್​ ಗಲಾಟೆ ಈಗಲೂ ಕೂಡ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಕರಾವಳಿಯಲ್ಲಿ ಶುರುವಾದ ಈ ವಿವಾದ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು . ಹೈಕೋರ್ಟ್​ನಲ್ಲಿ ಕಾಲೇಜುಗಳಲ್ಲಿ ಸಮವಸ್ತ್ರವೇ ಕಡ್ಡಾಯ ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ಬೆಂಬಲ ಸಿಕ್ಕ ಬಳಿಕ ಈ ಪ್ರಕರಣ ಸುಪ್ರೀಂ ಮೆಟ್ಟಿಲು ಸಹ ಏರಿದೆ . ಈ ಎಲ್ಲದರ ನಡುವೆ ಇದೀಗ ಮತ್ತೆ ಕರಾವಳಿಯಲ್ಲಿ ಹಿಜಾಬ್​ ಸಮರ ಮುಂದುವರಿದಿದೆ.

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಿಜಾಬ್​ ಧರಿಸಲು ಅವಕಾಶ ಕೊಡದ ಕಾಲೇಜುಗಳಿಂದ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಟಿಸಿಗಳನ್ನು ವಾಪಸ್​ ಪಡೆದಿದ್ದಾರೆ. ಕರಾವಳಿ ಜಿಲ್ಲೆಯ ಕಾಲೇಜುಗಳಿಂದ 16 ಪ್ರತಿಶತ ವಿದ್ಯಾರ್ಥಿನಿಯರು ತಮ್ಮ ವರ್ಗಾವಣೆ ಪತ್ರವನ್ನು ಹಿಂಪಡೆದಿದ್ದಾರೆ. ನಿಮ್ಮ ವರ್ಗಾವಣೆ ಪತ್ರಗಳನ್ನು ನೀವು ವಾಪಸ್​ ಪಡೆಯ ಬಹುದು ಎಂದು ಮಂಗಳೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಪಿ.ಎಸ್​ ಯಡಪಡಿತ್ತಾಯ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ತಮ್ಮ ವರ್ಗಾವಣೆ ಪತ್ರಗಳನ್ನು ವಾಪಸ್​ ಪಡೆದಿದ್ದಾರೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸರಿ ಸುಮಾರು 900 ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 145 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ವರ್ಗಾವಣೆ ಪತ್ರಗಳನ್ನು ಹಿಂಪಡೆದಿದ್ದಾರೆ. ಎರಡೂ ಜಿಲ್ಲೆಗಳ ಸರ್ಕಾರಿ ಕಾಲೇಜುಗಳಿಂದ 34 ಪ್ರತಿಶತ, ಅನುದಾನಿತ ಕಾಲೇಜುಗಳಿಂದ 13 ಪ್ರತಿಶತ ವಿದ್ಯಾರ್ಥಿನಿಯರು ಟಿಸಿಗಳನ್ನು ವಾಪಸ್​ ಪಡೆದಿದ್ದಾರೆ ಎಂದು ಆರ್​​ಟಿಐ ಪ್ರಶ್ನೆಗಳಿಗೆ ಉತ್ತರ ನೀಡುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ವಿದ್ಯಾರ್ಥಿನಿಯರು ಟಿಸಿಯನ್ನು ಪಡೆಯಲು ಸಚಿವ ಬಿ.ಸಿ ನಾಗೇಶ್​ ಮುಖ್ಯ ಕಾರಣ ಎಂದು ಮಂಗಳೂರಿನ ಹಿಜಾಬ್​ ಹೋರಾಟಗಾರ್ತಿ ಗೌಸಿಯಾ ಕಿಡಿ ಕಾರಿದ್ದಾರೆ. ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಗೌಸಿಯಾ ಹಿಜಾಬ್​ ಧರಿಸಲು ಅವಕಾಶ ಇಲ್ಲದ ಕಾರಣ ಕಾಲೇಜಿನಿಂದ ಟಿಸಿಯನ್ನು ಹಿಂಪಡೆದಿದ್ದಾರೆ. ಈ ಎಲ್ಲಾ ಘಟನೆಗಳಿಗೆ ಮೂಲ ಕಾರಣ ಬಿ.ಸಿ ನಾಗೇಶ್​​ ಎಂದು ಗೌಸಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನ ನೀಡಿರುವ ಹಕ್ಕಿನ ಪ್ರಕಾರ ಶಿಕ್ಷಣ ಪಡೆಯಲು ನಾಗೇಶ್​ ಬಿಡಲಿಲ್ಲ. ನಾಗೇಶ್​ ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ದೊಡ್ಡ ನಷ್ಟವಾಗಲಿದೆ. ಹಲವು ಸರ್ಕಾರಿ ಕಾಲೇಜುಗಳು ಮುಚ್ಚಲಿದೆ. ಇಡೀ ರಾಜ್ಯಾದ್ಯಂತ 30 ಪ್ರತಿಶತಕ್ಕೂ ಅಧಿಕ ವಿದ್ಯಾರ್ಥಿನಿಯರು ಕಾಲೇಜು ಬಿಟ್ಟಿದ್ದಾರೆ. ಇದು ರಾಜ್ಯದ ಜ್ವಲಂತ ಸಮಸ್ಯೆಯಾಗಲಿದೆ ಎಂದು ಕಾಲೇಜಿನಿಂದ ಟಿಸಿ ಹಿಂಪಡೆದ ಗೌಸಿಯಾ ಕಿಡಿಕಾರಿದ್ದಾರೆ.

ಇದನ್ನು ಓದಿ : Imran Khan Faces Arrest : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಬಂಧನ ಭೀತಿ..?

ಇದನ್ನೂ ಓದಿ : Puneeth Rajkumar name : ಅಭಿಮಾನಿ ಮಗುಗೆ ಅಪ್ಪು ಹೆಸರು, ಸ್ಪೆಶಲ್ ಗಿಫ್ಟ್ : ಶಿವಣ್ಣ,ಆಶ್ವಿನಿ ಕಾರ್ಯಕ್ಕೆ ಶ್ಲಾಘನೆ

Muslim female students who have withdrawn their TC from colleges that do not allow hijab

Comments are closed.