ಟೋಲ್ ಸಂಗ್ರಹಿಸಿದ್ರೂ ಕಾಮಗಾರಿ ಮುಗಿಸದ ನವಯುಗ : ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಕಾಂಗ್ರೆಸ್

0

ಡುಬಿದ್ರಿ : ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿಯ ಕಲ್ಸಂಕ ಸೇತುವೆಯ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಹೆದ್ದಾರಿ ಪ್ರಯಾಣಿಕರು ಟ್ರಾಫಿಕ್ಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಡುಬಿದ್ರೆ ಯಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಸುರತ್ಕಲ್ ನಿಂದ ಕುಂದಾಪುರದ ವರೆಗೆ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪತಗೊಂಡು ಹಲವು ವರ್ಷಗಳೇ ಕಳೆದಿದೆ. ಅಲ್ಲದೇ ಹೆದ್ದಾರಿ ಯಲ್ಲಿ ಸಂಚರಿಸುವ ವಾಹನಗಳಿಂದ ನವಯುಗ ಕಂಪೆನಿ ಟೋಲ್ ಸಂಗ್ರಹಿಸುತ್ತಿದೆ. ಆದರೆ ಹೆದ್ದಾರಿ ಕಾಮಗಾರಿಯನ್ನು ಮಾತ್ರ ಪೂರ್ಣ ಗೊಳಿಸಿಲ್ಲ. ಇದರಿಂದಾಗಿ ಒಂದೆಡೆ ಹೆದ್ದಾರಿ ಸಂಪೂರ್ಣ ಧೂಳುಮಯವಾಗಿದ್ರೆ, ನಿತ್ಯವೂ ಟ್ರಾಫಿಕ್ ಜಾಮ್ ಎದುರಾಗುತ್ತಿದೆ. ಈ ಹಿನ್ನೆಲೆ ಯಲ್ಲೀಗ 15 ದಿನಗಳ ಒಳಗಾಗಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.

ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಮುಂದಿನ ಹದಿನೈದು ದಿನಗಳ ಒಳಗಾಗಿ ಕಾಮಗಾರಿ ಯನ್ನು ಪೂರ್ಣಗೊಳಿಸದಿದ್ದಲ್ಲಿ, ಉಗ್ರ ಹೋರಾಟವನ್ನು ನಡೆಸುವುದಾಗಿಯೂ ಎಚ್ಚರಿಸಿ ದ್ದಾರೆ. ಅಲ್ಲದೇ ಸುರತ್ಕಲ್ ಹಾಗೂ ಹೆಜಮಾಡಿ ಟೋಲ್ ಸಮಸ್ಯೆಯನ್ನು ಕೂಡ ಶೀಘ್ರದಲ್ಲಿಯೇ ಬಗೆ ಹರಿಸುವಂತೆಯೂ ಒತ್ತಾಯಿಸಿದ್ದಾರೆ.

ಅವೈಜ್ಞಾನಿಕ ಟೋಲ್ ಸಂಗ್ರಹ :
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ನವಯುಗ ಕಂಪೆನಿ 2009ರಲ್ಲಿಯೇ ಕಾಮಗಾರಿಯನ್ನು ಕೈಗೆತ್ತಿ ಕೊಂಡಿದ್ದರೂ ಕೂಡ ಇದುವರೆಗೂ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಪಡುಬಿದ್ರೆಯಲ್ಲಿ ಸೇತುವೆ ಕಾಮಗಾರಿ ಬಾಕಿ ಉಳಿಸಿಕೊಂಡಿದ್ರೆ, ಕುಂದಾಫುರ ದಲ್ಲಿ ಪ್ಲೈ ಓವರ್ ಕಾಮಗಾರಿ ಇನ್ನೂ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದಲೂ ಹೆಜಮಾಡಿ ಹಾಗೂ ಗುಂಡ್ಮಿಯಲ್ಲಿ ಟೋಲ್ ಸಂಗ್ರಹ ಮಾಡುತ್ತಿದೆ.

ಟೋಲ್ ಕೊಟ್ಟು ಪ್ರಯಾಣಿಸುವ ಪ್ರಯಾಣಿಕರು ಮಾತ್ರ ಧೂಳನ್ನು ನುಂಗಿಕೊಂಡು,ದುರಸ್ಥಿ ಕಾಣದ ರಸ್ತೆಯಲ್ಲಿಯೇ ಸಾಗಬೇಕಾಗಿದೆ. ಉಡುಪಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ನವಯುಗ ಕಂಪೆನಿಗೆ ಬಿಸಿಮುಟ್ಟಿಸೋ ಕಾರ್ಯವನ್ನು ಮಾಡುತ್ತಿಲ್ಲ.

ನವಯುಗ ಕಂಪೆನಿಯ ಟೋಲ್ ಸಂಗ್ರಹಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಿದ್ರೆ ಕಾಮಗಾರಿ ಶೀಘ್ರವಾಗಿ ಮುಗಿಸುವ ಸಾಧ್ಯತೆಯಿದೆ ಅನ್ನುತ್ತಿದ್ದಾರೆ ಪ್ರಯಾಣಿಕರು.

Leave A Reply

Your email address will not be published.