ಕುಂದಾಪುರದಲ್ಲಿ ಆರಂಭಗೊಳ್ಳಲಿದೆ ಪ್ರಾದೇಶಿಕ ಸಾರಿಗೆ ಕಚೇರಿ..!

ಕುಂದಾಪುರ : ಕರಾವಳಿಯ ಜನತೆಗೆ ರಾಜ್ಯ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ. ಅದ್ರಲ್ಲೂ ಕುಂದಾಪುರ ತಾಲೂಕಿನ ಜನರು ಆರ್ ಟಿಓ ಕೆಲಸಕ್ಕಾಗಿ ಉಡುಪಿಗೆ ಅಲೆಯೋದು ಸದ್ಯದಲ್ಲಿಯೇ ತಪ್ಪಲಿದೆ. ಯಾಕೆಂದ್ರೆ ಕುಂದಾಪುರದಲ್ಲ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭಿಸಲು ಸರಕಾರ ಮುಂದಾಗಿದೆ.

ವಿಧಾನ ಮಂಡಲ ಅಧಿವೇಶನದ ಪ್ರಶ್ನೋತ್ತರ ಅವಯಲ್ಲಿ ಶಾಸಕ ಶಿವಕುಮಾರ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು, ಉಡುಪಿ ಜಿಲ್ಲೆಯಲ್ಲಿ ಒಂದೇ ಪ್ರಾದೇಶಿಕ ಸಾರಿಗೆ ಕಚೇರಿ ಇರುವುದರಿಂದ ದೂರದ ಬೈಂದೂರು ಮತ್ತು ಕುಂದಾಪುರ ತಾಲ್ಲೂಕಿನ ಸಾರ್ವಜನಿಕರ ದೈನಂದಿನ ವ್ಯವಹಾರಗಳಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಅಕಾರಿಗಳ ಸಭೆ ಕರೆಯುವುದಾಗಿ ತಿಳಿಸಿದ್ದಾರೆ.

ಕುಂದಾಪುರ ಅಥವಾ ಬೈಂದೂರು ತಾಲೂಕುಗಳಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಾಪನೆ ಮಾಡಲು ಹಣಕಾಸಿನ ಸಮಸ್ಯೆಯಿದ್ದು, ಕೊರೊನಾ ನಂರದಲ್ಲಿ ಸರಕಾರ ಯಾವುದೇ ಹೊಸ ಯೋಜನೆಗಳನ್ನು ಆರಂಭಿಸದಂತೆ ಆರ್ಥಿಕ ಇಲಾಖೆ ಸಲಹೆ ನೀಡಿದೆ. ಆದರೆ ಕುಂದಾಪುರ ಮತ್ತು ಬೈಂದೂರಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿ ಮಂಗಳವಾರ ಇಲಾಖೆ ವತಿಯಿಂದ ಶಿಬಿರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಅದನ್ನು ಮುಂದುವರೆಸುವುದಾಗಿ ಸವದಿ ತಿಳಿಸಿದ್ದಾರೆ.

Comments are closed.