Rescue of tourists: ಗೋಕರ್ಣ ಬೀಚ್ ನಲ್ಲಿ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರ ರಕ್ಷಣೆ

ಗೋಕರ್ಣ: (Rescue of tourists) ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬೀಚ್ ನಲ್ಲಿ ನಡೆದಿದೆ. ಪ್ರವಾಸಿಗರ ರಕ್ಷಣೆ ಮಾಡಿದ ಸ್ಥಳಿಯರಿಗೆ ಪ್ರವಾಸಿಗರ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

ಹೊಸ ವರ್ಷಕ್ಕಿನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಜೊತೆಗೆ ಕ್ರಿಸ್ಮಸ್ ಹಿನ್ನೆಲೆ ಸಾಲು ಸಾಲು ರಜೆ. ಈ ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಗೋಕರ್ಣ, ಮುರುಡೇಶ್ವರ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಹೀಗೆ ಧಾರವಾಡದಿಂದ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಗೋಕರ್ಣ ಬೀಚ್ ನಲ್ಲಿ ಆಟವಾಡುತ್ತಿದ್ದರು. ಈ ವೇಳೆಯಲ್ಲಿ ಇಬ್ಬರು ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದರು. ಕೂಡಲೇ ಸ್ಥಳೀಯರು ನೀರಿಗೆ ಇಳಿದು ಇಬ್ಬರು ಪ್ರವಾಸಿಗರನ್ನು ರಕ್ಷಣೆ (Rescue of tourists) ಮಾಡಿದ್ದಾರೆ.

ಧಾರವಾಡ ಮೂಲದ ಸಿದ್ದಲಿಂಗ ಹಾಗೂ ನಿತೇಶ್‌ ಎಂಬವರೇ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರು. ಸಮುದ್ರ ಪಾಲಾಗುತ್ತಿದ್ದವರನ್ನು ರಕ್ಷಣೆ ಮಾಡಿದ ಸ್ಥಳೀಯರಿಗೆ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ. ಇನ್ನು ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಪ್ರವಾಸಿಗಳಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಹೀಗೆ ಬರುತ್ತಿರುವ ಪ್ರವಾಸಿಗರ ರಕ್ಷಣೆಗೆ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ.

ಇದನ್ನೂ ಓದಿ : Surathkal Section 144 : ಸುರತ್ಕಲ್ ನಲ್ಲಿ ಚಾಕು ಇರಿದು ವ್ಯಕ್ತಿ ಕೊಲೆ : ಸೆಕ್ಷನ್‌ 144 ಜಾರಿ

ಇದನ್ನೂ ಓದಿ : Surathkal Stab : ಸುರತ್ಕಲ್ ನಲ್ಲಿ ಯುವಕನಿಗೆ ಚಾಕು ಇರಿತ : ಕರಾವಳಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ

ಇದನ್ನೂ ಓದಿ : Belthangadi accident: ಕೈಕೊಟ್ಟ ಬ್ರೇಕ್‌ : ಶಬರಿಮಲೆ ಯಾತ್ರಾರ್ಥಿಗಳ ಬಸ್‌ ಗೆ ಅಪಘಾತ

ಇದನ್ನೂ ಓದಿ : Guruvappa Bayaru : ರಂಗಸ್ಥಳದಲ್ಲೇ ಹೃದಯಾಘಾತ : ಕಟೀಲು ಮೇಳದ ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು ವಿಧಿವಶ

(Rescue of tourists) The incident of rescuing two tourists who were washed away by the sea wave took place at Gokarna Beach in Uttara Kannada district. The families of the tourists thanked the locals for protecting the tourists.

Comments are closed.