Coastal rushed from tourists: ಕೊರೊನಾ ಏರಿಕೆ ಭೀತಿಯ ನಡುವಲ್ಲೇ ಕರಾವಳಿಗೆ ಹರಿದು ಬಂತು ಪ್ರವಾಸಿಗರ ದಂಡು

ಉತ್ತರ ಕನ್ನಡ: (Coastal rushed from tourists) ಇನ್ನೇನು ಹೊಸ ವರ್ಷ ಸಮೀಪಿಸುತ್ತಿದೆ. ಹೊಸ ವರ್ಷದ ಆಚರಣೆಗೆ ಎಲ್ಲೆಡೆ ಸಿದ್ದತೆ ಜೋರಾಗಿದೆ. ಆದರೆ ಹೊಸ ವರ್ಷದ ಸಂಭ್ರಮಾಚರಣೆಗೆ ಕೊರೊನಾ ಆತಂಕ ಪ್ರಾರಂಭವಾಗಿದ್ದು, ಕೊರೊನಾ ತಡೆಗೆ ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಲಿದ್ದು, ಕೊರೊನಾ ಏರಿಕೆ ಭೀತಿ ನಡುವೆಯೂ ಕರಾವಳಿಯತ್ತ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಇದೀಗ ನಾಡಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮನೆ ಮಾಡಿದ್ದು, ಸಂಭ್ರಮಾಚರಣೆಗೆ ಕೊರೊನಾ ತಡೆಯೊಡ್ಡುತ್ತಿದೆ. ರಾಜ್ಯದಲ್ಲಿ ಕೊರೊನಾ ಅತಂಕ ಮನೆ ಮಾಡಿದ್ದು, ಕೊರೊನಾ ತಡೆಗೆ ನಾಳೆ ಮಹತ್ವದ ಸಭೆ ಕೂಡ ನಡೆಯಲಿದೆ. ಸಚಿವ ಅರ್.‌ ಅಶೋಕ್‌ ಹಾಗೂ ಎಮ್.‌ ಸುಧಾಕರ್‌ ನೇತ್ರತ್ವದಲ್ಲಿ ಕೊರೊನಾ ತಡೆಗೆ ನಿರ್ಣಾಯಕ ಸಭೆ ನಡೆಯಲಿದ್ದು, ಬೆಂಗಳೂರು ಹಾಗೂ ರಾಜ್ಯಕ್ಕೆ ಪ್ರತ್ಯೇಕ ರೂಲ್ಸ್‌ ಜಾರಿಯಾಗುವ ಸಾಧ್ಯೆತೆಯಿದೆ. ಇದರ ನಡುವೆಯೂ ಪ್ರವಾಸಿಗರು ಪ್ರವಾಸಿತಾಣಗಳಿಗೆ ಬೇಟಿ ನೀಡುತ್ತಿದ್ದಾರೆ. ಮುರುಡೇಶ್ವರ ಹಾಗೂ ಗೋಕರ್ಣದಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿದ್ದು, ಜನಸಾಗರವೇ ತುಂಬಿ (Coastal rushed from tourists) ಹೋಗಿದೆ. ಪ್ರವಾಸಿಗರ ದಂಡು ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಹೋಮ್ ಸ್ಟೇ, ರೆಸಾರ್ಟ್‌ ಹಾಗೂ ಹೋಟೆಲ್‌ ಗಳಲ್ಲಿ ಪ್ರತಿದಿನಕ್ಕಿಂದ ಮೂರು ಶೇಕಡಾದಷ್ಟು ಹೆಚ್ಚಿಗೆ ದರ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಹೋರಾಟ ನಡೆಸುತ್ತಿರುವ ವೇಳೆಯಲ್ಲಿ, ಯಾವುದೇ ಆತಂಕವಿಲ್ಲದೆ ಪ್ರವಾಸಿಗರು ಬೀಚ್‌ ನಲ್ಲಿ ಸಂಭ್ರಮಿಸುತ್ತಿದ್ದಾರೆ. ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೊಂಕು ಹೆಚ್ಚಾಗುವ ಆತಂಕ ಹೆಚ್ಚಾಗುತ್ತಿದ್ದು, ಇದೀಗ ಪ್ರವಾಸಿಗರು ಈ ರೀತಿಯಾಗಿ ಕರಾವಳಿ ಪ್ರದೇಶಕ್ಕೆ ಹರಿದು ಬರುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಉತ್ತರ ಕರ್ನಾಟಕದ ಗೋಕರ್ಣ ಹಾಗೂ ಮುರುಡೇಶ್ವರ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಇಲ್ಲಿನ ಬೀಚ್‌ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಪ್ರತಿವರ್ಷ ಹೊಸ ವರ್ಷದ ಆಚರಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಿದ್ದು, ಇಲ್ಲಿ ಪ್ರತಿದಿನ ಜನಸಾಗರ ತುಂಬಿರುತ್ತದೆ.

ಇದನ್ನೂ ಓದಿ : Rescue of tourists: ಗೋಕರ್ಣ ಬೀಚ್ ನಲ್ಲಿ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರ ರಕ್ಷಣೆ

(Coastal rushed from tourists) New Year is approaching. Preparations for the New Year celebration are in high gear everywhere. But for the New Year celebrations, the Corona fear has started, an important meeting will be held in Bangalore tomorrow to prevent Corona, and despite the fear of Corona, tourists are flocking to the coast.

Comments are closed.