Modi’s arrival in Mangalore : ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಮಂಗಳೂರಿನಲ್ಲಿ ಕಾಟಾಚಾರದ ರಸ್ತೆ ದುರಸ್ಥಿ ಕಾರ್ಯ : ಸಾರ್ವಜನಿಕರಿಂದ ವ್ಯಂಗ್ಯ

ಮಂಗಳೂರು : Prime Minister Modi’s arrival in Mangalore : ಸೆಪ್ಟೆಂಬರ್​ 2ರಂದು ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ರಸ್ತೆ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ. ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಿಗೆ ಇಂದು ಕಾಟಾಚಾರದ ಡಾಂಬರೀಕರಣ ಮಾಡಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೂಳೂರು ರಸ್ತೆಯವರೆಗೂ ರಸ್ತೆ ರಿಪೇರಿ ಕಾರ್ಯವನ್ನು ಮಾಡಲಾಗಿದೆ.

ಅಲ್ಲದೇ ಈ ಮಾರ್ಗದ ಕೆಲವು ಕಡೆಗಳಲ್ಲಿ ಇಂದು ರಸ್ತೆ ಅಗಲೀಕರಣ ಕಾರ್ಯವನ್ನೂ ಮಾಡಲಾಗಿದೆ. ಒಂದು ಕಡೆ ಮಳೆ ನೀರು ರಸ್ತೆಯಲ್ಲಿ ನಿಂತಿದೆ. ಆದರೆ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಆತುರಾತುರವಾಗಿ ಅತ್ಯಂತ ಕಳಪೆ ಮಟ್ಟದ ರಸ್ತೆ ದುರಸ್ತಿ ಕಾರ್ಯವನ್ನು ನೆರವೇರಿಸಲಾಗಿದೆ. ಪ್ರಧಾನಿ ಮೋದಿ ಕೇರಳದಿಂದ ವಿಮಾನ ಅಥವಾ ಹೆಲಿಕಾಪ್ಟರ್​ ಮೂಲಕ ಮಂಗಳೂರಿಗೆ ಬರುವ ಸಾಧ್ಯತೆಯಿದೆ.

ಪ್ರಧಾನಿ ಮೋದಿ ರಸ್ತೆ ಮಾರ್ಗಕ್ಕೆ ಯಾವುದನ್ನು ಆಯ್ಕೆ ಮಾಡುತ್ತಾರೆ ಎಂಬುದು ಇನ್ನೂ ನಿಶ್ಚಯವಾಗಿಲ್ಲ. ಆದರೂ ಸಹ ಆತುರಾತುರವಾಗಿ ಡಾಂಬರೀಕರಣ ಕಾರ್ಯವನ್ನು ಮಾಡಲಾಗಿದೆ. ಕಳೆದೊಂದು ವರ್ಷದಿಂದ ಈ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿತ್ತು.ಹೀಗಾಗಿ ಕಾರ್ಮಿಕರು ಮಣ್ಣಿನ ಮೇಲೆಯೇ ಡಾಂಬರನ್ನು ಹಾಕುವ ಮೂಲಕ ಹದಗೆಟ್ಟಿದ್ದ ರಸ್ತೆಗಳಿಗೆ ತೇಪೆ ಹಚ್ಚುವ ಕಾರ್ಯವನ್ನು ಮಾಡ್ತಿದ್ದಾರೆ.

ಆದರೆ ಈ ರೀತಿ ಕಾಟಾಚಾರಕ್ಕೆ ರಸ್ತೆ ಡಾಂಬರೀಕರಣ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಈಗಾಗಲೇ ಈ ರಸ್ತೆ ಗುಂಡಿಗಳಿಂದಾಗಿ ಉಂಟಾದ ಅಪಘಾತಗಳಿಂದ ಸಾಕಷ್ಟು ಜನ ಮೃತಪಟ್ಟಿದ್ದಾರೆ. ಪ್ರತಿನಿತ್ಯ ರಸ್ತೆ ಗುಂಡಿಗಳಿಂದ ಉಂಟಾಗುವ ಅಪಘಾತದಿಂದ ಅನೇಕರು ಗಾಯಗೊಂಡು ಆಸ್ಪತ್ರೆಗೆ ಸೇರುತ್ತಿದ್ದಾರೆ. ಆದರೆ ಆಗ ಮಾಡದ ದುರಸ್ಥಿ ಕಾರ್ಯವನ್ನು ಇಂದು ಮಾಡುತ್ತಿದ್ದಾರೆ. ಮಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಅಂದರೆ ಪ್ರಧಾನಿಯೇ ಬರಬೇಕಾಯ್ತು .ಮೋದಿ ಮಂಗಳೂರಿನಿಂದ ವಾಪಸ್ಸಾಗುತ್ತಿದ್ದಂತೆಯೇ ಈ ಡಾಂಬರುಗಳನ್ನು ಕಿತ್ತು ಬರುವ ಸಾಧ್ಯತೆಯಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನು ಓದಿ : snake crawled : ಮಲಗಿದ್ದ ಮಹಿಳೆಯ ಮೈ ಮೇಲೆ ಹೆಡೆಯೆತ್ತಿದ್ದ ಸರ್ಪ : ಎದೆ ಝಲ್​ ಎನ್ನಿಸುತ್ತೆ ಈ ವಿಡಿಯೋ

ಇದನ್ನೂ ಓದಿ : Muruga Shri Swamiji : ಮುರುಘಾ ಶ್ರೀಗಳಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಕೃತ್ಯದ ಮಾಹಿತಿ ಎಳೆಎಳೆಯಾಗಿ ಬಿಚ್ಚಿಟ್ಟ ಒಡನಾಡಿ ಸಂಸ್ಥೆ

Road repair work on the background of Prime Minister Modi’s arrival in Mangalore

Comments are closed.