IGP Devajyoti Ray : ಸಂತೋಷ್‌ ಆತ್ಮಹತ್ಯೆ ಪ್ರಕರಣ, ಎಲ್ಲಾ ಆಯಾಮದಲ್ಲಿಯೂ ತನಿಖೆ : ಪಶ್ಚಿಮ ವಲಯ ಐಜಿಪಿ

ಉಡುಪಿ : ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆಯನ್ನು ನಡೆಸಲಾಗುತ್ತಿದೆ. ಸಂತೋಷ್‌ ಪಾಟೀಲ್‌ ಸಹೋದರರು ನೀಡಿದ ದೂರಿನ ಆಧಾರದ ಮೇಲೆ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಇಬ್ಬರು ಆಪ್ತರ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗಿದೆ ಎಂದು ಪಶ್ವಿವಲಯ ಐಜಿಪಿ ದೇವ ಜ್ಯೋತಿ ರೇ ಹೇಳಿದ್ದಾರೆ.

ಉಡುಪಿಗೆ ಭೇಟಿ ನೀಡಿದ್ದ ಐಜಿಪಿ ದೇವ ಜ್ಯೋತಿ ರೇ ಅವರು ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್‌ಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ನಂತರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂತೋಷ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕೆಲವೇ ಕ್ಷಣಗಳಲ್ಲಿ ಪಂಚನಾಮೆ ಪ್ರಕ್ರಿಯೆಯನ್ನು ಆರಂಭಿಸುತ್ತೇವೆ. ಹತ್ತಿರದ ಸಂಬಂಧಿಕರ ಮುಂಭಾಗದಲ್ಲಿಯೇ ಎಲ್ಲಾ ಪರಿಶೀಲನೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಸಂತೋಷ್‌ ಪಾಟೀಲ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ದೂರಿನ ಪ್ರಕಾರ ಕೆಎಸ್ ಈಶ್ವರಪ್ಪ ಮತ್ತು ಇಬ್ಬರು ಆಪ್ತರ ಮೇಲೆ ಎಫ್ ಐಆರ್ ದಾಖಲು ಮಾಡಿದ್ದೇವೆ. ಡಿಜಿಟಲ್ ಮತ್ತು ಸಾಂದರ್ಭಿಕ ಸ್ಥಳದಲ್ಲಿ ಇರುವ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದೇವೆ. ಕೆಎಂಸಿ ಮತ್ತು ಮಂಗಳೂರಿನ ಫೋರೆನ್ಸಿಕ್ ತಜ್ಞರ ಮೂಲಕ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ.

ಆರಂಭದಲ್ಲಿ ಸಂತೋಷ್‌ ಸಾವಿನ ಪ್ರಕರಣವನ್ನು ಅಸಹಜ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದೇವು. ಆದರೆ ನಂತರದಲ್ಲಿ ದಾಖಲಾದ ದೂರಿನ ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರರಕಣ ದಾಖಲಾಗಿದೆ. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಇನ್ನೂ 3 ರಿಂದ 4 ಗಂಟೆಗಳ ಕಾಲಾವಕಾಶ ಬೇಕಾಗಲಿದೆ. ಸಂತೋಷ್‌ ಕುಟುಂಬಸ್ಥರು ಸಾಕಷ್ಟು ನೊಂದಿದ್ದಾರೆ. ಅವರು ಬೇಸರದಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯಲ್ಲಿಯೂ ಸೂಕ್ತ ತನಿಖೆಯನ್ನು ನಡೆಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ : ಸಂತೋಷ್‌ ಪಾಟೀಲ್‌ ಆತ್ಮಹತ್ಯೆ : ಸಚಿವ ಕೆ.ಎಸ್.‌ ಈಶ್ವರಪ್ಪ ವಿರುದ್ದ ಉಡುಪಿಯಲ್ಲಿ ಪ್ರಕರಣ ದಾಖಲು

ಇದನ್ನೂ ಓದಿ: KS Eshwarappa: ಇಂದೇ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ : ಬಿಜೆಪಿ ಹೈಕಮಾಂಡ್‌ನಿಂದ ಖಡಕ್‌ ವಾರ್ನಿಂಗ್‌

Santosh suicide case, investigation in all dimensions Says IGP Devajyoti Ray

Comments are closed.