ಮಂದಾರ್ತಿ ಮೇಳದಿಂದ ಕಾಲಮಿತಿ ಯಕ್ಷಗಾನ ಸೇವೆ : ಆಡಳಿತ ಮಂಡಳಿ ಆದೇಶ

ಮಂದಾರ್ತಿ: (Time limit Yakshagana service) 2022-23 ನೇ ಸುಪ್ರೀಂ ಕೋರ್ಟ್‌ ತೀರ್ಪಿನನ್ವಯ ಧ್ವನಿ ವರ್ಧಕ ಕಾಲಮಿತಿ ಇರುವುದರಿಂದ ಮಂದಾರ್ತಿ ದೇವಸ್ಥಾನದ ವತಿಯಿಂದ ನಡೆಸಲ್ಪಡುವ ಯಕ್ಷಗಾನ ಮೇಳಗಳ ಸೇವೆ ಆಟವನ್ನು ಕಾಲಮಿತಿಗೊಳಿಸಿ ದೇವಸ್ಥಾನ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

2022-23 ನೇ ಸಾಲಿನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನನ್ವಯ ಧ್ವನಿ ವರ್ಧಕ ಬಳಕೆ ಕಾಲಮಿತಿ ಇರುವ ಕಾರಣ ಮಂದಾರ್ತಿ ದೇವಾಲಯದ ಆಡಳಿತ ಮಂಡಳಿಯವರು ತೀರ್ಮಾನಿಸಿ ಯಕ್ಷಗಾನ ಸೇವೆ ಆಟವನ್ನು ಕಾಲಮಿತಿಗೊಳಪಡಿಸಿದ್ದು, ಸೇವಾರ್ಥಿಗಳ ಯಕ್ಷಗಾನ ಸೇವೆ ಆಟವನ್ನು ಪ್ರತಿ ದಿನ ಸಂಜೆ 6:30 ಕ್ಕೆ ಗಣಪತಿ ಪೂಜೆಯೊಂದಿಗೆ ಪ್ರಾರಂಭಿಸಿ ರಾತ್ರಿ ಗಂಟೆ 1:00 ರಿಂದ 1:30 ರವರೆಗೆ (ಶ್ರೀ ದೇವಿ ಮಹಾತ್ಮೆ ಪ್ರಸಂಗದ ದಿನದಲ್ಲಿ ಕಡ್ಡಾಯವಾಗಿ ದೇವಿ ಪ್ರವೇಶದಿಂದ ಸಂಪೂರ್ಣ ಕತೆಯೊಂದಿಗೆ ಗಂಟೆ 1:30 ರ ತನಕ) ಕಡ್ಡಾಯವಾಗಿ ಸೇವೆ ಆಟವನ್ನು ಪೂರೈಸಲು ಆಡಳಿತ ಮಂಡಳಿ ಆದೇಶಿಸಿದೆ.

ರಾತ್ರಿಯಿಂದ ಬೆಳಗಿನವರೆಗೆ ನಡೆಯುತ್ತಿದ್ದ ಯಕ್ಷಗಾನಗಳು ಕಾಲಮಿತಿಯಲ್ಲಿ ಪ್ರದರ್ಶನ ಕಾಣಬೇಕಾದ ಅನಿವಾರ್ಯತೆಗೆ ಸಿಲುಕಿದ್ದು, ಕಲಾಪ್ರೇಮಿಗಳಿಗೆ ಹಾಗೂ ಕಲಾವಿದರಿಗೆ ಇದೊಂದು ದುಃಖದ ಸಂಗತಿ. ಈಗಾಗಲೇ ತೆಂಕುತಿಟ್ಟು ಬಡಗುತಿಟ್ಟಿನ ಹಲವು ಮೇಳಗಳು ಕಾಲಮಿತಿ ಪ್ರದರ್ಶನಗಳನ್ನೂ ನೀಡುತ್ತಿದ್ದಾರೆ. ಕಾಲಮಿತಿಯ ಪ್ರದರ್ಶನ ಕೆಲ ಮೇಳಗಳ ಮೇಲೆ ಹಾಗೂ ಕಲೆಯ ಮೇಲೆ ಒಂದು ರೀತಿಯಲ್ಲಿ ಹೊಡೆತ ಬಿದ್ದಿದೆ.

ಅನಿವಾರ್ಯ ಕಾರಣಗಳು ಹಾಗೂ ಸಾಂದರ್ಭಿಕವಾದ ಕಾಲಮಿತಿ ಪ್ರದರ್ಶನಗಳನ್ನು ಮೇಳಗಳು ನೀಡಬೇಕಾಗಿದ್ದು,ಇದು ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಈಗಾಗಲೇ ಯಕ್ಷಗಾನ ಒಂದೊಂದೆ ನೈಜತೆಯನ್ನು ಕಳೆದುಕೊಂಡಿದ್ದು, ಕಾಲಮಿತಿ ಎನ್ನುವುದು ಅನೇಕ ಅಂಶಗಳು ಮರೆಯಾಗಲು ಕಾರಣವಾಗುತ್ತದೆ. ಬಾಲ ಕಲಾವಿದರಿಗೆ ಪಾಠವಾಗಿ ಕೋಡಂಗಿ ವೇಷಗಳೂ ಈಗ ಮರೆಯಾಗಿದೆ. ಅದಕ್ಕಾಗಿ ಬಾಲ ಕಲಾವಿದರ ಲಭ್ಯತೆಯೂ ಇಲ್ಲ. ಹೀಗಾಗಿ ಬಾಲಗೋಪಾ, ಪೀಠಿಕಾ ಸ್ತ್ರೀವೇಷ ಒಟ್ಟೋಲಗಗಳು ಪೂರ್ಣವಾಗಿ ಮರೆಯಾಗುವ ಆತಂಕವಿದೆ.

ಇದನ್ನೂ ಓದಿ : Sri Mookambika Temple Kollur : ಕೊಲ್ಲೂರಿನ ಶ್ರೀ ಕ್ಷೇತ್ರ ಮೂಕಾಂಬಿಕೆಗೆ ನೂತನ ರಥ ಸಮರ್ಪಣೆ

ಮಂದಾರ್ತಿ ಮೇಳಗಳ ಮಳೆಗಾಲದ ಹರಕೆ ಸೇವೆಗಳು ಈಗಾಗಲೇ ಕಾಲಮಿತಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಹರಕೆ ಮೇಳಗಳು ಪೂರ್ಣ ರಾತ್ರಿ ಪ್ರದರ್ಶನಗಳನ್ನು ನೀಡಬೇಕು ಎನ್ನುವುದು ಸಂಪ್ರದಾಯವಾದಿ ಪ್ರೇಕ್ಷಕರ ಅಭಿಪ್ರಾಯವಾದರೂ ಕಾಲಕ್ಕೆ ಹಾಗೂ ತೀರ್ಪಿಗೆ ತಕ್ಕ ಹಾಗೆ ಬದಲಾಗಬೇಕಾದ ಅನಿವಾರ್ಯತೆಯನ್ನು ತಳ್ಳಿ ಹಾಕುವ ಹಾಗಿಲ್ಲ.

Time limit Yakshagana service: Time limit Yakshagana service by Mandarthi Mela: Board of Directors order

Comments are closed.